ETV Bharat / state

ಗ್ರಾ. ಪಂ. ಚುನಾವಣೆ: ತುಮಕೂರು ಜಿಲ್ಲೆಯಲ್ಲಿ ಮೊದಲ ದಿನ ಕೇವಲ 164 ನಾಮಪತ್ರ ಸಲ್ಲಿಕೆ - tumkur news

ಮೊದಲ ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್​ ಚುನಾವಣೆಗೆ ಈಗಾಗಲೇ ನಾಮಪತ್ರ ಪ್ರಕ್ರಿಯೆ ಆರಂಭವಾಗಿದೆ. ಡಿ. 7ರಿಂದ 11ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಡಿ.12ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.

ಗ್ರಾ. ಪಂ. ಚುನಾವಣೆ
ಗ್ರಾ. ಪಂ. ಚುನಾವಣೆ
author img

By

Published : Dec 8, 2020, 2:15 PM IST

Updated : Dec 8, 2020, 2:33 PM IST

ತುಮಕೂರು: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್​ ಚುನಾವಣೆಗೆ ಸಂಬಂಧಪಟ್ಟಂತೆ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನ 164 ನಾಮಪತ್ರಗಳು ಸಲ್ಲಿಕೆಯಾಗಿವೆ.

ತುಮಕೂರು ಜಿಲ್ಲೆಯಲ್ಲಿ ಮೊದಲ ದಿನ ಕೇವಲ 164 ನಾಮಪತ್ರ ಸಲ್ಲಿಕೆ

ಮೊದಲ ಹಂತದಲ್ಲಿ ನಡೆಯಲಿರುವ ಚುನಾವಣೆಗೆ ತುಮಕೂರು ತಾಲೂಕಿನಲ್ಲಿ 41 ಗ್ರಾಮ ಪಂಚಾಯತ್​ಗಳಿಗೆ 26 ನಾಮಪತ್ರಗಳು ಸಲ್ಲಿಕೆಯಾಗಿವೆ. ಗುಬ್ಬಿ ತಾಲೂಕಿನ 34 ಗ್ರಾ.ಪಂ.ಗಳಿಗೆ-18, ಕುಣಿಗಲ್ ತಾಲೂಕಿನ- 36 ಗ್ರಾಮ ಪಂಚಾಯತ್​ಗಳಿಗೆ 64, ಕೊರಟಗೆರೆ ತಾಲೂಕಿನ 24 ಗ್ರಾಮ ಪಂಚಾಯತ್​ಗಳಿಗೆ 53, ಪಾವಗಡ ತಾಲೂಕಿನ 33 ಗ್ರಾಮ ಪಂಚಾಯತ್​ಗಳಿಗೆ 3 ನಾಮಪತ್ರಗಳು ಸಲ್ಲಿಕೆಯಾಗಿವೆ.

ಡಿ. 7ರಿಂದ 11ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಡಿ.12ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಐದು ತಾಲೂಕುಗಳ 168 ಗ್ರಾಮ ಪಂಚಾಯತ್​ಗಳಲ್ಲಿ 2786 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉಳಿದ 2636 ಗ್ರಾಮ ಪಂಚಾಯತ್​ಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.

ಇದನ್ನು ಓದಿ:ಜೈಲಿಂದ ಅವಧಿಗೂ ಮುನ್ನ ಬಿಡುಗಡೆ ಕೋರಿದ ಶಶಿಕಲಾಗೆ ನಿರಾಶೆ

ನಾಮಪತ್ರಗಳನ್ನು ಹಿಂಪಡೆಯಲು ಡಿಸೆಂಬರ್ 14 ಕೊನೆಯ ದಿನವಾಗಿದ್ದು, ಡಿ.22ರಂದು ಮತದಾನ ನಡೆಯಲಿದೆ. ಡಿ.30ರಂದು ಆಯಾ ತಾಲೂಕಿನ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

Last Updated : Dec 8, 2020, 2:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.