ETV Bharat / state

ತುಮಕೂರು: ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಅಪ್ರಾಪ್ತರನ್ನು ಹಿಡಿದು ದಂಡ ಹಾಕಿಸಿದ ನ್ಯಾಯಾಧೀಶೆ - ಈಟಿವಿ ಭಾರತ​ ಕರ್ನಾಟಕ

ಸಂಚಾರಿ ನಿಯಮ ತಿಳಿ ಹೇಳಲು ಹಿರಿಯ ಸಿವಿಲ್ ನ್ಯಾಯಾಧೀಶರೇ ರಸ್ತೆಗಿಳಿದಿದ್ದು, ಅಪ್ರಾಪ್ತ ಬೈಕ್ ಸವಾರರ ಪೋಷಕರಿಗೆ ಕಾನೂನು ಜಾಗೃತಿ ಮೂಡಿಸಿದ್ದಾರೆ.

Etv Bharat
ಮಂಜುಳಾ ಉಂಡಿ ಶಿವಪ್ಪ
author img

By

Published : Nov 16, 2022, 6:09 PM IST

ತುಮಕೂರು : ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್ ಸವಾರಿ ಮಾಡಿದ್ದು ಹಾಗೂ ತ್ರಿಬಲ್ ರೈಡಿಂಗ್ ಕಂಡು ಜಾಗೃತಿ ಮುಡಿಸಲು ಖುದ್ದು ನ್ಯಾಯಾಧೀಶರು ರಸ್ತೆಗಿಳಿದು ಸಂಚಾರ ನಿಯಮದ ಬಗ್ಗೆ ತಿಳಿ ಹೇಳಿ ತಪ್ಪಿತಸ್ಥರಿಗೆ ದಂಡ ವಿಧಿಸಿದ ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆಯಿತು.

ಗುಬ್ಬಿ ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಉಂಡಿ ಶಿವಪ್ಪ ಹಲವು ರಸ್ತೆ ನಿಯಮ ಮೀರಿದ ಪ್ರಕರಣ ಕಂಡು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿ ಸಂಚಾರ ನಿಯಮ ಮೀರಿದವರ ವಿರುದ್ಧ ಕ್ರಮಕ್ಕೆ ತಿಳಿಸಿದ್ದರು. ಒಂದು ಕೇಸ್ ಪ್ರಕರಣ ಮಾಡುವಲ್ಲಿ ಒತ್ತಡ ಎದುರಿಸುವ ಬಗ್ಗೆ ತಿಳಿದು ಖುದ್ದು ರಸ್ತೆಗಿಳಿದು ನಿಯಮ ಮೀರಿದವರ ವಿರುದ್ಧ ದಂಡ ವಿಧಿಸುವ ಕೆಲಸ ಮಾಡಿದರು.

ಬಸ್ ನಿಲ್ದಾಣದ ಬಳಿ ನಿಂತು ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್​ನಲ್ಲಿ ಸಂಚರಿಸುವುದು ಅಪರಾಧ. ಪೋಷಕರಲ್ಲಿ ಈ ಬಗ್ಗೆ ಮೊದಲು ಅರಿವು ಮೂಡಿಸಬೇಕಿದೆ. ಮನಬಂದಂತೆ ಬೈಕ್ ಚಲಾಯಿಸುತ್ತಾರೆ. ಜೀವಕ್ಕೆ ಕುತ್ತು ತಂದುಕೊಂಡು ನಂತರ ಪರಿಹಾರಕ್ಕೆ ಅಲೆಯುತ್ತಾರೆ. ಪರವಾನಗಿ ಇಲ್ಲದೆ, ಮದ್ಯಪಾನ ಮಾಡಿ ಚಾಲನೆ, ತ್ರಿಬಲ್ ರೈಡಿಂಗ್, ಹೆಲ್ಮೆಟ್ ರಹಿತ ಸಂಚಾರ ಹೀಗೆ ಅನೇಕ ತಪ್ಪುಗಳನ್ನು ಮಾಡಿ ವಿಮೆ ಹಣ ಬಾರದೆ ಕಂಗಾಲಾಗುತ್ತಾರೆ. ಈ ಬಗ್ಗೆ ತಿಳುವಳಿಕೆ ನೀಡಬೇಕಿದೆ ಎಂದು ಹೇಳಿದರು.

ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಅಪ್ರಾಪ್ತರನ್ನು ಹಿಡಿದು ದಂಡ ಹಾಕಿಸಿದ ನ್ಯಾಯಾಧೀಶೆ

ಪೊಲೀಸ್ ಇಲಾಖೆಗೆ ಸೂಚನೆ ನೀಡಿ ದಂಡ ವಿಧಿಸಿ ಕೇಸ್ ದಾಖಲಿಸಲು ತಿಳಿಸಿದ್ದೆ. ಆದರೆ ಪೊಲೀಸ್ ಇಲಾಖೆಗೆ ಒತ್ತಡ ತರುವ ಬಗ್ಗೆ ತಿಳಿಯಿತು. ಒಂದು ಲಘು ಪ್ರಕರಣ ದಾಖಲಿಸುವಲ್ಲಿ ಆಲೋಚನೆ ಮಾಡುವ ಸ್ಥಿತಿ ಕಂಡು ನಾನೇ ಖುದ್ದು ರಸ್ತೆಗಿಳಿದು ಜಾಗೃತಿ ಹಾಗೂ ದಂಡ ವಿಧಿಸುವ ಕೆಲಸ ಮಾದಿರುವುದಾಗಿ ನ್ಯಾಯಾಧೀಶರು ತಿಳಿಸಿದರು. ಈ ವೇಳೆ ಸರ್ಕಾರಿ ಅಭಿಯೋಜಕ ನಿರಂಜನ್ ಮೂರ್ತಿ, ವಕೀಲರಾದ ನಾಗರಾಜು, ಚಂದ್ರಮೌಳಿ, ಸಿಪಿಐ ನದಾಫ್ ಇತರರು ಇದ್ದರು.

ಇದನ್ನೂ ಓದಿ : ರಾಜಸ್ಥಾನದಲ್ಲಿ ಎರಡು ದಿನಗಳಿಂದ ಭಾರಿ ಸ್ಫೋಟಕ ಪತ್ತೆ: ನಿನ್ನೆ 186 ಕೆಜಿ ಸ್ಫೋಟಕ, ಇಂದು 500 ಜಿಲೆಟಿನ್ ಕಡ್ಡಿಗಳ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.