ETV Bharat / state

ತುಮಕೂರು: ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಬಾಲಕನ ಗುಪ್ತಾಂಗ ಸುಟ್ಟ ಶಿಕ್ಷಕಿ! - ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಬಾಲಕನ ಗುಪ್ತಾಂಗಕ್ಕೆ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಬೆಂಕಿ ಕಡ್ಡಿಯಿಂದ ಸುಟ್ಟು ಗಾಯ ಮಾಡಿದ್ದಾರೆ.

anganwadi-teacher-and-helper-burned-the-genitals-of-a-three-year-old-boy-in-tumakur
ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಬಾಲಕನನ್ನು ಹೆದರಿಸಲೆಂದು ಗುಪ್ತಾಂಗಕ್ಕೆ ಸುಟ್ಟು ಗಾಯ
author img

By

Published : Aug 30, 2022, 4:02 PM IST

Updated : Aug 30, 2022, 4:52 PM IST

ತುಮಕೂರು: ಪದೇ ಪದೇ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಬಾಲಕನನ್ನು ಹೆದರಿಸಲು ಅವನ ಗುಪ್ತಾಂಗಕ್ಕೆ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಗಾಯ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.

ಮೂರು ವರ್ಷದ ಬಾಲಕನೋರ್ವ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಎನ್ನಲಾಗ್ತಿದೆ. ಹೀಗಾಗಿ ಬೆಂಕಿ ಕಡ್ಡಿಯಿಂದ ಬಾಲಕನ ಗುಪ್ತಾಂಗವನ್ನು ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಸುಟ್ಟಿದ್ದಾರೆ. ಇದರಿಂದ ಬಾಲಕನ ಗುಪ್ತಾಂಗ ಮತ್ತು ತೊಡೆ ಬಳಿ ಸುಟ್ಟ ಗಾಯಗಳಾಗಿವೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಕ್ಕೆ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಧಾವಿಸಿದ್ದಾರೆ.

ಜೊತೆಗೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಬಾಲಕನ ಪೋಷಕರ ಹೇಳಿಕೆಯನ್ನು ಪಡೆದು ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಗೆ ನೋಟಿಸ್​ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ಮಲಗಿದ್ದ ಹುಡುಗಿ ಮೇಲೆ ಆ್ಯಸಿಡ್​ ಎರಚಿದ ಭಗ್ನ ಪ್ರೇಮಿ.. ಆಸ್ಪತ್ರೆಯಲ್ಲಿ ಬಾಲಕಿ ನರಳಾಟ

Last Updated : Aug 30, 2022, 4:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.