ETV Bharat / state

ಕೊಬ್ಬರಿ ಬೆಳೆಗಾರರಿಗೆ ಬಂಪರ್.. ಕ್ವಿಂಟಲ್​ಗೆ 17 ಸಾವಿರ ರೂ ಗಡಿ ದಾಟಿದ ಬೆಲೆ

ಕಳೆದ ಆರು ತಿಂಗಳಿನಿಂದ ಪ್ರತಿ ಕ್ವಿಂಟಲ್​​​ಗೆ 15 ಸಾವಿರ ರೂ. ನ ಆಸುಪಾಸಿನಲ್ಲಿಯೇ ಬಿಕರಿಯಾಗುತ್ತಿತ್ತು. ಪ್ರಸ್ತುತ ಪ್ರತಿ ಕ್ವಿಂಟಲ್ ಗೆ 17,021 ರೂ. ದಾಟಿದೆ. ಈಗಾಗಲೇ ಕೊರೊನಾ ಸೋಂಕಿನ ಅಬ್ಬರದಿಂದ ಆರ್ಥಿಕ ಸಂಕಷ್ಟದಲ್ಲಿದ್ದ ತೆಂಗು ಬೆಳೆಗಾರರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.

coconut-price-increased-in-tumkur
ಕೊಬ್ಬರಿ
author img

By

Published : Aug 3, 2021, 6:13 PM IST

Updated : Aug 3, 2021, 6:57 PM IST

ತುಮಕೂರು: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ಬಿಕರಿಯಾಗುತ್ತಿತ್ತು. ಅನೇಕ ತಿಂಗಳಿನಿಂದ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಸ್ಥಿರವಾಗಿದ್ದ ಕೊಬ್ಬರಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಪ್ರತಿ ಕ್ವಿಂಟಲ್ ಕೊಬ್ಬರಿ ಈಗ 17 ಸಾವಿರ ರೂ. ಗೆ ಮಾರಾಟವಾಗುತ್ತಿದೆ.

ಕೊಬ್ಬರಿ ಬೆಲೆ ಏರಿಕೆ ಬಗ್ಗೆ ವ್ಯಾಪಾರಸ್ಥರು ಮಾತನಾಡಿದ್ದಾರೆ

ಸಾಮಾನ್ಯವಾಗಿ ತಿಪಟೂರು ಕೊಬ್ಬರಿ ಮಾರುಕಟ್ಟೆ ಮಂಡಿಯಿಂದ ಹೊರರಾಜ್ಯಕ್ಕೆ ಕೊಬ್ಬರಿ ಸರಬರಾಜು ಆಗುತ್ತದೆ. ಆದರೆ, ಅನೇಕ ದಿನಗಳಿಂದ ಹೊರ ರಾಜ್ಯದಲ್ಲಿ ಕೊಬ್ಬರಿಗೆ ಅಪಾರ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ. ಹಲವು ದಿನಗಳಿಂದ ತೆಂಗು ಬೆಳೆಗಾರರು ಕೊಬ್ಬರಿಗೆ ಉತ್ತಮ ಬೆಲೆ ಲಭಿಸಲಿದೆ ಎಂಬ ನಿರೀಕ್ಷೆ ಹೊಂದಿದ್ದರು. ಆದರೆ, ಇದು ರೈತರಿಗೆ ಧಕ್ಕಿರಲಿಲ್ಲ.

ಕಳೆದ ಆರು ತಿಂಗಳಿನಿಂದ ಪ್ರತಿ ಕ್ವಿಂಟಲ್ ಗೆ 15 ಸಾವಿರ ರೂ. ನ ಆಸುಪಾಸಿನಲ್ಲಿಯೇ ಬಿಕರಿಯಾಗುತ್ತಿತ್ತು. ಪ್ರಸ್ತುತ ಪ್ರತಿ ಕ್ವಿಂಟಲ್ ಗೆ 17,021 ರೂ. ದಾಟಿದೆ. ಈಗಾಗಲೇ ಕೊರೊನಾ ಸೋಂಕಿನ ಅಬ್ಬರದಿಂದ ಆರ್ಥಿಕ ಸಂಕಷ್ಟದಲ್ಲಿದ್ದ ತೆಂಗು ಬೆಳೆಗಾರರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.

ಹೊರ ರಾಜ್ಯದಲ್ಲಿ ಹೆಚ್ಚಿದ ಬೇಡಿಕೆ: 3ನೇ ಅಲೆಯ ಭೀತಿಯಲ್ಲಿರುವ ಜನರು ಮತ್ತು ಮಾರಾಟಗಾರರು ಕೊಬ್ಬರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಅಲ್ಲದೆ, ಮುಖ್ಯವಾಗಿ ಎಣ್ಣೆ ಕಾಳುಗಳ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ಇದರಿಂದಾಗಿ ಕೊಬ್ಬರಿ ಎಣ್ಣೆ ಬಳಕೆಗೆ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಇದು ಕೊಬ್ಬರಿ ಬೆಲೆ ಏರಿಕೆಗೆ ಕಾರಣವಾಗಿದೆ. ಇದರಿಂದಾಗಿ ಹೊರ ರಾಜ್ಯದಲ್ಲಿ ಬೇಡಿಕೆ ಹೆಚ್ಚಿದೆ ಎಂದು ಅಂದಾಜಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ದುಬಾರಿ ಬೆಲೆಯ ಗೊಬ್ಬರ ಮತ್ತು ಕೀಟನಾಶಕಗಳಿಂದ ರೈತರು ತೆಂಗಿನ ಮರಗಳ ಸಂರಕ್ಷಣೆ ಮಾಡುತ್ತಿದ್ದಾರೆ. ಪರಿಣಾಮ ತೆಂಗು ಬೆಳೆ ಆರ್ಥಿಕ ದುಃಸ್ಥಿತಿಗೆ ತಳ್ಳಲ್ಪಡುವಂತಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಗೆ 17 ಸಾವಿರ ರೂ.ಗೆ ಕೊಬ್ಬರಿ ಮಾರಾಟವಾಗುತ್ತಿದೆ. ಪರಿಣಾಮ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

ತೆಂಗಿನ ಬೆಳೆ ಪ್ರಮಾಣ ಕ್ಷೀಣ: ತಿಪಟೂರು ಮಾರುಕಟ್ಟೆಗೆ ಕೊಬ್ಬರಿ ಆವಕ ಪ್ರಮಾಣ ಕೂಡ ಕ್ಷೀಣಿಸಿದೆ. ಈ ಬಾರಿ ತೆಂಗಿನ ಬೆಳೆ ಪ್ರಮಾಣ ಕ್ಷೀಣಿಸಿರುವುದು ಸಹ ಬೆಲೆಯಲ್ಲಿ ಏರಿಕೆ ಆಗಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಓದಿ: ರಾಮನಗರದಲ್ಲಿ 18 ಭುಜಗಳ ಚಾಮುಂಡೇಶ್ವರಿ ಪಂಚಲೋಹದ ವಿಗ್ರಹ ಲೋಕಾರ್ಪಣೆಗೆ ಸಿದ್ಧತೆ

Last Updated : Aug 3, 2021, 6:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.