ETV Bharat / state

ರಮೇಶ್‌ಗೌಡ ಮೃತ ದೇಹ ಬಂದ ನಂತರ ಕ್ರಮ : ಎಸ್ಪಿ ಕೋ. ನ ವಂಶಿ ಕೃಷ್ಣ ಹೇಳಿಕೆ

ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣ. ರಮೇಶ್ ಗೌಡ ಮನೆಗೆ ಪೊಲೀಸ್ ಅಧಿಕಾರಿಗಳ ಭೇಟಿ. ಮೃತ ದೇಹ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿಕೆ.

author img

By

Published : Apr 22, 2019, 5:46 PM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋ ನ ವಂಶಿ ಕೃಷ್ಣ

ತುಮಕೂರು: ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ರಾಜ್ಯದ ಏಳು ಮಂದಿ ಮೃತಪಟ್ಟಿರುವ ಬಗ್ಗೆ ವಿದೇಶಾಂಗ ಸಚಿವರು ಟ್ವಿಟರ್‌​ನಲ್ಲಿ ದೃಢಪಡಿಸಿದ್ದು, ಅದರಲ್ಲಿ ತುಮಕೂರಿನ ಸರಸ್ವತಿ ಪುರಂ ಬಡಾವಣೆಯಲ್ಲಿ ವಾಸವಾಗಿದ್ದ ಲಕ್ಷ್ಮೆಗೌಡ ರಮೇಶ್ ಕೂಡ ಒಬ್ಬರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋ.ನ ವಂಶಿ ಕೃಷ್ಣ ಹೇಳಿದ್ದಾರೆ.

ಲಕ್ಷ್ಮೆಗೌಡ ರಮೇಶ್‌ ಕುಣಿಗಲ್​ನವರಾಗಿದ್ದು, ಲಿಕ್ಕರ್ ಉದ್ಯಮಿ ಎಂದು ತಿಳಿದುಬಂದಿದೆ. ಅವರು, ನೆಲಮಂಗಲದ ಸ್ನೇಹಿತರ ಜೊತೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋ. ನ ವಂಶಿ ಕೃಷ್ಣ

ಇನ್ನೂ ಮೃತದೇಹ ಬರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ. ಚೀಫ್ ಎಫ್ಆರ್​ಒ ಆಫೀಸರ್​ಗಳ ಮುಖಾಂತರ ಮಾಹಿತಿ ಪಡೆಯಬೇಕಿದೆ. ಸದ್ಯ ಐಜಿ ಕಚೇರಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಎಲ್ಲಾ ಪ್ರೊಸಿಜರ್ ಮುಗಿದ ಬಳಿಕ ಮೃತದೇಹ ತರಲಾಗುತ್ತೆ. ಆ ಸಂಧರ್ಭದಲ್ಲಿ ಪೊಲೀಸ್ ಭದ್ರತೆ ನೀಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಬೆಂಗಳೂರಿನಿಂದ ಹಿರಿಯ ಪೊಲೀಸ್ ಅಧಿಕಾರಿಗಳ ಕರೆ ಮೇರೆಗೆ ಕೆಲ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ರಮೇಶ್ ಗೌಡ ಸಹೋದರ ಪ್ರಕಾಶ್ ತಿಳಿಸಿದ್ದಾರೆ.

ರಮೇಶ್ ಗೌಡ ಮನೆಗೆ ಪೊಲೀಸ್ ಅಧಿಕಾರಿಗಳು ಭೇಟಿ:

ಬಾಂಬ್ ಬ್ಲಾಸ್ಟ್​ನಲ್ಲಿ ರಮೇಶ್​ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ತುಮಕೂರಿನ ಸರಸ್ವತಿಪುರಂನಲ್ಲಿರುವ ಅವರ ಮನೆಗೆ ಡಿವೈಎಸ್ಪಿ ತಿಪ್ಪೇಸ್ವಾಮಿ ಭೇಟಿ ನೀಡಿ ಕುಟುಂಬದ ಮಾಹಿತಿ ಕಲೆ ಹಾಕಿದರು.

Intro:ರಮೇಶ್ ಗೌಡ ಮೃತ ದೇಹ ಬಂದ ನಂತರ ಕ್ರಮ...
ಎಸ್ಪಿ ಕೋ ನ ವಂಶಿ ಕೃಷ್ಣ ಹೇಳಿಕೆ.....

ತುಮಕೂರು
ಶ್ರೀಲಂಕಾ ಕೊಲಂಬೋದಲ್ಲಿ ನಿನ್ನೆ ನಡೆದ ಬಾಂಬ್ ಸ್ಪೋಟದ ಲ್ಲಿ ರಾಜ್ಯದ ಏಳು ಮಂದಿ ಮೃತ್ಪಟ್ಟಿರುವ ಬಗ್ಗೆ ವಿದೇಶಾಂಗ ಸಚಿವರು ಟ್ವೀಟ್ ನಲ್ಲಿ ಹೇಳಿದ್ದು, ಅದ್ರಲ್ಲಿ ತುಮಕೂರಿನ ಸರಸ್ವತಿ ಪುರಂ ಬಡಾವಣೆಯಲ್ಲಿ ವಾಸವಾಗಿದ್ದು ಲಕ್ಷ್ಮೆಗೌಡ ರಮೇಶ್ ಎಂಬವರಾಗಿದ್ದಾರೆ. ಮೂಲತಃ ಕುಣಿಗಲ್ ನವರಗಿದ್ದರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋ ನ ವಂಶಿ ಕೃಷ್ಣ ಹೇಳಿದ್ದಾರೆ.
ಪತ್ರಕರ್ತ ರೊಂದಿಗೆ ಮಾತನಾಡಿ,
ರಮೇಶ್ ಗೌಡ ಲಿಕ್ಕರ್ ಉದ್ಯಮಿ ಎಂದು ಗೊತ್ತಾಗಿದೆ‌‌‌‌‌. ನೆಲಮಂಗಲ ದ ಸ್ನೇಹಿತರ ಜೊತೆ ಶ್ರೀಲಂಕಾಗೆ ಪ್ರವಾಸಕ್ಕೆ ತೆರಳಿದ್ರು ಎಂಬ ಮಾಹಿತಿ ಇದೆ ಎಂದರು.

ಮೃತದೇಹ ಬರೋ ಬಗ್ಗೆ ಇನ್ನೂ ಖಚಿತ ಮಾಹಿತಿ ಬರಬೇಕಿದೆ.
ಚೀಫ್ ಎಫ್ ಆರ್ ಓ ಆಫೀಸರ್ ಗಳ ಮುಖಾಂತರ ಮಾಹಿತಿ ಪಡೆಯಬೇಕಿದೆ.

ಎಲ್ಲಾ ಪ್ರೋಸೀಜರ್ ಮುಗಿದ ಬಳಿಕ ಮೃತದೇಹ ಬರುತ್ತೆ.
ಅವರ ಮೃತದೇಹ ಬಂದ ಸಂಧರ್ಭದಲ್ಲಿ ಎಲ್ಲಾ ಪೊಲೀಸ್ ಭದ್ರತೆ ನಾವು ಮಾಡ್ತೇವೆ.
ಐಜಿ ಕಚೇರಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.Body:ತುಮಕೂರುConclusion:

For All Latest Updates

TAGGED:

Tumakuru
ETV Bharat Logo

Copyright © 2024 Ushodaya Enterprises Pvt. Ltd., All Rights Reserved.