ETV Bharat / state

ಡಿಕೆಶಿ ದಿಢೀರ್​ ಬಂಧನ ಸರಿಯಲ್ಲ: ಮಾಜಿ ಡಿಸಿಎಂ ಜಿ. ಪರಮೇಶ್ವರ್ ಆಕ್ರೋಶ

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ತನಿಖೆ ಸಂಬಂಧ ದೆಹಲಿಗೆ ಕರೆಸಿಕೊಂಡು ಇಡಿಯವರು ನಾಲ್ಕು ದಿನ ಪ್ರಶ್ನೆ ಮಾಡಿ ನಂತರ ಏಕಾಏಕಿ ಬಂಧಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಡಿ.ಕೆ.ಶಿ ಏಕಾಏಕಿ ಬಂಧನ ಸರಿಯಲ್ಲ ಎಂದ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್
author img

By

Published : Sep 5, 2019, 7:16 PM IST

ತುಮಕೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ತನಿಖೆ ಸಂಬಂಧ ದೆಹಲಿಗೆ ಕರೆಸಿಕೊಂಡು ಇಡಿ ಅಧಿಕಾರಿಗಳು ನಾಲ್ಕು ದಿನ ಪ್ರಶ್ನೆ ಮಾಡಿ ನಂತರ ಏಕಾಏಕಿ ಬಂಧಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಡಿ.ಕೆ.ಶಿ ಏಕಾಏಕಿ ಬಂಧನ ಸರಿಯಲ್ಲ ಎಂದ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್

ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ಅವರ ಮೇಲೆ ಕ್ರಮ ಕೈಗೊಂಡರೆ ಪರವಾಗಿಲ್ಲ. ಆದರೆ, ಇದರಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹಸ್ತಕ್ಷೇಪ ಇದ್ದರೆ ಅದು ಡಿಕೆಶಿ ಬಂಧನದ ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Intro:Body:ಡಿಕೆ ಶಿವಕುಮಾರ್ ಏಕಾಏಕಿ ಬಂಧಿಸಿರುವುದು ಸರಿಯಲ್ಲ: ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಹೇಳಿಕೆ

ತುಮಕೂರು
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ತನಿಖೆ ಸಂಬಂಧ ದೆಹಲಿಗೆ ಕರೆಸಿಕೊಂಡು ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ ನವರು ಕರೆಸಿಕೊಂಡು ನಾಲ್ಕು ದಿನ ಪ್ರಶ್ನೆ ಮಾಡಿ ನಂತರ ಏಕಾಏಕಿ ಬಂಧಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಿದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ಅವರ ಮೇಲೆ ಕ್ರಮ ಕೈಗೊಂಡರೆ ಪರವಾಗಿಲ್ಲ ಆದರೆ ಇದರಲ್ಲಿ ಪ್ರಧಾನಿ ಮೋದಿ ಇರಬಹುದು ಮತ್ತು ಅಮಿತ್ ಶಾ ಇರಬಹುದು ಅವರ ಹಸ್ತಕ್ಷೇಪ ಇದ್ದರೆ ಅದು ಸರಿಯಾದುದಲ್ಲ ಎಂದು ಹೇಳಿದರು.
ಗೃಹ ಮಂತ್ರಿಗಳಾಗಿದ್ದ ಚಿದಂಬರಂ ಅವರನ್ನ ಯಾವ ರೀತಿ ತನಿಖೆ ಮಾಡ್ತಾ ಇದ್ದೀರಿ ಅನ್ನೋದು ನಮ್ಮ ಪ್ರಶ್ನೆ ಯಾಗಿದೆ ಎಂದರು.
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಸುತ್ತ ಮುತ್ತ ಇದ್ದ 80 ಜನರ ಮೇಲು ರೈಡ್ ಮಾಡಲಾಗುತ್ತದೆ, ಒಂದು ವರ್ಷದಿಂದ ಅವರನ್ನ ತನಿಖೆ ಮಾಡ್ತಾರೆ. ಆರು ತಿಂಗಳಿಂದ ಅವರನ್ನ ಪ್ರಶ್ನೆ ಮಾಡ್ತಾರೆ.
ಆದರೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಕೆಲ ಶಾಸಕರನ್ನು ಕರೆದುಕೊಂಡು ಹೋಗಿ ಆಮಿಷ ತೋರಿಸಲಾಯಿತು ಅಲ್ಲದೆ ಅದಕ್ಕೆ ಹಣ ಎಲ್ಲಿಂದ ಬಂತು ಎಂಬುದನ್ನು ಬಿಜೆಪಿ ಪಕ್ಷವು ಸ್ಪಷ್ಟಪಡಿಸಬೇಕು. ಅದರ ಬಗ್ಗೆ ಯಾಕೆ ಪ್ರಶ್ನೆ ಮಾಡಿಲ್ಲ ಹೀಗಾಗಿ ಒಬ್ಬರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಇನ್ನೊಂದು ನ್ಯಾಯ ಎಂಬುದು ಈ ದೇಶದಲ್ಲಿ ನಡೆಯಬಾರದು ಎಂದು ಹೇಳಿದರು.
ಪ್ರತಿಭಟನಾಕಾರರು ಇದೆ ವೇಳೆ ಟೈರ್ ಗಳಿಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೈಟ್: ಜಿ ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ....Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.