ತುಮಕೂರು: ಕೆಲವು ಕೊರೊನಾ ಸೋಂಕಿತರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಆಕ್ಸಿಜನ್ ನೀಡದಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಕೆ.ಎನ್.ರಾಜಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಕೇರ್ ಕೇಂದ್ರ ಹಾಗು ಕೋವಿಡ್ ಆಸ್ಪತ್ರೆಗಳಲ್ಲಿನ ರೋಗಿಗಳ ಆರೋಗ್ಯದ ಸ್ಥಿತಿಗತಿ ಕುರಿತು ಪರಿಶೀಲಿಸಲು ವೈದ್ಯರು ತೆರಳುತ್ತಿಲ್ಲ. ಸೋಂಕಿತರ ಆರೋಗ್ಯ ಪರಿಶೀಲಿಸಿ ಅಗತ್ಯವಿರುವಷ್ಟೇ ಅವರಿಗೆ ಆಕ್ಸಿಜನ್ ಪೂರೈಸಬೇಕಾಗುತ್ತದೆ. ಆದರೆ, ನರ್ಸ್ಗಳು ಮಾತ್ರ ಕೋವಿಡ್ ಆರೈಕೆ ಕೇಂದ್ರದೊಳಗೆ ತೆರಳಿ ಪರೀಕ್ಷೆ ನಡೆಸುತ್ತಿದ್ದಾರೆ. ಕೆಲ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಅಗತ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಚಿಕಿತ್ಸೆ ನೀಡುವ ಕೆಲಸ ಆಗುತ್ತಿಲ್ಲ ಎಂದರು.
ಇದನ್ನೂ ಓದಿ: ವಿಕಲಚೇತನರು ದೇವರ ಮಕ್ಕಳಿದ್ದಂತೆ, ಪೋಷಿಸಿ ಬೆಳೆಸುವುದು ನಮ್ಮ ಕರ್ತವ್ಯ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಕೋವಿಡ್ ಆರೈಕೆ ಕೇಂದ್ರಗಳು ದನಗಳು ಕೂಡಾ ಇರಲಾಗದಂತಹ ಸ್ಥಿತಿಯಲ್ಲಿವೆ. ಅಲ್ಲಿ ಸರಿಯಾಗಿ ಬಿಸಿನೀರಿನ ವ್ಯವಸ್ಥೆಯಾಗಲೀ, ಶೌಚಾಲಯಗಳ ಶುಚಿತ್ವವೂ ಇಲ್ಲ. ಇದರಿಂದ ಸೋಂಕಿತರು ಶೀಘ್ರ ಗುಣಮುಖರಾಗಿ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.