ತುಮಕೂರು: ದೇವರಾಯನ ದುರ್ಗ ಗಣಪತಿಯ ನಾಮದಚಿಲುಮೆ ಯುವಕರು ಕೋತಿಗಳಿಗಾಗಿ ಇರಿಸಿದ್ದ ನೀರಿನ ತೊಟ್ಟಿಯಲ್ಲಿ ರಾತ್ರಿ ವೇಳೆ ಚಿರತೆಯೊಂದು ನೀರು ಕುಡಿಯುತ್ತಿರೋ ದೃಶ್ಯ ಸೆರೆಯಾಗಿದೆ.
ರಾತ್ರಿ ವೇಳೆ ದಾರಿ ಹೋಕರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ನಾವು ನಾಮದ ಚಿಲುಮೆ ಬಳಿ ಮಂಗಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಇಟ್ಟಿದ್ದೆವು. ಆದರೆ ನಿನ್ನೆ ರಾತ್ರಿ ಬಂದು ಚಿರತೆ ಬಂದು ನೀರು ಕುಡಿದು ಅಚ್ಚರಿ ಮೂಡಿಸಿದೆ ಎಂದು ನೋಡುಗರು ತಿಳಿಸಿದ್ದಾರೆ.