ತುಮಕೂರು: ರಾಜ್ಯದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಟೀಕಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಆರೋಗ್ಯಕ್ಕಿಂತ ಸರ್ಕಾರದ ಬೊಕ್ಕಸವನ್ನು ತುಂಬಿಸುವುದು ಹೇಗೆ ಎಂಬ ಚಿಂತೆ ಇವರದ್ದಾಗಿದೆ. ಇದು ತಪ್ಪು. ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಇಂತಹ ಸಂದರ್ಭಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿದ್ದೆವು.
ಆದರೆ ನಾವು ಮಾಡಿದ್ದು ತಪ್ಪಾಯಿತೇನೋ ಅನ್ನಿಸುತ್ತಿದೆ. ಇದುವರೆಗೂ ರಾಜ್ಯದಲ್ಲಿ 1 ಲಕ್ಷ ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಅದರಲ್ಲಿ 32 ಸಾವಿರ ಜನರ ಟೆಸ್ಟ್ ಮಾಡಲಾಗಿದೆ. ನಿರೀಕ್ಷೆಯಂತೆ ಪ್ರಗತಿಯಾಗಿಲ್ಲ ಎಂದರು.
ವಾತಾವರಣ ಗೊಂದಲಮಯವಾಗಿದೆ. ಕೆಲ ಸಚಿವರು ಲಾಕ್ಡೌನ್ ತೆರವುಗೊಳಿಸಬೇಕು ಎನ್ನುತ್ತಾರೆ. ಇನ್ನು ಮುಖ್ಯಮಂತ್ರಿಗಳ ನಿಲುವು ಒಂದು ರೀತಿಯದ್ದಾಗಿದೆ ಎಂದರು.