ETV Bharat / state

ತುಮಕೂರು: ಶಾಲಾ ಆಟದ ಮೈದಾನ ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರ ಒತ್ತಾಯ - ಸರ್ಕಾರಿ ಶಾಲೆಯ ಆಟದ ಮೈದಾನ ಒತ್ತುವರಿ

ಸೋಮನಹಳ್ಳಿ ಜಿ‌.ಗೊಲ್ಲರಹಟ್ಟಿ ಸರ್ಕಾರಿ ಶಾಲೆಯ ಆಟದ ಮೈದಾನವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Tumkuru
ಆಟದ ಮೈದಾನ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯ
author img

By

Published : Apr 30, 2021, 8:46 AM IST

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಗಾಣದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಹಳ್ಳಿ ಜಿ‌.ಗೊಲ್ಲರಹಟ್ಟಿ ಸರ್ಕಾರಿ ಶಾಲೆಯ ಆಟದ ಮೈದಾನಕ್ಕೆಂದು 6.27 ಎಕರೆ ಜಾಗವನ್ನು ಗಾಣದಾಳ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅನುಮೋದಿಸಿ ನಿರ್ಣಯ ಮಾಡಲಾಗಿತ್ತು. ಆದ್ರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಅತಿಕ್ರಮಣ ತೆರವು ಮಾಡಿಸಿಕೊಡಬೇಕೆಂದು ಸೋಮನಹಳ್ಳಿ ಯುವಕರು ಒತ್ತಾಯಿಸಿದ್ದಾರೆ.

ಆಟದ ಮೈದಾನ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯ

ಗಾಣದಾಳು ಗ್ರಾಮ ಪಂಚಾಯಿತಿ ಸೋಮನಹಳ್ಳಿ ಗ್ರಾಮದ ಹಳೇ ಗ್ರಾಮಠಾಣ ಜಾಗದ 6.27 ಎಕರೆ ಜಾಗ ಇದಾಗಿದ್ದು, ಸದರಿ ಜಾಗವು ಗ್ರಾಮ ಪಂಚಾಯಿತಿಗೆ ಸೇರಿದ್ದಾಗಿದ್ದರಿಂದ ಖುಲ್ಲಾ ಇದ್ದ ಆ ಜಾಗವನ್ನು ಸೋಮನಹಳ್ಳಿ ಜಿ.ಗೊಲ್ಲರಹಟ್ಟಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆಟದ ಮೈದಾನಕ್ಕೆಂದು ಮೀಸಲಿಡಲಾಗಿತ್ತು. ಗಾಣದಾಳು ಗ್ರಾಮ ಪಂಚಾಯಿತಿಯಲ್ಲಿ 3.5.2011ರ ಸಭೆಯಲ್ಲಿ ನಿರ್ಣಯಿಸಿ ಠರಾವು ಮಾಡಲಾಗಿತ್ತು.

ಈ ಜಾಗದ ಸುತ್ತಮುತ್ತಲು ಇರುವವರು ಜಾಗವನ್ನು ಒತ್ತುವರಿ ಮಾಡಿದ್ದಾರೆ. 6.27 ಗುಂಟೆಯಿದ್ದ ಜಾಗ ಒತ್ತುವರಿಯಾಗಿ ಈಗ 1.5 ಎಕರೆಯಷ್ಟು ಸ್ಥಳ ಮಾತ್ರ ಉಳಿದಿದೆ. ಸೋಮನಹಳ್ಳಿ ಸರ್ಕಾರಿ ಶಾಲೆಯ ಮೈದಾನಕ್ಕೆ ಮೀಸಲಿಟ್ಟ ಜಾಗವನ್ನು ಅತಿಕ್ರಮಣ ಮಾಡಿರುವವರು ಪರಭಾರೆ ಮಾಡಿದ್ದಾರೆ. ಕೆಲವರು ಉಳುಮೆ ಮಾಡಿದ್ದಾರೆ.

ದಿನೇ ದಿನೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಶಾಲೆಗೆ ಆಟದ ಮೈದಾನದ ಅವಶ್ಯಕತೆಯಿದೆ. ಅತಿಕ್ರಮಣದಾರರನ್ನು ತೆರವು ಮಾಡಿಸಿ ಅನುಕೂಲ ಕಲ್ಪಿಸುವಂತೆ ಸರ್ವೇ ಇಲಾಖೆ ಸೇರಿದಂತೆ ತಹಶೀಲ್ದಾರ್ ಹಾಗೂ ಎಲ್ಲ ಅಧಿಕಾರಿಗಳಿಗೂ ಮನವಿ ಮಾಡಿದ್ದರೂ ಸಹ ಯಾರೂ ಗಮನ ಹರಿಸದ ಕಾರಣ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಇತ್ತ ಗಮನಹರಿಸಿ ಶಾಲಾ ಮೈದಾನಕ್ಕೆ ಜಾಗ ತೆರವು ಮಾಡಿಸಿಕೊಡುವ ಮೂಲಕ ಮಕ್ಕಳ ಆಟೋಟಕ್ಕೆ ಅನುವು ಮಾಡಿಕೊಡಬೇಕೆಂದು ವಿನಂತಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.