ತುಮಕೂರು: ಜಿಲ್ಲೆಯಲ್ಲಿಂದು 194 ಮಂದಿ ಕೊರೊನಾ ಸೋಂಕಿಗೊಳಗಾಗಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,751ಕ್ಕೆ ಏರಿಕೆಯಾಗಿದೆ.
ಇಂದು 99 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ ಗುಣಮುಖರಾದವರ ಸಂಖ್ಯೆ 3,452ಕ್ಕೆ ಏರಿಕೆಯಾಗಿದೆ. 1,152 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ನಾಲ್ಕು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಮೃತರ ಸಂಖ್ಯೆ 147ಕ್ಕೆ ಏರಿಕೆ ಆಗಿದೆ.
ಇಂದು ತುಮಕೂರು ತಾಲ್ಲೂಕಿನಲ್ಲಿ 91 ಮಂದಿ ಸೋಂಕಿಗೆ ಒಳಗಾಗಿದ್ದು, ತುರುವೇಕೆರೆ ತಾಲೂಕಿನಲ್ಲಿ 22, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 20, ಕುಣಿಗಲ್ ತಾಲೂಕಿನಲ್ಲಿ 15 , ತಿಪಟೂರು ತಾಲ್ಲೂಕಿನಲ್ಲಿ 13 , ಪಾವಗಡ ಮತ್ತು ಶಿರಾ ತಾಲೂಕಿನಲ್ಲಿ ತಲಾ 7, ಮಧುಗಿರಿ ಮತ್ತು ಗುಬ್ಬಿ ತಾಲೂಕಿನಲ್ಲಿ ತಲಾ ಆರು ಮಂದಿ ಸೋಂಕಿಗೆ ಒಳಗಾಗಿದ್ದಾರೆ.