ತುಮಕೂರು: ಶ್ರೀ ಸಿದ್ಧಗಂಗಾ ಮಠದ ಉದ್ದನೇಶ್ವರ ಸಮುದಾಯ ಭವನದಲ್ಲಿ, ಪಂಡಿತ ಚನ್ನಪ್ಪ ಎರೇಸೀಮೆಯವರ ಜನ್ಮಶತಮಾನೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಡಿತ ಚನ್ನಪ್ಪ ಎರೇಸೀಮೆಯವರ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಮಠದ ಕಾರ್ಯಕ್ರಮವನ್ನಾಗಿ ಮಾಡುವ ಇಚ್ಛೆ ನಮ್ಮೆಲ್ಲರದ್ದಾಗಿತ್ತು. ಚನ್ನಪ್ಪ ಅವರಿಗೆ ಹಾಗೂ ಮಠಕ್ಕೆ ಇರುವ ಸಂಬಂಧ ಹಾಗೂ ಅವರು ಮಠಕ್ಕೆ ನೀಡಿರುವಂತಹ ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ನಾಡಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅವರ ಸೇವೆ ಅಪಾರವಾದದ್ದು, ಈ ವಿಚಾರ ಸಂಕಿರಣ ಅವರ ಜೀವನದ ಮೇಲೆ ಬೆಳಕು ಚೆಲ್ಲುವಂತಹ ಕಾರ್ಯವಾಗಬೇಕಿದೆ. ಸಾಹಿತ್ಯಕ್ಕೆ ನೀಡಿರುವಂತಹ ಕೃತಿಯಿಂದ ಅವರು ಅಜರಾಮರರಾಗಿರುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಎರೆಸೀಮೆಯವರ ಬದುಕು-ಬರಹ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.