ETV Bharat / state

ಅತ್ಯಂತ ಸ್ಮಾರ್ಟ್​ ಈ ಡಿಜಿಟಲ್​ ಲೈಬ್ರರಿ: ಜ್ಞಾನಾಸಕ್ತರ ಪಾಲಿಗೆ ವರದಾನ! - kannadanews

ತುಮಕೂರಿನ ಹೃದಯ ಭಾಗದಲ್ಲಿ ಇ ಡಿಜಿಟಲ್​ ಗ್ರಂಥಾಲಯ ಆರಂಭವಾಗಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಕಾಂಕ್ಷಿಗಳ ಪಾಲಿಗೆ ಜ್ಞಾನ ಕಣಜವಾಗಿ ಹೊರಹೊಮ್ಮಿದೆ.

ಜ್ಞಾನಭಂಡಾರ ವೃದ್ಧಿಗೆ ಡಿಜಿಟಲ್ ಲೈಬ್ರರಿ
author img

By

Published : Jul 27, 2019, 2:34 AM IST

ತುಮಕೂರು: ನಗರದ ಕೇಂದ್ರ ಗ್ರಂಥಾಲಯಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಪಾಲಿಗೆ ವರದಾನವಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಕೇಂದ್ರ ಗ್ರಂಥಾಲಯ ಸಮುಚ್ಚಯದಲ್ಲಿ ಡಿಜಿಟಲ್ ಗ್ರಂಥಾಲಯ ತೆರೆಯಲಾಗಿದೆ. ಏಕಕಾಲದಲ್ಲಿ 25 ಮಂದಿ ಈ ಡಿಜಿಟಲ್ ಗ್ರಂಥಾಲಯದ ಮೂಲಕ ತಮಗೆ ಬೇಕಾದ ಮಾಹಿತಿ ಪಡೆಯಬಹುದಾಗಿದೆ. ಇದಕ್ಕೆ ಪೂರಕವಾಗಿ 25 ಕಂಪ್ಯೂಟರ್​ಗಳನ್ನು ಅಳವಡಿಸಲಾಗಿದ್ದು, ನಿರಂತರ ಇಂಟರ್​ನೆಟ್ ಸೌಲಭ್ಯ, ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಸಂಶೋಧನಾ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ನಿತ್ಯ ಡಿಜಿಟಲ್ ಲೈಬ್ರರಿಯ ಅನುಕೂಲ ಪಡೆಯುತ್ತಿದ್ದಾರೆ.

ಜ್ಞಾನಭಂಡಾರ ವೃದ್ಧಿಗೆ ಡಿಜಿಟಲ್ ಲೈಬ್ರರಿ

ಡಿಜಿಟಲ್ ಲೈಬ್ರರಿಯ ವೆಬ್​​​ಸೈಟ್​​ನಲ್ಲಿ 5000ಕ್ಕೂ ಹೆಚ್ಚು ಇ-ಬುಕ್​ಗಳು, 85ಕ್ಕೂ ಹೆಚ್ಚು ದಿನಪತ್ರಿಕೆಗಳು, ಸುಮಾರು 14 ಮಿಲಿಯನ್ ಸಂಶೋಧನಾ ಪ್ರಬಂಧಗಳು ಲಭ್ಯವಿವೆ. ಡಿಜಿಟಲ್ ಲೈಬ್ರರಿಗೆ ಖುದ್ದು ಭೇಟಿ ನೀಡುವ ಇಲ್ಲವೇ, ಡಿಜಿಟಲ್ ಲೈಬ್ರರಿಯ ವೆಬ್​ಸೆಟ್​ಗೆ ಭೇಟಿ ನೀಡುವ ಮೂಲಕವೂ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Intro:ಜ್ಞಾನಭಂಡಾರ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ ತುಮಕೂರಿನ ಡಿಜಿಟಲ್ ಲೈಬ್ರರಿ....

ತುಮಕೂರು
ಗ್ರಂಥಾಲಯಗಳೆಂದರೆ ಅಗಣಿತ ಜ್ಞಾನ ಸಂಪತ್ತಿನ ಕೇಂದ್ರ ತುಮಕೂರಿನಲ್ಲಿ ಇಂತಹ ಗ್ರಂಥಾಲಯಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದ್ದು ಡಿಜಿಟಲ್ ಲೈಬ್ರರಿ ಆಗಿ ಹೊರಹೊಮ್ಮಿದೆ. ಇದು ಇಂದಿನ ಯುವಪೀಳಿಗೆಗೆ ಮತ್ತಷ್ಟು ಜ್ಞಾನದ ಬುದ್ಧಿಯನ್ನು ಕಟ್ಟಿಕೊಡುವಂತಹ ವ್ಯವಸ್ಥೆಯಾಗಿ ರೂಪಾಂತರಗೊಂಡಿದೆ.

ಹೌದು ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ನಗರದ ಕೇಂದ್ರ ಗ್ರಂಥಾಲಯದ ಸಮುಚ್ಚಯದಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಗೊಂಡಿದೆ.

ಏಕಕಾಲದಲ್ಲಿ 25 ಮಂದಿ ಡಿಜಿಟಲ್ ಗ್ರಂಥಾಲಯದಲ್ಲಿ ತಮಗೆ ಬೇಕಾದಂತಹ ಮಾಹಿತಿಯನ್ನು ಪಡೆಯಬಹುದಾಗಿದೆ.ಇದಕ್ಕೆ ಪೂರಕವಾದ ಅಂತಹ ಇಂಟರ್ನೆಟ್ ಸೌಲಭ್ಯ ,ವಿದ್ಯುತ್ ಸಂಪರ್ಕ ಹಾಗೂ 25 ಕಂಪ್ಯೂಟರ್ ಗಳನ್ನು ಅಳವಡಿಸಲಾಗಿದೆ. ಮೊದಲಿಗೆ ಡಿಜಿಟಲ್ ಗ್ರಂಥಾಲಯದಲ್ಲಿ ಹೆಸರು ಮತ್ತು ಸಂಪೂರ್ಣ ಮಾಹಿತಿಯನ್ನು ದಾಖಲಿಸಿ ನೋಂದಣಿ ಮಾಡಿಕೊಳ್ಳಬೇಕು. ಪ್ರತ್ಯೇಕವಾಗಿ ಪಾಸ್ವರ್ಡ್ ಅನ್ನು ನೀಡಲಾಗುತ್ತದೆ. ಆನಂತರ ತುಮಕೂರು ಡಿಜಿಟಲ್ ಲೈಬ್ರರಿ ಎಂಬ ವೆಬ್ಸೈಟ್ ಗೆ ಹೋಗಿ ಅಲ್ಲಿ ಇರುವಂತಹ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಡಿಜಿಟಲ್ ಲೈಬ್ರರಿ ವೆಬ್ ಸೈಟಿಗೆ ಹೋದರೆ ಅದರಲ್ಲಿ 7 ವಿಭಾಗಗಳಲ್ಲಿ ನಮಗೆ ಮಾಹಿತಿ ಲಭ್ಯವಾಗಲಿದೆ. ವೈಜ್ಞಾನಿಕ ವಿಷಯಕ್ಕೆ ಸಂಬಂಧಪಟ್ಟಂತೆ, ಶಾಲಾ ಪಠ್ಯಪುಸ್ತಕ, ದಿನಪತ್ರಿಕೆ, ಮ್ಯಾಗಸಿನ್ ಗಳು, ಸರ್ಕಾರಿ ಅಂಕಿಅಂಶಗಳು, ಸಾಹಿತ್ಯ ಮತ್ತು ಕಲೆಗೆ ಸಂಬಂಧಿಸಿದ ಪುಸ್ತಕಗಳು, ಸಂಶೋಧನಾ ಲೇಖನಗಳು, ಉದ್ಯೋಗ ಅವಕಾಶಗಳು ಸೇರಿದಂತೆ ಗ್ರಂಥಾಲಯದಲ್ಲಿ ಲಭಿಸುವಂತೆ ಬಹುತೇಕ ಜ್ಞಾನಭಂಡಾರ ಲಭ್ಯವಾಗಲಿದೆ. ನಿತ್ಯ ಸಂಶೋಧನಾ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಆಕಾಂಕ್ಷಿಗಳು ಡಿಜಿಟಲ್ ಲೈಬ್ರರಿಗೆ ಭೇಟಿ ನೀಡಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಪ್ರಚಲಿತ ವಿದ್ಯಮಾನಗಳು ಅಪ್ಡೇಟ್ ಆಗುತ್ತಲೇ ಇರುತ್ತದೆ. ಇಲ್ಲಿಗೆ ಭೇಟಿ ನೀಡುವವರಿಗೆ ಉಚಿತವಾಗಿ ಇಂಟರ್ನೆಟ್ ಸೌಲಭ್ಯವನ್ನು ಕೂಡ ಒದಗಿಸಿಕೊಡಲಾಗುತ್ತದೆ. ಡಿಜಿಟಲ್ ಲೈಬ್ರರಿಯ ವೆಬ್ ಸೈಟ್ ನಲ್ಲಿ 5000ಕ್ಕೂ ಹೆಚ್ಚು ಸ್ಮಾರ್ಟ್ ಇಬುಕ್ಸ್ , 85ಕ್ಕೂ ಹೆಚ್ಚು ದಿನಪತ್ರಿಕೆಗಳು, 14 ಮಿಲಿಯನ್ ಸಂಶೋಧನಾ ಪ್ರಬಂಧಗಳು ಲಭ್ಯವಿದೆ.

ಜ್ಞಾನ ಬಂಡಾರ ಹೆಚ್ಚಿಸಿಕೊಳ್ಳಲು ತುಮಕೂರು ಹೃದಯಭಾಗದಲ್ಲಿರುವ ಡಿಜಿಟಲ್ ಲೈಬ್ರರಿಗೆ ಬರಬೇಕೆಂದಿಲ್ಲ ಬದಲಾಗಿ ಡಿಜಿಟಲ್ ಲೈಬ್ರರಿಯ ವೆಬ್ ಸೈಟಿಗೆ ಭೇಟಿ ನೀಡಿ ಎಲ್ಲಿದ್ದರೂ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಬೈಟ್: ಸಿದ್ದಿಬಾಬು, ಸಂಶೋಧನಾ ವಿಧ್ಯಾರ್ಥಿ(ನೀಲಿ ಶರ್ಟ್ ಧರಿಸಿದ್ದಾರೆ....)
ಬೈಟ್: ಭಾಸ್ಕರ್, ಉದ್ಯೋಗಾಕಾಂಕ್ಷಿ(ಕೆಂಪು ಶರ್ಟ್ ಧರಿಸಿದ್ದಾರೆ.....)

Body:ತುಮಕೂರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.