ತುಮಕೂರು: ಲಾಕ್ಡೌನ್ ವಿಧಿಸಿದ ನಂತರ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ. ಆದರೆ ಪಾವಗಡ ತಾಲೂಕಿನ ಸುತ್ತಲೂ ಆಂಧ್ರ ಪ್ರದೇಶ ಸುತ್ತುವರೆದು ಅಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನೆಲೆಯಲ್ಲಿ ತಾಲೂಕಿನ ಗಡಿಗಳನ್ನು ಮತ್ತಷ್ಟು ಬೀಗಿ ಮಾಡಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಮಧುಗಿರಿ ಎಸಿ, ಡಿವೈಎಸ್ಪಿ, ಮಡಕಶಿರ, ದೋಮ್ಮತಮರಿ, ಗುಮ್ಮಘಟ್ಟ, ಅಕ್ಕಮ್ಮನಹಳ್ಳಿ ಸಮೀಪದ ಕೊತ್ತಪಲ್ಲಿ ಗಡಿ ಹಾಗೂ ಹಿಂದುಪುರದ ಪರಿಗಿ ಗಡಿ ಭಾಗದಲ್ಲಿನ ತಪಾಸಣಾ ಕೇಂದ್ರಗಳನ್ನು ಪರಿಶೀಲನೆ ನಡೆಸಿ ಸ್ಥಳೀಯರಿಂದ ಕೂಡ ಮಾಹಿತಿ ಪಡೆದಿದ್ದಾರೆ.