ತುಮಕೂರು: ಆಕಸ್ಮಿಕವಾಗಿ ಮೆಕ್ಕೆಜೋಳದ ಯಂತ್ರಕ್ಕೆ ಸಿಲುಕಿ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಶ್ರಾವಂಡನಹಳ್ಳಿಯಲ್ಲಿ ನಡೆದಿದೆ.
ರಮ್ಯಾಬಾಯಿ(14) ಮೃತ ಬಾಲಕಿ. ಚಂದ್ರಪ್ಪ ಎಂಬುವರು ಮೆಕ್ಕೆಜೋಳವನ್ನು ಯಂತ್ರದ ಮೂಲಕ ಸುಲಿಯುತ್ತಿದ್ದರು. ಇದೇ ಮಾರ್ಗವಾಗಿ ಹೋಗುತ್ತಿದ್ದ ಬಾಲಕಿಯ ದುಪ್ಪಟ್ಟ ಆಕಸ್ಮಿಕವಾಗಿ ಯಂತ್ರದ ಬೆಲ್ಟ್ಗೆ ಸಿಲುಕಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು ಸಹ ಮಾರ್ಗ ಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಕೊಡುಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.