ETV Bharat / state

ಮರದಿಂದ ಮರಕ್ಕೆ ಜಿಗಿದ ಚಿರತೆ: ಟ್ರಾನ್ಸ್​ಫಾರ್ಮರ್​ ಮೇಲೆ ಬಿದ್ದು ಸಾವು

ಮರದಿಂದ ಕೆಳಗೆ ಇಳಿದು ಮುಂದೆ ಹೋಗುವ ಬದಲು ಚಿರತೆ ಮತ್ತೊಂದು ಮರಕ್ಕೆ ಹಾರಿ ಹೋಗಲು ಮುಂದಾಗಿದೆ. ಆಯತಪ್ಪಿ ಕೆಳಗೆ ಬಿದ್ದ ಚಿರತೆ ಸಮೀಪದಲ್ಲೇ ಇದ್ದ ಟ್ರಾನ್ಸ್​ಫಾರ್ಮರ್ ಮೇಲೆ ಬಿದ್ದು ಪ್ರಾಣ ಬಿಟ್ಟಿದೆ.

Leopard fell on transformer and died while jumping fromo tree
ಮರದಿಂದ ಮರಕ್ಕೆ ಜಿಗಿದ ಚಿರತೆ: ಟ್ರಾನ್ಸ್​ಫಾರ್ಮರ್​ ಮೇಲೆ ಬಿದ್ದು ಸಾವು
author img

By

Published : Dec 13, 2022, 2:20 PM IST

Updated : Dec 13, 2022, 8:19 PM IST

ಟ್ರಾನ್ಸ್​ಫಾರ್ಮರ್​ ಮೇಲೆ ಬಿದ್ದು ಚಿರತೆ ಸಾವು

ತುಮಕೂರು: ಒಂದು ಮರದಿಂದ ಮತ್ತೊಂದು ಮರಕ್ಕೆ ಜಿಗಿಯುವ ಸಂದರ್ಭದಲ್ಲಿ ಚಿರತೆಯೊಂದು ಟ್ರಾನ್ಸ್​ಫಾರ್ಮರ್ ಮೇಲೆ ಬಿದ್ದು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಹೋಬಳಿ ಕರೇಗೌಡನ ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಮಾರು 2 ವರ್ಷದ ಚಿರತೆ ಮರದ ಮೇಲೆ ಕುಳಿತಿತ್ತು. ಮರದಿಂದ ಕೆಳಗೆ ಇಳಿದು ಮುಂದೆ ಹೋಗುವ ಬದಲು ಚಿರತೆ ಮತ್ತೊಂದು ಮರಕ್ಕೆ ಹಾರಿ ಹೋಗಲು ಮುಂದಾಗಿದೆ. ಆಯತಪ್ಪಿ ಕೆಳಗೆ ಬಿದ್ದ ಚಿರತೆ ಸಮೀಪದಲ್ಲೇ ಇದ್ದ ಟ್ರಾನ್ಸ್​ಫಾರ್ಮರ್ ಮೇಲೆ ಬಿದ್ದಿದೆ. ಕ್ಷಣಾರ್ಧದಲ್ಲಿ ವಿದ್ಯುತ್ ಸ್ಪರ್ಶದಿಂದ ಚಿರತೆ ಪ್ರಾಣ ಬಿಟ್ಟಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಮೃತದೇಹವನ್ನು ಕೆಳಗೆ ಇಳಿಸಿದ್ದಾರೆ. ನಂತರ ನಿಯಮದ ಪ್ರಕಾರ ಚಿರತೆಯ ಶವವನ್ನು ಸುಟ್ಟು ಹಾಕಲಾಗಿದೆ.

ಇದನ್ನೂ ಓದಿ: ಸಾಗರ: ಬೇಟೆಗಾರರ ಉರುಳಿಗೆ ಬಿದ್ದು ಚಿರತೆ ಸಾವು

Last Updated : Dec 13, 2022, 8:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.