ETV Bharat / state

ಕಲ್ಪತರು ನಾಡಿಗೆ ರಾಜ್ಯ ಸರ್ಕಾರದಿಂದ ಅನ್ಯಾಯ:  ಸೊಗಡು ಗುಡುಗು - kannada news

ರಾಜ್ಯ ಸರ್ಕಾರ ತುಮಕೂರು ಜಿಲ್ಲೆಗೆ ಮಲತಾಯಿ ಧೋರಣೆ ಮಾಡುತ್ತಿದೆ, ಇದು ಸರ್ಕಾರದ ರೀತಿ ಕಾರ್ಯನಿರ್ವಹಿಸುತ್ತಿಲ್ಲ. ದೊಡ್ಡ ಕಾರ್ಪೊರೇಟ್ ಸೊಸೈಟಿಯ ರೀತಿ ರೀತಿಯಲ್ಲಿ ಕಾಣಿಸುತ್ತಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದಾರೆ.

ಮಾಜಿ ಸಚಿವ ಸೊಗಡು ಶಿವಣ್ಣ
author img

By

Published : May 28, 2019, 7:42 PM IST

ತುಮಕೂರು : ರಾಜ್ಯ ಸರ್ಕಾರ ನೀರಿನ ವಿಷಯದಲ್ಲಿ ಜಿಲ್ಲೆಗೆ ಮಲತಾಯಿ ಧೋರಣೆ ತೋರುತ್ತಿದೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ಹಾಗೂ ಅಧಿಕಾರದ ಹಿಂದೆ ಬೀಳುತ್ತಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾಗರಿಕರೇ ನಮಗೆ ಬುದ್ಧಿ ಹೇಳುವ ಮೂಲಕ, ದೇಶಾಭಿಮಾನದ ಪಾಠ ಹೇಳಿಕೊಟ್ಟಿದ್ದಾರೆ. ದೇಶವನ್ನು ಮುನ್ನಡೆಸುವ ಸಾಮರ್ಥ್ಯ ನರೇಂದ್ರ ಮೋದಿಗೆ ಇದೆ. ಹಾಗಾಗಿ ಬಿಜೆಪಿಯನ್ನ ಮತದಾರರು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆಗಾಲಕ್ಕೂ ಮುನ್ನ ಹೇಮಾವತಿ ಕೆನಾಲ್​ ನಲ್ಲಿ ಇರುವ ಹೂಳು ತೆಗೆಯುವ ಕಾರ್ಯವನ್ನ ಅಧಿಕಾರಿಗಳು ಮಾಡುತ್ತಿಲ್ಲ, ಮೈಸೂರು ಭಾಗಕ್ಕೆ ಸೇರುವ ಕೆ ಆರ್ ಎಸ್ ಜಲಾಶಯಕ್ಕೆ 500 ಕೋಟಿ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ, ನಮ್ಮ ಜಿಲ್ಲೆಗೂ 10 ರಿಂದ 15 ಕೋಟಿ ಹಣ ನೀಡಿದ್ರೆ ಜಿಲ್ಲೆಗೆ ನೀರು ದೊರೆಯುತ್ತಿತ್ತು ಎಂದರು.

ಮಾಜಿ ಸಚಿವ ಸೊಗಡು ಶಿವಣ್ಣ

ಇನ್ನೂ ಕಾಲ ಮಿಂಚಿಲ್ಲ ಜೂನ್ ಹತ್ತರೊಳಗೆ ಹೂಳು ಎತ್ತುವ ಕಾರ್ಯವನ್ನು ಮಾಡದೇ ಇದ್ದರೆ ಜಿಲ್ಲೆಗೆ ಕುಡಿವ ನೀರು ದೊರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರಾಜ್ಯ ಸರ್ಕಾರ ಜಿಲ್ಲೆಗೆ ಮಲತಾಯಿ ಧೋರಣೆ ಮಾಡುತ್ತಿದೆ, ಇದು ಸರ್ಕಾರದ ರೀತಿ ಕಾರ್ಯನಿರ್ವಹಿಸುತ್ತಿಲ್ಲ. ದೊಡ್ಡ ಕಾರ್ಪೊರೇಟ್ ಸೊಸೈಟಿಯ ರೀತಿ ರೀತಿಯಲ್ಲಿ ಕಾಣಿಸುತ್ತಿದೆ ಎಂದು ರಾಜ್ಯ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು.

Intro:ತುಮಕೂರು: ರಾಜ್ಯ ಸರ್ಕಾರ ನೀರಿನ ವಿಷಯದಲ್ಲಿ ತುಮಕೂರು ಜಿಲ್ಲೆಗೆ ಮಲತಾಯಿ ಧೋರಣೆ ತೋರುತ್ತಿದೆ, ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ಹಾಗೂ ಅಧಿಕಾರದ ಹಿಂದೆ ಬೀಳುತ್ತಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದರು.

Body:ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾಗರಿಕರೇ ನಮಗೆ ಬುದ್ಧಿ ಹೇಳುವ ಮೂಲಕ, ದೇಶಾಭಿಮಾನದ ಪಾಠ ಹೇಳಿಕೊಟ್ಟಿದ್ದಾರೆ. ದೇಶವನ್ನು ಮುನ್ನಡೆಸುವ ಸಾಮರ್ಥ್ಯ ನರೇಂದ್ರ ಮೋದಿಗೆ ಇದೆ ಹಾಗಾಗಿ ಬಿಜೆಪಿ ಪಕ್ಷವನ್ನು ಮತದಾರರು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.
ಇನ್ನೂ ತುಮಕೂರು ಜಿಲ್ಲೆಯಲ್ಲಿ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ, ಮಳೆಗಾಲಕ್ಕೂ ಮುನ್ನವೇ ಹೇಮಾವತಿ ಚಾನೆಲ್ ನಲ್ಲಿ ಇರುವಂತಹ ಹೂಳನ್ನು ಎತ್ತುವ ಕಾರ್ಯ ಅಧಿಕಾರಿಗಳು ಮಾಡುತ್ತಿಲ್ಲ.
ಮೈಸೂರು ಭಾಗಕ್ಕೆ ಸೇರುವ ಕೆ ಆರ್ ಎಸ್ ಜಲಾಶಯಕ್ಕೆ 500 ಕೋಟಿಯನ್ನು ಕ್ಯಾಬಿನೆಟ್ ನಲ್ಲಿ ಬಿಡುಗಡೆ ಮಾಡಿದ್ದಾರೆ, ಅದೇ ರೀತಿ ನಮ್ಮ ಜಿಲ್ಲೆಗೆ ಬರುವಂತಹ ನೀರಿನ ಜಲಾಶಯದ ಅಭಿವೃದ್ಧಿಗೆ 10ರಿಂದ 15 ಕೋಟಿ ಹಣ ನೀಡಿದ್ದರೆ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ನೀರು ದೊರೆಯುತ್ತಿತ್ತು, ಇನ್ನೂ ಸಹ ಕಾಲ ಕಳೆದಿಲ್ಲ ಜೂನ್ ಹತ್ತರೊಳಗೆ ಹೂಳು ಎತ್ತುವ ಕಾರ್ಯವನ್ನು ಮಾಡದೆ ಇದ್ದರೆ ತುಮಕೂರು ಜಿಲ್ಲೆಗೆ ಕುಡಿಯುವ ನೀರು ದೊರೆಯುವುದಿಲ್ಲ, ಮುಂದಿನ ದಿನಗಳಲ್ಲಿ ಇದೇ ಮುಂದುವರೆದರೆ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ತುಮಕೂರು ಜಿಲ್ಲೆಗೆ ಮಲತಾಯಿ ಧೋರಣೆ ಮಾಡುತ್ತಿದೆ, ಇದು ಸರ್ಕಾರದ ರೀತಿ ಕಾರ್ಯನಿರ್ವಹಿಸುತ್ತಿಲ್ಲ. ದೊಡ್ಡ ಕಾರ್ಪೊರೇಟ್ ಸೊಸೈಟಿಯ ರೀತಿ ರೀತಿಯಲ್ಲಿ ಕಾಣಿಸುತ್ತಿದೆ ಎಂದು ರಾಜ್ಯ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು, ಸಿದ್ದರಾಮಯ್ಯ ಅಹಿಂದ ನಾಯಕರು ಎಂದು ಹೇಳಿಕೊಳ್ಳುತ್ತಿರುವ ಬಗ್ಗೆ ಪ್ರಸ್ತಾಪಿಸಿ ಮಾತನಾಡಿ, ಸಿದ್ದರಾಮಯ್ಯ ಒಬ್ಬ ವೀರನೂ ಅಲ್ಲ, ಶೂರನು ಅಲ್ಲ. ಅಸೆಂಬ್ಲಿಯಲ್ಲಿ ತೊಡೆ ತಟ್ಟುವುದು, ತೋಳು ತಟ್ಟಿ ಕುಸ್ತಿ ಪ್ರದರ್ಶನ ಮಾಡುವ ರೀತಿಯಲ್ಲಿ ತಮ್ಮ ಹಾವ ಭಾವದಿಂದ ಘರ್ಜಿಸುವ ಸಿದ್ದರಾಮಯ್ಯ ನಕಲಿ ಶಾಮ ಎಂದು ಗೇಲಿಮಾಡಿ, ಹಣ ಹಾಗೂ ಅಧಿಕಾರಕ್ಕೆ ಸಿದ್ದರಾಮಯ್ಯ ಜೋತು ಬೀಳುವ ರೀತಿಯಲ್ಲಿ ಕಾರ್ಯ ವರ್ತಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

Conclusion:ಇನ್ನು ಶಾಸಕರು ಅಸೆಂಬ್ಲಿ ಯನ್ನು ಮಾಯಾಬಜಾರ್ ನಂತೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.