ತುಮಕೂರು : ರೈತ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದು ಅಸಂವಿಧಾನಾತ್ಮಕವಾಗಿ ವರ್ತಿಸುತ್ತಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ರೈತ ವಿರೋಧಿ ಕಾಯ್ದೆಗಳನ್ನು ತಡೆಯಿರಿ ಎಂದು ಹೇಳುವ ಮೂಲಕ ಕಪಾಳಮೋಕ್ಷ ಮಾಡಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯಿಂದ ಸುಗ್ರೀವಾಜ್ಞೆ ಮೂಲಕ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವುದು ಸರಿಯಲ್ಲ, ಕೂಡಲೇ ಈ ಕಾಯ್ದೆಗಳ ಜಾರಿ ತಡೆಯಿರಿ, ಇಲ್ಲವೇ ನಾವೇ ತಡೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಮೂಲಕ ಈ ಕಾಯ್ದೆಗಳು ರೈತರ ಪರವಾಗಿಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿರುವುದು ಸಂತಸದ ವಿಚಾರ ಎಂದರು.
ರಾಜ್ಯಪಾಲರಿಗೆ ಸಾಮಾನ್ಯ ಪ್ರಜ್ಞೆ ಇರಬೇಕು. ಗೋಹತ್ಯೆ ನಿಷೇಧ ಕಾಯ್ದೆ ವಿಧಾನ ಪರಿಷತ್ತು ಮತ್ತು ವಿಧಾನಸಭೆಯಲ್ಲಿ ಅಂಗೀಕಾರವಾಗಬೇಕು ಎಂಬ ಅರಿವಾದರೂ ಇರಬೇಕು, ಅದನ್ನು ಬಿಟ್ಟು ಕಾನೂನಿನ ಬಿಕ್ಕಟ್ಟು ಇದ್ದರೂ ಕಾಯ್ದೆ ಜಾರಿಗೆ ತರಲು ರಾಜ್ಯಪಾಲರು ಸಹಿ ಹಾಕುವ ಮೂಲಕ ತಮ್ಮ ಹುದ್ದೆಗೆ ಅಗೌರವ ತರುವ ರೀತಿ ವರ್ತಿಸುತ್ತಿದ್ದಾರೆ ಎಂದು ರಾಜ್ಯಪಾಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಕಿಡಿ..
ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಈಗ 'ಜಾನುವಾರು ಹತ್ಯೆ ನಿಷೇಧ ಕಾಯ್ದೆ'ಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ರೈತರಿಗೆ ರಾಜ್ಯ ಸರ್ಕಾರ ಒಂದು ಅಪರಾಧವನ್ನು ಮಾಡಿ, ಅದರ ಸುತ್ತಲೂ ಸುಳ್ಳಿನ ಕಥೆ ಕಟ್ಟುವ ಮೂಲಕ ಕರ್ನಾಟಕ ಸರ್ಕಾರ ಸುಳ್ಳಿನ ಕೋಟೆ ಕಟ್ಟುತ್ತಿದೆ.
ರೈತ ಸಂಘದ ಮಾತನ್ನು ಕೇಳಬೇಡಿ, ನಾವು ಯಾವುದೇ ಕೃಷಿ ನೀತಿಯನ್ನು ರದ್ದು ಮಾಡುತ್ತಿಲ್ಲ, ಕೃಷಿ ಮಾರುಕಟ್ಟೆಯನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಿದೆ. ಆದರೆ, ಎಪಿಎಂಸಿ ಕಾಯ್ದೆಗೆ ಎಪಿಎಂಸಿ ಬೈಪಾಸ್ ಆ್ಯಕ್ಟ್ ಎಂಬುದನ್ನು ಸೇರಿಸಲಾಗಿದ ಎಂದ್ರು.
ಇದನ್ನೂ ಓದಿ:ರೈತ ಎಂಬ ಕಾರಣಕ್ಕೆ ಹೆಣ್ಣು ಕೊಡಲು ನಿರಾಕರಣೆ.. ಮನನೊಂದು ಅನ್ನದಾತ ಆತ್ಮಹತ್ಯೆ!