ತುಮಕೂರು: ಮುಖ್ಯಮಂತ್ರಿಯಾಗಿ ಬಿ. ಎಸ್. ಯಡಿಯೂರಪ್ಪ ಇಂದು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೆದೇವರು ಯಡಿಯೂರಿನ ಶ್ರೀ ಸಿದ್ದಲಿಂಗೇಶ್ವರ ದೇಗುಲದ ಅರ್ಚಕರು ಯಡಿಯೂರಪ್ಪ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಯಡಿಯೂರಪ್ಪ ಅವರಿಗೆ ಸದಾಕಾಲ ಸ್ಥಿರವಾಗಿರಲಿ, ಪ್ರಮಾಣವಚನ ಸಂದರ್ಭದಲ್ಲಿ ದೋಷಗಳು ನಿವಾರಣೆಯಾಗಲಿ ಎಂದು ಅರ್ಚಕರು ಇದೇ ವೇಳೆ ಪ್ರಾರ್ಥಿಸಿದರು.
ನಂತರ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಸುಮಾರು 10 ನಿಮಿಷಗಳ ಕಾಲ ವಿಶೇಷ ಅರ್ಚನೆ ಮಾಡಲಾಗಿದೆ.