ETV Bharat / state

ಯುಪಿ ಸಿಎಂ ಕರೆ ತಂದು ರಾಮಮಂದಿರ ನಿರ್ಮಾಣ ಮಾಡುವ ಅಗತ್ಯವಿಲ್ಲ, ನಾನೇ ನಿರ್ಮಾಣ ಮಾಡುತ್ತೇನೆ : ಹೆಚ್​ಡಿಕೆ

ಉತ್ತರ ಪ್ರದೇಶದ ಸಿಎಂ ಕರೆ ತಂದು ರಾಮನಗರ ಜಿಲ್ಲೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಅಗತ್ಯವಿಲ್ಲ - ನಾನೇ ಆದಿಚುಂಚನಗಿರಿ ಸ್ವಾಮೀಜಿ ಕರೆಯಿಸಿ ರಾಮ ಮಂದಿರ ನಿರ್ಮಾಣ ಮಾಡುತ್ತೇನೆ- ಬಿಜೆಪಿ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ

hd kumaraswamy
ಹೆಚ್ ಡಿ ಕುಮಾರಸ್ವಾಮಿ
author img

By

Published : Dec 29, 2022, 8:28 AM IST

ಬಿಜೆಪಿ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ

ತುಮಕೂರು: ರಾಮನಗರ ಜಿಲ್ಲೆಯಲ್ಲಿರುವ ರಾಮದೇವರ ಬೆಟ್ಟಕ್ಕೆ ಯುಪಿ ಸಿಎಂ ಕರೆತಂದು ರಾಮ ಮಂದಿರ ನಿರ್ಮಾಣಕ್ಕೆ ಫೌಂಡೇಶನ್ ಹಾಕುವ ಅವಶ್ಯಕತೆ ಇಲ್ಲ. ನಮ್ಮ ಸುತ್ತೂರು ಮಠಾಧೀಶರನ್ನು ಮತ್ತು ಆದಿಚುಂಚನಗಿರಿ ಶ್ರೀಗಳನ್ನು ಕರೆತಂದು ನಾನೇ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಪಂಚರತ್ನ ರಥಯಾತ್ರೆಯು ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಂಚೆ ಗ್ರಾಮ ತಲುಪಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇವರದ್ದೇ ಸರ್ಕಾರವಿದೆ. ಮೂರುವರೆ ವರ್ಷದಿಂದ ರಾಮ ಮಂದಿರ ನಿರ್ಮಾಣ ಮಾಡದೇ ಇದ್ದವರು ಇವಾಗ ಯಾಕೆ ದಕ್ಷಿಣ ಭಾರತದಲ್ಲಿ ನಿರ್ಮಾಣ ಮಾಡ್ತಿವಿ ಎಂದು ಘೋಷಣೆ ಮಾಡ್ತಾರೆ?. ಐದು ವರ್ಷ ಸರ್ಕಾರವಿದ್ದಾಗ ಮಾಡಬಹುದಿತ್ತಾಲ್ವಾ?. ಬಿಜೆಪಿಯವರನ್ನು ಜನ ರಾಜ್ಯದಿಂದ ಹೊರಗೆ ಇಡೋ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ಬರ್ತಾ ಇದೆ. ಇದೆಲ್ಲಾ ಚುನಾವಣೆಗೋಸ್ಕರ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಅಯೋಧ್ಯಾ ರಾಮ ಮಂದಿರದ ತಳಪಾಯಕ್ಕೆ ದೇವನಹಳ್ಳಿಯ ಸಾದಹಳ್ಳಿಯಿಂದ ಕಲ್ಲು

ಇವರೇನು ನನ್ನ ಕ್ಷೇತ್ರಕ್ಕೆ ಬಂದು ರಾಮ ಮಂದಿರ ನಿರ್ಮಾಣ ಮಾಡುವುದು ಬೇಕಾಗಿಲ್ಲ. ಒಕ್ಕಲಿಗ ಸ್ವಾಮೀಜಿಗಳನ್ನು ಕರೆತಂದು ನಾನೇ ಮಂದಿರ ನಿರ್ಮಾಣ ಮಾಡಿಸುತ್ತೇನೆ. ನಂಗೆ ದೇವರು ಇನ್ನೂ ಶಕ್ತಿ ಕೊಟ್ಟಿದ್ದಾನೆ. ಬೇರೆ ರಾಜ್ಯದಿಂದ ಯಾರನ್ನೋ ಕರೆತಂದು ಚುನಾವಣೆ ಸಮಯದಲ್ಲಿ ಇದೆಲ್ಲಾ ಮಾಡೋದು ಬೇಡ. ಇವರ ಆಟ ಮುಗಿಯುತ್ತಾ ಬಂತು, ಇದು ಇವರ ಕೊನೆಯ ಅಧ್ಯಾಯ ಎಂದರು.

ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಅಂದಾಜು 1,800 ಕೋಟಿ ರೂ. ವೆಚ್ಚ: ಅಯೋಧ್ಯ ಟ್ರಸ್ಟ್

ಜನರ ಹಣ ಲೂಟಿ ಹೊಡೆದು ಅದರಿಂದ ರಾಮ ಮಂದಿರ ನಿರ್ಮಾಣ ಮಾಡ್ತಾರೆ. ರಾಮನಗರದಲ್ಲಿ ಬಿಜೆಪಿಯ ಆಟ ನಡೆಯಲ್ಲ. ಇಲ್ಲಿ ನಮ್ಮ ಜನರ ಸಂಬಂಧ ತಾಯಿ-ಮಕ್ಕಳ ರೀತಿ ಇದೆ. ನಾನು ಯಾವುದಕ್ಕೂ ವಿರೋಧ ಮಾಡಲ್ಲ, ಕಟ್ಟ ಬೇಕು ಅಂದ್ರೆ ನಾನೇ ಕಟ್ಟುತ್ತೇನೆ . ಜನ ಚುನಾವಣೆಯಲ್ಲಿ ಇವರಿಗೆ ಉತ್ತರ ಕೊಡ್ತಾರೆ ಎಂದರು.

ಇದನ್ನೂ ಓದಿ: ರಾಮನಗರದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಕ್ಷೇತ್ರ ನಿರ್ಮಾಣ: ಸಚಿವ ಅಶ್ವತ್ಥನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.