ETV Bharat / state

ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು.. ಪರಮೇಶ್ವರ್​ಗೆ ಸಿಎಂ ಆಗೋ ಅದೃಷ್ಟವಿದೆ: ಸಚಿವ ರಾಜಣ್ಣ

ಪರಮೇಶ್ವರ್ ಸಿಎಂ ಆಗ್ತಾರೆ ಅನ್ನುವ ವಿಚಾರವು ಸಹ ಅಸತ್ಯವಾಗಲ್ಲ. ಸಿದ್ದರಾಮಯ್ಯ ಅವರು ಯಾವಾಗ ಬಿಡ್ತಾರೋ ಆವಾಗ್ಗೆ ಜಿ ಪರಮೇಶ್ವರ್ ಮುಖ್ಯಮಂತ್ರಿ ಆಗ್ತಾರೆ. ನನಗೆ ಸಚಿವನಾಗಿರೋದಷ್ಟೇ ಸಾಕು ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.

Minister KN Rajanna spoke to the media.
ಸಚಿವ ಕೆ ಎನ್ ರಾಜಣ್ಣ ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Nov 3, 2023, 3:46 PM IST

Updated : Nov 3, 2023, 3:52 PM IST

ಪೊಲೀಸ್ ಇಲಾಖೆಯ ಸಮುಚ್ಚಯ ಉದ್ಘಾಟನೆ ಸಮಾರಂಭದಲ್ಲಿ ಸಚಿವ ರಾಜಣ್ಣ ಮಾತನಾಡಿದರು.

ತುಮಕೂರು: ಜಿ ಪರಮೇಶ್ವರ್​​ಗೆ ಸಿಎಂ ಆಗುವ ಅವಕಾಶವಿದೆ. ಈಗ ಪರಮೇಶ್ವರ್ ಹೋಮ್ ಮಿನಿಸ್ಟರ್ ಆಗಿದ್ದಾರೆ. ಮುಂದೆ ಏನು ಬೇಕಾದ್ರೂ ಆಗಬಹುದು ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಹಾಗೂ ಪೊಲೀಸ್ ಇಲಾಖೆಯ ಸಮುಚ್ಚಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾಕ್ಟರೇ ನಿಮಗೆ ಅದೃಷ್ಟವಿದೆ ಸಿಎಂ ಆಗಿ ಅಧಿಕಾರ ನಡೆಸುತ್ತೀರಿ ಎಂದು ಹಿಂದೊಮ್ಮೆ ಹೇಳಿದ್ದೆ. ಯಾಕೆಂದ್ರೆ ಅವರಿಗೆ ಅದೃಷ್ಟ ಇದೆ ಅಂತಾ ನಾನು ಭಾವಿಸಿದ್ದೇನೆ. ನಮ್ಮ ಜಿಲ್ಲೆಯಿಂದ ಒಬ್ಬ ಮುಖ್ಯಮಂತ್ರಿ ಆಗ್ತಾರೆ ಅಂದ್ರೆ ನಾವೆಲ್ಲಾ ಸಂತೋಷ ಪಡುತ್ತೇವೆ. ನಾವೆಲ್ಲಾ ಮುಖ್ಯಮಂತ್ರಿ ಆದಂತೆ ಭಾವಿಸುತ್ತೇನೆ ಎಂದರು.

ನಾವಿಬ್ಬರೂ ಸಿದ್ದರಾಮಯ್ಯ ಪರ:ಸಿದ್ದರಾಮಯ್ಯ ಇರೊವರೆಗೆ ನಾವೆಲ್ಲ ಸಿದ್ದರಾಮಯ್ಯ ಪರ ಇದ್ದೇವಿ.‌ ನಾವು ಪರಮೇಶ್ವರ್ ಇಬ್ಬರು ಅವರ ಪರ ಇರುತ್ತೇವೆ. ಸಿದ್ದರಾಮಯ್ಯ ಹೊರತು ಪಡಿಸಿದ್ರೆ, ಪರಮೇಶ್ವರ್ ಸಿಎಂ ಆಗಬೇಕು ಅಂತ ನಾವು ಬಯಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಐಸಿಸಿಗೂ ಹೆದರಲ್ಲ: ಎಐಸಿಸಿಯವರು ನಮಗೆ ಹೇಳಿದ್ದಾರೆ ಏನು ಮಾತನಾಡಬಾರದು ಅಂತ. ನಾನು ಪರಮೇಶ್ವರ್ ಒಟ್ಟಿಗೆ ಸಭೆಯಲ್ಲಿ ಕಾಣಿಸಿಕೊಂಡು ತುಂಬಾ ದಿನವಾಗಿತ್ತು.‌ ಹಾಗಾಗಿ ನನ್ನ ಮನಸ್ಸಿನ ಭಾವನೆ ಹೇಳಿದ್ದೇನೆ. ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಕೂಡ. ಈಗ ಮಾತನಾಡಿದ್ದು ಆಗೊಯ್ತು, ಮುಂದೆ ಮಾತನಾಡಲ್ಲ ಅಂತ ಹೇಳ್ತೀವಿ. ನಾನಂತೂ ಮುಂದೆ ಚುನಾವಣೆಗೆ ನಿಲ್ಲೋದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಸದ್ಯಕ್ಕೆ ವಿರೋಧ ಪಕ್ಷದವರು ಅಂದ್ರೆ ನೀವು ಮೀಡಿಯಾದವರು. ನೀವೆಲ್ಲಾ ಅಂದ್ರೆ ಸ್ನೇಹಿತರು. ನಾನು ವೇದಿಕೆ ಮೇಲೆ ಹೇಳಿದ್ದೆಲ್ಲ.ನೀವು ಕೇಳಿಸಿಕೊಂಡಿದ್ದೀರಾ ಇಲ್ವಾ. ಅದಕ್ಕೆ ನಾನು ಬದ್ದ. ನಾನು ಜೀವಮಾನದಲ್ಲಿ ಏನೆಲ್ಲಾ ಹೇಳಿದ್ದೇನೋ ಅದ್ಯಾವುದು ಸುಳ್ಳಾಗಿಲ್ಲ. ಪ್ರತಿಯೊಂದು ವಿಚಾರಗಳಲ್ಲೂ ನಾನು ಹೇಳಿದ ಯಾವ ವಿಚಾರವು ಅಸತ್ಯವಾಗಿಲ್ಲ‌ ಎಂದು ಭವಿಷ್ಯ ನುಡಿದರು.

ಪರಮೇಶ್ವರ್ ಸಿಎಂ ಆಗ್ತಾರೆ ಅನ್ನುವ ವಿಚಾರವು ಸಹ ಅಸತ್ಯವಾಗಲ್ಲ. ಸಿದ್ದರಾಮಯ್ಯ ಅವರು ಯಾವಾಗ ಬಿಡ್ತಾರೋ. ಅವಾಗ ಪರಮೇಶ್ವರ್ ಮುಖ್ಯಮಂತ್ರಿ ಆಗ್ತಾರೆ. ನನಗೆ ಸಚಿವನಾಗಿರೋದು ಸಾಕು,ನನಗೆ ಯಾವುದೇ ಡಿಸಿಎಂ ಹುದ್ದೆ ಬೇಡ‌. ನಾನು ಇಲ್ಲಿಯ ತನಕ ಬಂದಿರೋದೆ ಹೆಚ್ಚು ಎಂದು ತಿಳಿಸಿದರು.

ಇದನ್ನೂಓದಿ:ಸಿಎಂ ಹೇಳಿದ್ದಾರೆ ಅಂದ್ರೆ ಅದರಲ್ಲಿ ಏನೋ ಅರ್ಥ ಇರಬೇಕು: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಹೈಕಮಾಂಡ ಒಪ್ಪಿದ್ರೆ ನಾನೂ ಸಿಎಂ ಆಗಲು ಸಿದ್ದ: ಸಚಿವ ಪ್ರಿಯಾಂಕ್ ಖರ್ಗೆ : ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕು. ಈ ನಡುವೆ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂಬ ಹೇಳಿಕೆ ವೈಯಕ್ತಿಕವಾದುದು. ಯಾರು ಸಿಎಂ ಆಗಬೇಕು, ಯಾರು ಮುಂದುವರಿಯಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಒಂದು ವೇಳೆ ಹೈಕಮಾಂಡ್ ನೀನು ಸಿಎಂ ಆಗು ಎಂದರೆ ನಾನೂ ಸಿಎಂ ಆಗಲು ಸಿದ್ಧ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಅಧಿಕಾರ ಹಂಚಿಕೆ ವಿಚಾರ ದೆಹಲಿಯಲ್ಲಿ ನಾಲ್ಕು ಜನ ಕುಳಿತು ಮಾತನಾಡಿದ್ದಾರೆ. ಅವರಿಗೆ ಮಾತ್ರ ಈ ವಿಚಾರದಲ್ಲಿ ಸ್ಪಷ್ಟತೆ ಇದೆ. ಸಿಎಂ ಅವರ ನಿನ್ನೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ, ಜಿಲ್ಲಾ ಪಂಚಾಯತ್ ಸದಸ್ಯರಿಂದ ಹಿಡಿದು ಶಾಸಕರವರೆಗೆ ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ಹೇಳಲು ಸ್ವಾತಂತ್ರ್ಯವಿದೆ. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಹೇಳಿಕೆಗಳು ಕಲ್ಲಿನಿಂದ ಬರೆದ ಶಾಸನವಲ್ಲ. ಎಲ್ಲವೂ ಪಕ್ಷದ ಹೈ ಕಮಾಂಡ್​​ಗೆ ಬಿಟ್ಟದ್ದು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

Last Updated : Nov 3, 2023, 3:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.