ತುಮಕೂರು : ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಕೇಸರೀಕರಣ ಮಾಡೋಕೆ ಹೋಗೋದು ಎಷ್ಟು ಸರಿ. ಇಡೀ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಗೊಂದಲಮಯವಾಗಿದೆ. ಹೀಗಿದ್ದಾಗ, ಮಕ್ಕಳಿಗೆ ನಾವ್ ಹೇಗೆ ಹೇಳೋದು ಇದನ್ನ. ಮಕ್ಕಳಿಗೆ ಗೊಂದಲ ಮಾಡಿ ಹೇಳೋಕೆ ಆಗಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಈ ತರಹ ಎಲ್ಲಾ ನಡೆದಿರಬಹುದು. ಆದರೆ, ರಾಜ್ಯದಲ್ಲಿ ನಡೆದಿಲ್ಲ. ಕುವೆಂಪು, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ವಿಚಾರವನ್ನ ಮಕ್ಕಳಿಗೆ ತಿಳಿಸಬೇಕಾಗಿರೋದು ನಮ್ಮ ಜವಾಬ್ದಾರಿ. ನಾವ್ಯಾರು ಶಾಶ್ವತವಾಗಿ ಭೂಮಿ ಮೇಲೆ ಇರಲ್ಲ. ಮುಂದಿನ ಪೀಳಿಗೆಗೆ ಬಸವಣ್ಣ ಯಾರು ಅಂತಾ ಗೊತ್ತಾಗಬೇಕು. ಮೊದಲಿನಿಂದಲೂ ನಮಗೆ ಹೇಳಿಕೊಂಡು ಬಂದಿದ್ರಿಂದ ಬಸವಣ್ಣ ಯಾರು ಅಂತಾ ನಮಗೆ ಗೊತ್ತಾಗಿದೆ ಎಂದರು.
ಅವರ ಬಗ್ಗೆ ನಮಗೆ ಯಾರೂ ಏನೂ ಹೇಳದಿದ್ರೆ ಬಸವಣ್ಣ ಯಾರು ಅಂತಾ ಗೊತ್ತಾಗುತ್ತಿರಲಿಲ್ಲ. ಮಹನೀಯರ ವಿಚಾರಗಳನ್ನ ಕೈಬಿಟ್ರೇ ನಾವು ಪ್ರತಿಭಟನೆ ಮಾಡಬಾರದ. ನಾವು ಹಿಂದಿನಿಂದಲೇ ಹಿರಿಯರನ್ನ ಗೌರವಿಸಿಕೊಂಡು ಬಂದಿದ್ದೇವೆ. ಇದು ನಮ್ಮ ಸಂಸ್ಕೃತಿ. ಯಾರ ವ್ಯಕ್ತಿತ್ವ ಹೇಗೆ ಅಂತಾ ಸ್ಪಷ್ಟವಾಗಿ ತಿಳಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಜೆಡಿಎಸ್ ಮತಗಳನ್ನು ಒಡೆಯಲು ಕಾಂಗ್ರೆಸ್ಗೆ ಸಾಧ್ಯವಿಲ್ಲ- ನಿಖಿಲ್ ಕುಮಾರಸ್ವಾಮಿ