ತುಮಕೂರು: ಜಿಲ್ಲೆಯ ಕೊರಟಗೆರೆ ಸಮೀಪದ ತಣ್ಣೇನಹಳ್ಳಿ ಗ್ರಾಮದ ಗೆಸ್ಟ್ ಹೌಸ್ವೊಂದರಲ್ಲಿ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆಯಾಗಿದೆ.
ಬೆಂಗಳೂರು ನಿವಾಸಿ ಮುರಳಿಧರ್ ಎಂಬುವರ ಗೆಸ್ಟ್ ಹೌಸ್ನಲ್ಲಿ ಕಾಟನ್ ಬಾಕ್ಸ್ ಒಳಗೆ ಹಾವು ಕಾಣಿಸಿಕೊಂಡಿತ್ತು. ತಕ್ಷಣ ಅವರು ವಾರಂಗಲ್ ಫೌಂಡೇಶನ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣೆ ಸಂಸ್ಥೆಗೆ ಕರೆ ಮಾಡಿದರು. ಸ್ಥಳಕ್ಕಾಗಮಿಸಿದ ಉರಗ ತಜ್ಞ ದಿಲೀಪ್ ಅಪರೂಪದ ಬೆಕ್ಕಿನ ಕಣ್ಣಿನ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದರು. ಬಳಿಕ ತುಮಕೂರು ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ಬೆಕ್ಕಿನ ಕಣ್ಣಿನ ಹಾವಿನ ಬಗ್ಗೆ ಒಂದಿಷ್ಟು ಮಾಹಿತಿ..: ಅಪರೂಪದ ಹಾವನ್ನು ಸಾಮಾನ್ಯವಾಗಿ ಭಾರತೀಯ ಕ್ಯಾಟ್ ಸ್ನೇಕ್ ಎಂದು ಕರೆಯಲಾಗುತ್ತದೆ. ಇವು ದಕ್ಷಿಣ ಏಷ್ಯಾಕ್ಕೆ ಸೀಮಿತವಾಗಿವೆ. ಹಿಂಬದಿ ಕೋರೆ ಹಲ್ಲುಗಳನ್ನು ಹೊಂದಿರುವ ಜಾತಿಗೆ ಸೇರಿದ ಹಾವು ಇದಾಗಿದೆ.
ಇದನ್ನೂ ಓದಿ: ಅಪರೂಪದ ರಣಹದ್ದು ಪತ್ತೆ: ಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರ