ತುಮಕೂರು: ತಾತ ಯಾವಾಗಲೂ ಪಕ್ಷ ಕಟ್ಟೋಣ ಅಂತಿರ್ತಾರೆ. ಅವರಲ್ಲಿ ಅದ್ಯಾವ ಶಕ್ತಿ ಇದ್ಯೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ಮಾಜಿ ಸಚಿವ ಶ್ರೀನಿವಾಸ್ ವ್ಯಾಖ್ಯಾನಿಸಿದ ಪರಿ ಇದು.
ಹೌದು, ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಅಜ್ಜ ಹೋಗಲ್ಲ. ಮುಂದಿನ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಕಣಕ್ಕಿಳಿಸೋಣ. ದೇವೆಗೌಡರಿಗೆ ಕೊಟ್ಟಷ್ಟು ಶಕ್ತಿಯನ್ನ ಆ ದೇವರು ನಮಗೆ ಕೊಟ್ಟಿಲ್ಲ. ಹಾಸನನ್ನ ಅಭಿವರದ್ಧಿಪಡಿಸಿದಂತೆ ತುಮಕುರನ್ನೂ ಅಭಿವೃದ್ಧಿಪಡಿಸಲು ಮುಂದಿನ ಬಾರಿ ಇವರನ್ನು ಗೆಲ್ಲಿಸೋಣ ಎಂದು ಕರೆ ಕೊಟ್ಟರು.