ತುಮಕೂರು: ಹಳೆಯ ಕ್ರೈಸ್ತ ದೇವಾಲಯಗಳಲ್ಲಿ ಒಂದಾದ ಹೊರಪೇಟೆಯ ಲೂರ್ದು ಮಾತಾ ದೇವಾಲಯದ 140 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕ್ರೈಸ್ತ ಬಾಂಧವರು ಎಲ್ಲರಿಗೂ ಒಳಿತನ್ನು ಮಾಡು ದೇವರೆ ಎಂದು ಪ್ರಾರ್ಥನೆ ಸಲ್ಲಿಸಿದರು.
ವಾರ್ಷಿಕ ಹಬ್ಬದ ಪ್ರಯುಕ್ತ ಲೂರ್ದು ಮಾತೆಯ ಗವಿಯ ಬಳಿ ಜಪಸರ, ದಿವ್ಯ ಬಲಿಪೂಜೆ, ಲೂರ್ದು ಮಾತೆಯ ಹಬ್ಬದ ಧ್ವಜಾರೋಹಣ ನಡೆಯಿತು. ಧ್ವಜಾರೋಹಣದ ನಂತರ ಬೆಂಗಳೂರಿನ ಧರ್ಮಕ್ಷೇತ್ರದ ಗುರುಗಳಾದ ಸ್ವಾಮಿ ಜೋಸೆಫ್ ನವೀನ್ ಕುಮಾರ್ ಭಕ್ತರಿಗೆ ಪ್ರವಚನ ನೀಡಿದರು.
ಈ ಸಂದರ್ಭದಲ್ಲಿ ಸ್ವಾಮಿ ಮೈಕಲ್ ವೈ ಮತ್ತು ಲೂರ್ದು ಮಾತೆ ದೇವಾಲಯದ ಗುರುಗಳಾದ ಜೇಮ್ಸ್ ಸ್ವಾಮಿ ಪ್ರಭು ಹಾಗೂ ಸಭೆಯ ಕ್ರೈಸ್ತ ಬಾಂಧವರು ಪಾಲ್ಗೊಂಡಿದ್ದರು.