ETV Bharat / state

ಶಿರಾ ಉಪಕದನ: ಅಖಾಡಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ

author img

By

Published : Oct 21, 2020, 3:23 PM IST

ಶಿರಾ ಉಪಸಮರ ಕಣ ದಿನೇ ದಿನೆ ರಂಗೇರಿದ್ದು, ಇಂದು ಪಕ್ಷದ ಅಭ್ಯರ್ಥಿ ಪರವಾಗಿ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಮತಯಾಚನೆ ಮಾಡಿದ್ದಾರೆ. ಇದೇ ವೇಳೆ, ಇನ್ನು 10 ದಿನ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿ ನಿತ್ಯ ಒಂದಿಲ್ಲೊಂದು ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುವೆ ಎಂದು ತಿಳಿಸಿದರು.

HD Devegpowda by election campaign in sira
ಅಖಾಡಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡ

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಮತಯಾಚನೆ ಮಾಡಿದ್ದಾರೆ.

ಅಖಾಡಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡ

ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡ ಆಲದಮರ ಗ್ರಾಮದಲ್ಲಿ ಜೆಡಿಎಸ್ ಕಚೇರಿಯನ್ನು ಉದ್ಘಾಟನೆ ಮಾಡಿದ ದೇವೇಗೌಡರು, ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.

ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಾನು ಮೊಕ್ಕಾಂ ಹೂಡುವೆ, ನಿತ್ಯ ಒಂದಿಲ್ಲೊಂದು ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುವೆ ಎಂದು ತಿಳಿಸಿದರು. ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಮೇಲೆ ದಾಳಿ ಮಾಡುತ್ತಿವೆ. ಅವರ ದಾಳಿಗೆ ಪ್ರತ್ಯುತ್ತರವಾಗಿ ಎಲ್ಲ ವಿಷಯವನ್ನು ಹೊರಹೊಮ್ಮಿಸಿ ಮಾತನಾಡೋಕೆ ನಾನು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಚುನಾವಣೆ ಮುಗಿಯುವವರೆಗೂ ಹತ್ತು ದಿನಗಳ ಕಾಲ ಕ್ಷೇತ್ರದಲ್ಲಿಯೇ ಇರುತ್ತೇನೆ. ಯಾರ್ಯಾರು ಏನೇನು ದಾಳಿ ಮಾಡುತ್ತಾರೋ ಅವರಿಗೆ ಉತ್ತರ ಕೊಡಕ್ಕೆ ನಾನು ಇಲ್ಲೇ ಇರುತ್ತೇನೆ ಎಂದು ತಿಳಿಸಿದರು. ನಾನು ದಾರಿ ತಪ್ಪಿ ಮಾತನಾಡುವುದಿಲ್ಲ ನಡೆದ ಘಟನಾವಳಿಗಳನ್ನು ಹೇಳುವುದಕ್ಕೆ ನನಗೆ ಯಾವ ಭಯವಿಲ್ಲ ಎಂದು ತಿಳಿಸಿದರು. ಸಮರ್ಥವಾಗಿ ಉತ್ತರ ಕೊಡೋಕೆ ಈಗಲೂ ಶಕ್ತಿ ನನಗಿದೆ. ಆ ಕೆಲಸವನ್ನು ಮಾಡುತ್ತೇನೆ ಎಂದು ಗುಡುಗಿದರು.

ಗುಬ್ಬಿ ಶಾಸಕ ಎಸ್​.ಆರ್. ಶ್ರೀನಿವಾಸ್ ಚುನಾವಣಾ ಪ್ರಚಾರದಲ್ಲಿ ಗೈರು ಆಗುತ್ತಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿದ ದೇವೇಗೌಡರು, ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.