ETV Bharat / state

ಬೆಳಗಾವಿ ಜಿಲ್ಲೆ ವಿಭಜನೆ ಕಗ್ಗಂಟು: ದಸರಾ ಬಳಿಕ ಸಭೆ ಎಂದ ಸಚಿವೆ ಹೆಬ್ಬಾಳ್ಕರ್ - Belagavi District Division Issue - BELAGAVI DISTRICT DIVISION ISSUE

ಜೆ.ಎಚ್.ಪಟೇಲ್ ಸಿಎಂ ಆಗಿದ್ದಾಗ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಭಜಿಸಿ ಆದೇಶಿಸಿದ್ದರು. ಕೊನೆಗೆ ತೀವ್ರ ಪ್ರತಿಭಟನೆ ಹಾಗೂ ಎಲ್ಲರ ಒತ್ತಡಕ್ಕೆ ಮಣಿದು ಪಟೇಲರು ತಮ್ಮ ಆದೇಶವನ್ನು ವಾಪಸ್ ಪಡೆದಿದ್ದರು.

ಬೆಳಗಾವಿ ಕೇಂದ್ರ ಬಿಂದು
ಬೆಳಗಾವಿ ಕೇಂದ್ರ ಬಿಂದು (ETV Bharat)
author img

By ETV Bharat Karnataka Team

Published : Oct 4, 2024, 9:53 PM IST

ಬೆಳಗಾವಿ: ಭೌಗೋಳಿಕವಾಗಿ ಅಂದಾಜು ಸಿಂಗಾಪುರದಷ್ಟು ವ್ಯಾಪ್ತಿ ಹೊಂದಿರುವ ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿ. ರಾಜಕೀಯವಾಗಿ ಅತ್ಯಂತ ಪ್ರಭಾವಿ ಜಿಲ್ಲೆ ಕೂಡ ಹೌದು. ಒಂದು ಸರ್ಕಾರ ಪತನಗೊಳಿಸಿ, ಮತ್ತೊಂದು ಸರ್ಕಾರ ಅಧಿಕಾರಕ್ಕೆ ತರುವಷ್ಟು ಇಲ್ಲಿನ ನಾಯಕರು ಪವರ್‌ಫುಲ್. ಅದನ್ನು ಅನೇಕ ಬಾರಿ ಸಾಬೀತುಪಡಿಸಿದ್ದಾರೆ ಕೂಡಾ. ಆದರೆ, ಜಿಲ್ಲಾ ವಿಭಜನೆ ಕಗ್ಗಂಟು ಪರಿಹರಿಸಲು ಮಾತ್ರ ಯಾರ ಕೈಯಲ್ಲೂ ಆಗಿಲ್ಲ. ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದ್ದು, ದಸರಾ ಬಳಿಕ ಸಿಎಂ ಭೇಟಿಗೆ ಸಚಿವರು, ಶಾಸಕರು ಮುಂದಾಗಿದ್ದಾರೆ‌.

ಬೆಳಗಾವಿ ಜಿಲ್ಲೆ 13,415 ಚದರ ಕಿ.ಮೀ.ವಿಸ್ತೀರ್ಣ, 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. 18 ವಿಧಾನಸಭೆ, 3 ಲೋಕಸಭೆ ಕ್ಷೇತ್ರದ ವ್ಯಾಪ್ತಿ ಇದೆ. 15 ತಾಲೂಕು, 6 ಆರ್​ಟಿಒ ಕಚೇರಿ, 506 ಗ್ರಾ.ಪಂ., 345 ತಾಲೂಕು ಪಂಚಾಯಿತಿ ಸದಸ್ಯರು, 90 ಜಿ.ಪಂ. ಸದಸ್ಯರನ್ನು ಹೊಂದಿದೆ. ಇನ್ನು ಬೆಳಗಾವಿ, ಗೋಕಾಕ್​, ಹುಕ್ಕೇರಿ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಅಥಣಿ, ಚಿಕ್ಕೋಡಿ, ರಾಯಬಾಗ, ಖಾನಾಪುರ, ಕಿತ್ತೂರು, ಕಾಗವಾಡ, ನಿಪ್ಪಾಣಿ, ಯರಗಟ್ಟಿ ಹಾಗೂ ಮೂಡಲಗಿ ಜಿಲ್ಲೆಯ ತಾಲೂಕುಗಳಾಗಿವೆ. ಮೂರು ಜಿಲ್ಲೆ ಆಗುವಷ್ಟು ವಿಶಾಲ ಪ್ರದೇಶ ಹೊಂದಿದೆ. ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲಾ ವಿಭಜನೆ ಆಗಬೇಕು ಎನ್ನುವುದು ಮೂರು ದಶಕಗಳ ಬೇಡಿಕೆ. ಆದರೆ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಮತ್ತು ಭಿನ್ನರಾಗದಿಂದಾಗಿ ಆ ಕನಸು ಕನಸಾಗಿಯೇ ಉಳಿದಿರುವುದು ವಿಪರ್ಯಾಸ.

ಬೆಳಗಾವಿ ಜಿಲ್ಲೆ ವಿಭಜನೆ ಕಗ್ಗಂಟು (ETV Bharat)

ಇದಕ್ಕೆ ರಾಜಕೀಯ ಇಚ್ಛಾಶಕ್ತಿ, ಗಡಿ ವಿವಾದ ನೆರಳು ಸಹ ತೊಡಕಾಗಿದೆ. ಈ ಹಿಂದೆ ಜೆ.ಎಚ್.ಪಟೇಲ್ ಸಿಎಂ ಆಗಿದ್ದ ಸಂದರ್ಭದಲ್ಲಿ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಭಜಿಸಿ ಆದೇಶ ಮಾಡಿದ್ದರು. ಈ ವೇಳೆ ಹಿರಿಯ ಸಾಹಿತಿಗಳು, ಕನ್ನಡ ಹೋರಾಟಗಾರರು ಯಾವುದೇ ಕಾರಣಕ್ಕೂ ಜಿಲ್ಲೆ ಒಡೆಯದಂತೆ ಸಿಎಂ ವಿರುದ್ಧ ತೀವ್ರ ಪ್ರತಿಭಟನೆ ಮಾಡಿದರು. ಕೊನೆಗೆ ಎಲ್ಲರ ಒತ್ತಡಕ್ಕೆ ಮಣಿದು ಜೆ.ಎಚ್.ಪಟೇಲರು ತಮ್ಮ ಆದೇಶವನ್ನು ವಾಪಸ್ ಪಡೆದಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರವಾಗಲು ಎಲ್ಲ ಸಾಮರ್ಥ್ಯ ಹೊಂದಿರುವ ಚಿಕ್ಕೋಡಿ, ಬೈಲಹೊಂಗಲ, ಗೋಕಾಕ್ ಹಾಗೂ ಅಥಣಿ ನಗರಗಳಿವೆ. ಆದರೆ, ಈವರೆಗೆ ಜಿಲ್ಲೆ ವಿಭಜನೆ ಮಾತ್ರ ಕೈಗೊಂಡಿಲ್ಲ.

ಇತ್ತೀಚೆಗೆ ಮಾಧ್ಯಮಗಳ ಜೊತೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡುತ್ತಾ, "ದಸರಾ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಪಕ್ಷಾತೀತವಾಗಿ ಜಿಲ್ಲೆಯ ಎಲ್ಲ ಶಾಸಕರ ಸಭೆ ಮಾಡಿ. ಸಿಎಂ ಸಿದ್ದರಾಮಯ್ಯ ಅವರಿಗೆ ಜಿಲ್ಲೆ ವಿಭಜನೆಯ ಬಗ್ಗೆ ಒತ್ತಡ ತರುತ್ತೇವೆ. ಜಿಲ್ಲೆ ವಿಭಜನೆ ಆಗದ ಹೊರತು ಬೆಳಗಾವಿಯ ಶ್ರೇಯೋಭಿವೃದ್ಧಿ ಸಾಧ್ಯವಿಲ್ಲ ಎಂದಿದ್ದಾರೆ" ಎಂದು ಹೇಳಿದ್ದಾರೆ.

ಇನ್ನೂ ಗಡಿ ವಿವಾದ ಕಾರಣದಿಂದ ಜಿಲ್ಲೆ ವಿಭಜನೆ ಕಗ್ಗಂಟು ಬಗೆಹರಿದಿಲ್ಲ. ಒಂದು ವೇಳೆ ಹೊಸ ಜಿಲ್ಲೆಗಳು ರಚನೆಯಾದರೆ, ಎಂಇಎಸ್ ಸಂಘಟನೆ ಮತ್ತೆ ಪ್ರಭಾವಶಾಲಿ ಆಗುತ್ತದೆ. ಸ್ಥಳೀಯವಾಗಿ ಎಲ್ಲ ಕಡೆಗಳಲ್ಲೂ ಕನ್ನಡಿಗರಿಗೆ ಹಿನ್ನಡೆಯಾಗುತ್ತದೆ ಎನ್ನುವ ಆತಂಕ ಇಲ್ಲಿನ ಕನ್ನಡ ಹೋರಾಟಗಾರರಿಗೆ ಇತ್ತು. ಆದರೆ ಕಳೆದ ಅನೇಕ ವರ್ಷಗಳಿಂದ ಬೆಳಗಾವಿ ಕನ್ನಡಮಯವಾಗಿದೆ. ಈ ಹಿಂದೆ ನಾಲ್ಕೈದು ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದ ಎಂಇಎಸ್ ಈಗ ಕೇವಲ ಎರಡು ಪಾಲಿಕೆ ಸ್ಥಾನಕ್ಕೆ ಮಾತ್ರ ಬಂದು ನಿಂತಿದೆ. ಇನ್ನು ಅಥಣಿಯ ಗಡಿಯಿಂದ ಬೆಳಗಾವಿ ಜಿಲ್ಲಾ ಕೇಂದ್ರಕ್ಕೆ ಬರಬೇಕು ಎಂದರೆ 220 ಕಿ.ಮೀ. ದೂರ ಕ್ರಮಿಸಬೇಕು. ಹೀಗಾಗಿ ಆಡಳಿತದ ದೃಷ್ಟಿಯಿಂದಲೂ ಇದು ದೊಡ್ಡ ಸಮಸ್ಯೆ. ಅಲ್ಲದೇ ಜಿಲ್ಲವಾರು ಅನುದಾನ ಹಂಚಿಕೆ. ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಧಿಕಾರಿಗಳು ಹರಸಾಹಸಪಡಬೇಕಿದೆ.

ಬೈಲಹೊಂಗಲ ಜಿಲ್ಲೆಗೆ ಸಭೆ: ಇತ್ತ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲೆ ವಿಭಜನೆ ಕೂಗು ಹಾಕುತ್ತಿದ್ದಂತೆ‌ ಅತ್ತ ಅಲರ್ಟ್ ಆದ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಪದಾಧಿಕಾರಿಗಳು ಬೈಲಹೊಂಗಲ ‌ಪಟ್ಟಣದ ಮೂರುಸಾವಿರ ಮಠದಲ್ಲಿ ಪಕ್ಷಾತೀತವಾಗಿ ದಿಢೀರ್ ಸಭೆ ನಡೆಸಿದ್ದಾರೆ. ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲಕ್ಕೆ ಜಿಲ್ಲಾ ಸ್ಥಾನಮಾನ ಕಲ್ಪಿಸಿಕೊಡಬೇಕು. ಇದಕ್ಕಾಗಿ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ನಿಯೋಗ ಸಿಎಂ ಭೇಟಿ ಮಾಡಲು ಸಭೆಯಲ್ಲಿ ‌ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ ಬೈಲಹೊಂಗಲಕ್ಕೆ ಜಿಲ್ಲಾ ಸ್ಥಾನಮಾನ ಏಕೆ ಕೊಡಬೇಕು ಎಂಬ ಬಗ್ಗೆ ಸಿಎಂಗೆ ಮನವರಿಕೆ ಮಾಡಲು ನಿರ್ಧರಿಸಲಾಗಿದೆ. ಒಂದು ವೇಳೆ ಮುಖ್ಯಮಂತ್ರಿ ಸ್ಪಂದಿಸದಿದ್ದರೆ ಬೈಲಹೊಂಗಲ ‌ಉಪವಿಭಾಗ ಬಂದ್‌ಗೆ ಕರೆ ಕೊಡಲು ತೀರ್ಮಾನಿಸಲಾಗಿದೆ. ಬೆಳಗಾವಿ ಅಖಂಡ ಜಿಲ್ಲೆ ಆಗಿರಬೇಕು. ಆಡಳಿತದ ದೃಷ್ಟಿಯಿಂದ ಚಿಕ್ಕೋಡಿ ಜಿಲ್ಲೆ ಆಗಲಿ. ಮತ್ತೊಂದು ಜಿಲ್ಲೆ ಮಾಡುವುದಾದರೆ ಬೈಲಹೊಂಗಲ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, "ಚಿಕ್ಕೋಡಿ ಜಿಲ್ಲೆ ಮಾಡುವಂತೆ ನಾವು ಸಾಕಷ್ಟು ಬಾರಿ ಒತ್ತಡ ಹೇರಿದ್ದೇವೆ. ಆದಷ್ಟು ಬೇಗ ಅದು ಆಗಬೇಕು. ಅದಕ್ಕೆಲ್ಲ ಕಾಲ ಕೂಡಿಬರಬೇಕು. ಇನ್ನು ಅಥಣಿ ಜಿಲ್ಲೆ ಮಾಡಲು ಆಗುವುದಿಲ್ಲ" ಎಂದು ಹೇಳಿದ್ದಾರೆ.

ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, "ಮೊದಲು ತಾಲೂಕುಗಳ ವಿಂಗಡಣೆ ಆಗಬೇಕು. ಆ ಬಳಿಕ ಜಿಲ್ಲೆಯ ವಿಭಜನೆ ಆಗಬೇಕು. ಈ ಬಗ್ಗೆ ಹಿಂದೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಪ್ರಸ್ತಾವನೆ ಇಟ್ಟಿದ್ದೆ. ಹಾಗಾಗಿ, ಗೋಕಾಕ್, ಚಿಕ್ಕೋಡಿ ಹೊಸ ಜಿಲ್ಲೆಯಾಗಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ ಮಾತನಾಡಿ, "ಜಿಲ್ಲೆಯ 18 ಶಾಸಕರು ಕೂಡಿಕೊಂಡು, ಸಾಧಕ-ಬಾಧಕ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ರಾಜಕೀಯ ದೃಷ್ಟಿಯಿಂದ ಜಿಲ್ಲೆ ವಿಭಜನೆ ಆಗಬಾರದು" ಎಂದು ಹೇಳಿದ್ದಾರೆ.

ಹೋರಾಟಗಾರ ಎಫ್.ಎಸ್.ಸಿದ್ದನಗೌಡರ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "7 ತಾಲ್ಲೂಕುಗಳಿಗೆ ಬೈಲಹೊಂಗಲ ಕೇಂದ್ರೀಕೃತವಾಗಿದೆ. 2011ರ ಜನಗಣತಿ ಪ್ರಕಾರ ಬೈಲಹೊಂಗಲ ಉಪವಿಭಾಗ 16.50 ಲಕ್ಷ ಜನಸಂಖ್ಯೆ ಹೊಂದಿದೆ. 5.5 ಲಕ್ಷ ಹೆಕ್ಟೇರ್ ಪ್ರದೇಶ ಒಳಗೊಂಡಿದೆ. ಇದಕ್ಕಿಂತ ಕಡಿಮೆ ಇರುವ ಪ್ರದೇಶಗಳು ರಾಜ್ಯಗಳೇ ಆಗಿವೆ. ಹಾಗಾಗಿ, ಜಿಲ್ಲಾ ವಿಭಜನೆ ವಿಚಾರದಲ್ಲಿ ಬೈಲಹೊಂಗಲ ಪರಿಗಣಿಸದೇ ಹೋದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಇದರ ಬಿಸಿ ಇಡೀ ರಾಜ್ಯಕ್ಕೆ ತಟ್ಟುವುದು ಶತಸಿದ್ಧ" ಎಂದು ಎಚ್ಚರಿಕೆ ಕೊಟ್ಟರು‌.

ಇದನ್ನೂ ಓದಿ: ಕಿವಿ ಮೇಲೆ ಹೂ ಇಟ್ಟುಕೊಂಡಿಲ್ಲ, ರಾಜಕೀಯವಾಗಿಯೇ ಉತ್ತರ ಕೊಡುತ್ತೇವೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ - Minister Lakshmi Hebbalkar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.