ತುಮಕೂರು: ಮದ್ಯದಂಗಡಿಯನ್ನು ಸೀಸ್ ಮಾಡಿದ್ದರೂ, ಅಬಕಾರಿ ಇಲಾಖೆ ಅಧಿಕಾರಿಗಳ ಯೆಡವಟ್ಟಿನಿಂದ ಮಾಲೀಕ ಮಾತ್ರ ತನ್ನ ಕೈಚಳಕ ತೋರಿಸಿ ಅಂಗಡಿ ತೆರೆದು ಮದ್ಯ ಮಾರುತ್ತಿದ್ದಾನೆಂದು ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಮನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಬಾರ್ ಬಾಗಿಲಿಗೆ ಸೀಲ್ ಹಾಕಿ ಬೀಗ ಹಾಕಿದ್ದರೂ ರಾತ್ರಿ ವೇಳೆ ಸೀಲ್ ಓಪನ್ ಮಾಡಿ ದುಪ್ಪಟ್ಟು ದರದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಸೀಲ್ ಹಾಕಿರುವ ತರಹ ನಾಟಕ ಮಾಡಿರುವ ಅಧಿಕಾರಿಗಳು, ಕೀ ಓಪನ್ ಮಾಡುವ ಜಾಗದಲ್ಲಿ ಸೀಲ್ ಹಾಕದೇ ಬಿಟ್ಟಿದ್ದಾರೆ. ಪ್ರತಿರಾತ್ರಿ ಬಾರ್ ಓಪನ್ ಮಾಡಿ ಮದ್ಯವನ್ನು ದುಪ್ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ತಿಮ್ಮನಹಳ್ಳಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ರಾತ್ರಿ ವೇಳೆ ಕುಡುಕರು ಮದ್ಯ ಸೇವಿಸಿ ಪುಂಡಾಟ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ. ಆಕ್ರೋಶಗೊಂಡ ಜನರು ಬಾರ್ ಬಳಿ ಹೋಗಿ ಸತ್ಯಾಸತ್ಯತೆ ಪರಿಶೀಲಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.