ತುಮಕೂರು : ಲೋಕಸಭಾ ಚುನಾವಣೆ ಬರುತ್ತಿರುವುದರಿಂದ ಬಿಜೆಪಿಯವರು ಪೇಸಿಎಂ ಹಾಗೂ ಡಿಸಿಎಂ ಎಂಬುದನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡ್ತಿದ್ದಾರೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ತುಮಕೂರಿನಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಲ್ಲಿ ಉಂಟಾದ ಸಂತೋಷಕ್ಕೆ ಜನರಲ್ಲಿ ಗೊಂದಲ ಉಂಟುಮಾಡಲು, ಈ ರೀತಿಯಾಗಿ ಅಪಪ್ರಚಾರ ಮಾಡ್ತಿದ್ದಾರೆ. ಇದೆಲ್ಲವೂ ಸತ್ಯಕ್ಕೆ ದೂರವಾದದ್ದು ಎಂದರು.
ಗುತ್ತಿಗೆದಾರರಲ್ಲೂ ಕಮಿಷನ್ ಪಡೆಯಲು ಏಜೆಂಟ್ ಇದ್ದಾರೆಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಗುತ್ತಿಗೆದಾರರು ಅರ್ಜಿ ಕೊಡುತ್ತಿದ್ದಾರೆ ಅನ್ನೋದು ಸಹ ನಿರಾಧಾರ. ಆರೋಪಗಳ ಮೇಲೆ ನ್ಯಾಯಾಂಗದ ಮೊರೆ ಹೋಗಿ ಅಲ್ಲೂ ಕೂಡಾ ಆರೋಪಗಳನ್ನು ಮಾಡ್ತಿರುವವರ ಮೇಲೆ, ಕಾನೂನು ಕ್ರಮ ಕೈಗೊಳ್ಳುವ ಪ್ರಯತ್ನವನ್ನು ನಾವು ಮಾಡ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ಬರುವ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು, ಹೋಗಬಹುದು ಎಂದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಫಂಡ್ ಕಲೆಕ್ಷನ್ - ಆರ್.ಅಶೋಕ್ : ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಷನ್‍ಗೆ ಇಳಿದಿರುವಂತಿದೆ. ನಮ್ಮ ಸರ್ಕಾರದ ವಿರುದ್ಧ ಪೇಸಿಎಂ ಆರೋಪ ಮಾಡಿದ್ದರು. ಆದರೆ, ಈಗ ಪೇ ಕಾಂಗ್ರೆಸ್, ಪೇಸಿಎಂ, ಪೇ ಡಿಸಿಎಂ ಆಗಿದೆಯೇ ಎಂದು ಆರ್.ಅಶೋಕ್ (ಆಗಸ್ಟ್ 10-2023) ಪ್ರಶ್ನಿಸಿದ್ದರು. ನಮ್ಮ ಸರ್ಕಾರದ ಅವಧಿಯ ಕಾಮಗಾರಿಗಳ ತನಿಖೆಗೆ ಮುಂದಾಗಿರುವ ನೀವೇನು ಸತ್ಯಹರಿಶ್ಚಂದ್ರರೇ?. 2013ರಿಂದ ತನಿಖೆ ನಡೆಸಿ ಎಂದು ಇದೇ ವೇಳೆ ಸವಾಲೆಸೆದಿದ್ದರು.
ಪದ್ಮನಾಭನಗರದ ಶಾಸಕರ ಕಚೇರಿಯಲ್ಲಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರು, ಕಾಂಗ್ರೆಸ್ ಅಧಿಕಾರ ಪಡೆದರೆ ಎಟಿಎಂ ಸರ್ಕಾರದ ಮುನ್ಸೂಚನೆ ಕೊಟ್ಟಿದ್ದರು. ಅವರ ಮಾತು ನೂರಕ್ಕೆ ನೂರು ಸತ್ಯ ಎಂದು ಟೀಕಿಸಿದ್ದರು. ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಪೇಸಿಎಂ ಎಂದು ಅಪಪ್ರಚಾರ ಮಾಡಿದ್ದರು. ಈಗ ಪೇ ಕಾಂಗ್ರೆಸ್, ಪೇ ಸಿಎಂ, ಪೇ ಡಿಸಿಎಂ ಆಗಿದೆಯೇ? ಎಂದು ಕೇಳಿದರು.
ನಾವು ನಿಮ್ಮ ಜೇಬಿಗೆ ಹಣ ನೀಡುತ್ತೇವೆ - ಸಿಎಂ ಸಿದ್ದರಾಮಯ್ಯ : ಅಂದಿನ ಡಬಲ್ ಇಂಜಿನ ಸರ್ಕಾರ (ಬಿಜೆಪಿ) ನಿಮ್ಮ ಜೇಬಿಗೆ ಕತ್ತರಿ ಹಾಕಿ ಹಣ ಹೊಡೆದರು. ನಮ್ಮ ಸರ್ಕಾರ ನೀವು ಖರ್ಚು ಮಾಡಬೇಕೆಂದು ನಿಮಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡುತ್ತಿದ್ದೇವೆ. ಇಂತಹ ಅವಕಾಶ ನಿಮಗೆ ಎಂದೂ ಬಾರದು. ನಮ್ಮದು ಜನಪರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿಂದು ವಿವಿಧ ಕಾಮಗಾರಿಗಳು ಮತ್ತು ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆ ನೆರವೇರಿಸಿ ಸಿಎಂ ಮಾತನಾಡಿದರು. ಅಥಣಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಪೇ ಕಾಂಗ್ರೆಸ್, ಪೇ ಸಿಎಂ, ಪೇ ಡಿಸಿಎಂ ಮೂಲಕ ಲೋಕಸಭೆ ಚುನಾವಣೆಗೆ ಫಂಡ್ ಕಲೆಕ್ಷನ್: ಆರ್.ಅಶೋಕ್