ETV Bharat / state

ತಾಕತ್ತಿದ್ದರೆ ನನ್ನ ವಿರುದ್ಧ ಸಹಿ ಮಾಡಿರುವ ಶಾಸಕರ ಹೆಸ್ರು ಬಹಿರಂಗಪಡಿಸಲಿ: ಯತ್ನಾಳ್​​ ಸವಾಲು - ಯತ್ನಾಳ್​ ಶಾಸಕರ ಸಹಿ ಸಂಗ್ರಹಣೆ

ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ಟೀಕೆ ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಕ್ರಮ ಕೈಗೊಳ್ಳುವಂತೆ ವರಿಷ್ಠರ ಮೇಲೆ ಒತ್ತಡ ಹಾಕಲು ಶಾಸಕರ ಸಹಿ ಸಂಗ್ರಹಣೆ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದ್ದು, ಇದಕ್ಕೆ ಖುದ್ದಾಗಿ ಯತ್ನಾಳ್​ ಪ್ರತಿಕ್ರಿಯೆ ನೀಡಿದ್ದಾರೆ.

Basangouda Patil Yatna
Basangouda Patil Yatna
author img

By

Published : Mar 26, 2021, 2:01 AM IST

ತುಮಕೂರು: ತಾಕತ್ತಿದ್ದರೆ ನನ್ನ ವಿರುದ್ಧ ಸಹಿ ಮಾಡಿರುವ ಶಾಸಕರ ಹೆಸರನ್ನು ಬಹಿರಂಗಪಡಿಸಲಿ, ಜತೆಗೆ ಪತ್ರವನ್ನು ಬಹಿರಂಗ ಪಡಿಸಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.

ಬಸವರಾಜ್​ ಯತ್ನಾಳ್​ ಪಾಟೀಲ್​ ಸವಾಲು

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಸಹಿ ಮಾಡಿದ್ದಾರೆಂದು ಹೇಳುತ್ತಿರುವ ಶಾಸಕರೇ ನನ್ನ ಬಳಿ ಬಂದು ನಾವು ಸಹಿ ಮಾಡಿಲ್ಲ ಎಂದು ತಿಳಿಸಿದ್ದಾರೆ. ಶಾಸಕರು ಸಹಿ ಮಾಡಿರುವ ಪತ್ರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರೂ. ಅನುದಾನ ನೀಡಬೇಕೆಂದು ಒತ್ತಾಯಿಸಲಾಗಿದೆ. ಆದರೆ ಅದನ್ನು ದುರುಪಯೋಗಪಡಿಸಿ ಕೊಳ್ಳಲಾಗಿದೆ ಎಂದು ಕರಾವಳಿ ಭಾಗದ ಶಾಸಕರು ಗಲಾಟೆ ಮಾಡಿದ್ದಾರೆ.

ಯತ್ನಾಳ್ ವಿರುದ್ಧ ಯಾವುದೇ ಶಾಸಕರು ಸಹಿ ಮಾಡಿಲ್ಲ. ಅಭಿವೃದ್ಧಿಗೆ ಅನ್ಯಾಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು. ಜೆಡಿಎಸ್​-ಕಾಂಗ್ರೆಸ್​​ ಶಾಸಕರ ಕ್ಷೇತ್ರಗಳಿಗೆ ಬಂಪರ್ ಅನುದಾನ ನೀಡಲಾಗಿದೆ.

ಇದನ್ನೂ ಓದಿ: ಯತ್ನಾಳ್ ವಿರುದ್ಧ ಕ್ರಮಕ್ಕೆ ಬಿಜೆಪಿ ಶಾಸಕರ ಸಹಿ ಸಂಗ್ರಹಣೆ

ಕುಡಚಿ ಶಾಸಕರ ಕ್ಷೇತ್ರಕ್ಕೆ 1ಕೋಟಿ ರೂ. ಅನುದಾನ ನೀಡಲಾಗಿದೆ. ಮುಖ್ಯಮಂತ್ರಿ ಸಂಬಂಧಿ ಬೆಂಗಳೂರು ಜಿಲ್ಲಾ ಪಂಚಾಯತ್​ಗೆ ಮರಿಸ್ವಾಮಿ ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯಿತಿಗೆ 65 ಕೋಟಿ ರೂ. ಅನುದಾನ ನೀಡಲಾಗಿದೆ. ಜಿಲ್ಲಾ ಪಂಚಾಯಿತಿ ಬಿಜೆಪಿ ಅಧ್ಯಕ್ಷರಿರುವ ಕಡೆಯೂ ಕೂಡ ಈ ರೀತಿಯಾಗಿ ಅನುದಾನ ನೀಡಬೇಕಿತ್ತು. ಆದರೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನ್ನ ವಿರುದ್ಧ ಸಹಿ ಸಂಗ್ರಹ ಮಾಡಿ ಏನ್​ ಮಾಡ್ತಾರೆ. ಈಗಾಗಲೇ ಶೋಕಾಸ್ ನೋಟಿಸ್ ನನಗೆ ಕೊಟ್ಟು 48 ದಿನಗಳಾಗಿದೆ. ಇನ್ನು ಕ್ರಮ ಆಗಿಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.

ಸುಧಾಕರ್ ಹೇಳಿಕೆಗೆ ಟಾಂಗ್ ನೀಡಿದ ಯತ್ನಾಳ್​

ನಿಮ್ಮದು ಅಷ್ಟೇ ನೀವು ಮಾತನಾಡಬೇಕು ಬೇರೆಯವರ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ. 225 ಜನ ಶಾಸಕರ ಬಗ್ಗೆ ಮಾತನಾಡುವ ಹಕ್ಕು ಕೊಟ್ಟವರು ಯಾರು ಇವರಿಗೆ? ಇದಕ್ಕೆ ಸಾಕಷ್ಟು ಛೀಮಾರಿ ಆಗಿದೆ. ಅಲ್ಲದೆ ಸಚಿವ ಸುಧಾಕರ್ ಅದಕ್ಕೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಇದು ಮುಗಿದ ಅಧ್ಯಾಯ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.