ETV Bharat / state

ತುಮಕೂರು: ಬೋನಿಗೆ ಬಿದ್ದ ಮರಿ ಹುಡುಕಿ ಬಂದ ತಾಯಿ ಕರಡಿಯೂ ಸೆರೆ - ಈಟಿವಿ ಭಾರತ ಕನ್ನಡ

ತುಮಕೂರಿನ ಕಲ್ಲಹಳ್ಳಿಯಲ್ಲಿ ಕರಡಿ ಉಪಟಳವಿದೆ. ಅರಣ್ಯ ಇಲಾಖೆಯಿಂದ ಕರಡಿ ಸೆರೆ ಕಾರ್ಯಾಚರಣೆ ನಡೆಯುತ್ತಿದೆ.

bear-captured-by-forest-dept-in-tumkur
ಬೋನಿಗೆ ಬಿದ್ದ ಮರಿಯನ್ನು ಹುಡುಕಿಕೊಂಡು ಬಂದ ತಾಯಿ ಕರಡಿ
author img

By

Published : Jan 4, 2023, 6:27 AM IST

ತುಮಕೂರು : ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕರಡಿಗಳನ್ನು ಬೋನಿನಲ್ಲಿ‌ ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗುತ್ತಿದೆ. ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಕಲ್ಲಹಳ್ಳಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಮರಿ ಕರಡಿಯನ್ನು ಹುಡುಕಿಕೊಂಡು ಬಂದ ತಾಯಿ ಕರಡಿಯನ್ನೂ ಸೆರೆಹಿಡಿಯಲಾಗಿದ್ದು, ಎರಡನ್ನೂ ಕಾಡಿಗೆ ಬಿಡಲಾಗಿದೆ.

ಕಳೆದೊಂದು ತಿಂಗಳಿನಿಂದ ಇಲ್ಲಿನ ಗ್ರಾಮಗಳ ಸುತ್ತಮುತ್ತ ಕರಡಿಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದವು. ಕರಡಿಗಳನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಇಲಾಖೆ ಬೋನು ಇಟ್ಟಿತ್ತು. ಕಾರ್ಯಾಚರಣೆಯಲ್ಲಿ ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ, ವಲಯ ಅರಣ್ಯಾಧಿಕಾರಿ ನವನೀತ್,ಉಪ ವಲಯ ಅರಣ್ಯಾಧಿಕಾರಿ ನಾಗರಾಜು, ಗಸ್ತು ಅರಣ್ಯ ಪಾಲಕರಾದ ನಿಂಗರಾಜು,ವಿನೋದ್,ಮೋಹನ್,ಧನಂಜಯ,ಮಲ್ಲಯ,ದುರುಗಪ್ಪ, ಗಂಗಣ್ಣ ಮತ್ತು ಅರವಳಿಕೆ ತಜ್ಞರಾದ ಯಶಸ್,‌ ಶ್ರೀಧರ್ ಹಾಗೂ ವಲಯದ ಸಿಬ್ಬಂದಿ ಇದ್ದರು.

ಇದನ್ನೂ ಓದಿ : ಹಾಸನ : ಹಿನ್ನೀರಿನಲ್ಲಿ ಕಾಡಾನೆಗಳ ಬಿಂದಾಸ್​​ ಆಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.