ETV Bharat / state

ಬಕ್ರೀದ್​ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ಗೃಹ ಸಚಿವ ಜಿ ಪರಮೇಶ್ವರ್

author img

By

Published : Jun 29, 2023, 11:57 AM IST

ಕೊರಟಗೆರೆ ಪಟ್ಟಣದ ಈದ್ಗ ಮೈದಾನದಲ್ಲಿ ಬಕ್ರೀದ್​ ಸಾಮೂಹಿಕ ಪ್ರಾರ್ಥನೆಯಲ್ಲಿ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್​ ಭಾಗಿಯಾಗಿ ಪ್ರಾರ್ಥನೆ ಮಾಡಿದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಜಿ ಪರಮೇಶ್ವರ್ ಭಾಗಿ

ತುಮಕೂರು: ಇಸ್ಲಾಂ ಸಮುದಾಯದವರು ಜಿಲ್ಲೆಯಲ್ಲಿ ಇಂದು ಬಕ್ರೀದ್ ಆಚರಿಸಿದರು. ಕೊರಟಗೆರೆ ಪಟ್ಟಣದಲ್ಲಿ ಇರುವ ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್​ ಸಾಮೂಹಿಕ ಪ್ರಾರ್ಥನೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾಗಿಯಾದರು. ಮುಸ್ಲಿಂ ಮುಖಂಡರೊಂದಿಗೆ ಪರಮೇಶ್ವರ್ ಪ್ರಾರ್ಥನೆ ಮಾಡಿದರು. ಕಪ್ಪು ಟೋಪಿ ಧರಿಸಿ ಪ್ರಾರ್ಥನೆಯಲ್ಲಿ ಭಾಗಿಯಾದ ಪರಮೇಶ್ವರ್, ಅವರೊಂದಿಗೆ ನೂರಾರು ಮುಸ್ಲಿಂ ಭಾಂದವರು ಹಾಜರಿದ್ದರು. ಈದ್ಗಾ ಮೈದಾನದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪ್ರಪ್ರಥಮವಾಗಿ ಅಲ್ಲಾಗೆ ನಾನು ನಮನ ಸಲ್ಲಿಸ್ತಿನಿ. ಇಡೀ ವಿಶ್ವಕ್ಕೆ ಸಂದೇಶ ಕೊಡುವ ಬಕ್ರೀದ್ ಹಬ್ಬ ಇದು‌. ನಾನು ಎಲ್ಲರಿಗೂ ನಮನಗಳನ್ನ ಹೇಳ್ತಿನಿ ಎಂದರು.

ಅಲ್ಲಾ ಎಲ್ಲರಿಗೂ ಅನೇಕ ರೀತಿ ಪರೀಕ್ಷೆ ಮಾಡ್ತಾನೆ‌. ಅದರಲ್ಲೂ ಮನುಷ್ಯರಿಗೆ ಹೆಚ್ಚು ಪರೀಕ್ಷೆ ಮಾಡ್ತಾನೆ. ಮಹಮ್ಮದ್ ಇಬ್ರಾಹಿಂ ಇಡೀ ವಿಶ್ವಕ್ಕೆ ಸಂದೇಶ ಕೊಟ್ಟಿದ್ದಾರೆ ಎಂದರು. ಇದು ಪವಿತ್ರವಾದ ಹಬ್ಬ. ನಾನು ಬಹಳ ಸಂತೋಷವಾಗಿ ನಿಮ್ಮೊಟ್ಟಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದೇನೆ. ಚುನಾವಣಾ ಸಂದರ್ಭದಲ್ಲಿ ನಿಮ್ಮ ಬಳಿ ಬಂದು ನಿಮ್ಮ ಅಶಿರ್ವಾದ ಕೇಳಿದ್ದೆ ಎಂದು ಇದೇ ವೇಳೆ ಹೇಳಿದರು.

ಅಲ್ಲಾನ ಕೃಪೆಯಿಂದ ಇವತ್ತು ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಅಶಿರ್ವಾದದಿಂದ ಗೃಹ ಸಚಿವನಾಗಿದ್ದೇನೆ. ಈ ರಾಜ್ಯದಲ್ಲಿ ಶಾಂತಿ ಕಾಪಾಡಬೇಕಾದ ಕೆಲಸ ನನ್ನದು. ಇದರಲ್ಲಿ ಯಾವುದೇ ಮುಲಾಜಿಲ್ಲದೇ ನನ್ನ ಕೆಲಸವನ್ನ ನಿಬಾಯಿಸ್ತಿನಿ. ನಾನು ಶಾಂತಿ ಕಾಪಾಡ್ತಿನಿ ಅಂತ ಪ್ರಮಾಣ ವಚನ ಸ್ವೀಕಾರ ಮಾಡಿದಿನಿ. ಇಡೀ ರಾಜ್ಯದಲ್ಲಿ ಶಾಂತಿ ಕಾಪಾಡ್ತಿನಿ. ಎಲ್ಲ ಕಷ್ಟಗಳಿಗೂ ಅಲ್ಲಾ ಸಹಕಾರ ಮಾಡುತ್ತೇನೆ ಎಂದರು.

ಶಿವಮೊಗ್ಗದಲ್ಲಿ ಬಕ್ರೀದ್​ ಆಚರಣೆ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ದಾ- ಭಕ್ತಿಯಿಂದ ಆಚರಿಸುತ್ತಾರೆ. ಬಕ್ರೀದ್ ಪ್ರಯುಕ್ತ ಶಿವಮೊಗ್ಗದ ಮುಸ್ಲಿಂ ಬಾಂಧವರು ತಿಲಕ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.

ಪ್ರವಾದಿ ಇಬ್ರಾಹಿಂ ಅವರು ತಮ್ಮ ಪುತ್ರನನ್ನು ದೇವರಿಗೆ ಅರ್ಪಣೆ ಮಾಡಲು ಮುಂದಾದಗ ಮಹಮ್ಮದ್ ಪೈಗಂಬರರು ಇಬ್ರಾಹಿಂ ಪುತ್ರನನ್ನು ಬಲಿ‌ ನೀಡದೆ ಕುರಿಯನ್ನು ಅರ್ಪಣೆ ಮಾಡುವಂತೆ ಹೇಳುತ್ತಾರೆ. ಆಗ ಕುರಿ ಅರ್ಪಿಸುತ್ತಾರೆ. ಅಂದಿನಿಂದ ಬಕ್ರೀದ್ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಬಕ್ರೀದ್​ನಲ್ಲಿ ಮುಖ್ಯವಾಗಿ ಮುಸಲ್ಮಾನರು ದಾನ ಧರ್ಮಗಳನ್ನು ಮಾಡುವರು. ಇಂದು ಪ್ರತಿಯೊಬ್ಬ ಮುಸಲ್ಮಾನರು ದಾನವನ್ನು ಮಾಡುತ್ತಾರೆ. ಬಕ್ರೀದ್​ನಲ್ಲಿ ನೀಡುವ ಬಲಿಯಲ್ಲಿ ಮೂರು ಭಾಗಗಳನ್ನು ಮಾಡಲಾಗುತ್ತದೆ. ಒಂದು ಭಾಗವನ್ನು ತಾವೇ ಇಟ್ಟುಕೊಂಡು ಉಳಿದ ಎರಡು ಭಾಗಗಳಲ್ಲಿ ಒಂದು ಭಾಗವನ್ನು ಸಂಬಂಧಿಕರಿಗೆ ಹಾಗೂ ಇನ್ನೂಂದು ಅಶಕ್ತರಿಗೆ ನೀಡಲಾಗುತ್ತದೆ. ಇದೇ ಬಕ್ರೀದ್​ನ ವಿಶೇಷತೆ.

ಬಕ್ರೀದ್​ನ ಸಾಮೂಹಿಕ ಪ್ರಾರ್ಥನೆಯ ನಂತರ ಪರಸ್ಪರ ಶುಭಾಷಯ ಕೋರಿಕೊಳ್ಳುತ್ತಾರೆ. ನಂತರ ತಮ್ಮ ತಮ್ಮ ಮನೆಗಳಿಗೆ ತೆರಳಿ ಕುರ್ಬಾನಿಯನ್ನು ನೀಡುತ್ತಾರೆ. ಇಂದು ಎಲ್ಲರೂ ತಮ್ಮ ತಮ್ಮ ಸಂಬಂಧಿಕರುಗಳ ಮನೆಗೆ ಭೇಟಿ ನೀಡಿ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುತ್ತಾರೆ‌. ಬಕ್ರೀದ್ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾದ್ಯಾಂತ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ: ದೇಶದಾದ್ಯಂತ ಪವಿತ್ರ ಬಕ್ರೀದ್​ ಹಬ್ಬದ ಆಚರಣೆ .. ನಮಾಜ್​ ಮಾಡಿ ಪ್ರಾರ್ಥನೆ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.