ETV Bharat / state

ಸೋಲಾರ್ ಪಾರ್ಕ್ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗದ ಭರವಸೆ ಹುಸಿ: ಪಾವಗಡ ಜನರ ಆರೋಪ - ಪಾವಗಡ ಸೋಲಾರ್ ಪಾರ್ಕ್

ಸೋಲಾರ್ ಪಾರ್ಕ್ ನಿರ್ಮಾಣದ ಸಮಯದಲ್ಲಿ ಕೆಲವು ಕಾಮಗಾರಿಗಳನ್ನು ನೀಡಲಾಗಿತ್ತು. ಈಗ ಆಡಳಿತ ಮತ್ತು ನಿರ್ವಹಣೆ ಕಾಮಗಾರಿಗಳು ಸ್ಥಳೀಯರಿಗೆ ನೀಡುತ್ತಿಲ್ಲ. ಕೇವಲ 800 ದಿಂದ 1000 ಜನಕ್ಕೆ ಮಾತ್ರ ಕೆಲಸ ನೀಡಿದ್ದಾರೆ. ಅವು ಸೆಕ್ಯೂರಿಟಿ ಮತ್ತು ಸೋಲಾರ್ ಪಾರ್ಕ್​ನಲ್ಲಿ ದಿನಗೂಲಿ ಕೆಲಸಗಳಾಗಿವೆ. ಹಾಗಾಗಿ, 80% ರೈತರು ಮತ್ತು ಸ್ಥಳೀಯರು ವಲಸೆ ಹೋಗುತ್ತಿದ್ದಾರೆ ಎಂಬ ಮಾತುಗಳು ತುಮಕೂರು ಜಿಲ್ಲೆಯಲ್ಲಿ ಕೇಳಿಬಂದಿವೆ.

solar-park
ಪಾವಗಡ ಸೋಲಾರ್ ಪಾರ್ಕ್
author img

By

Published : Oct 31, 2021, 4:57 PM IST

ತುಮಕೂರು: ಪಾವಗಡ ಸೋಲಾರ್ ಪಾರ್ಕ್ ಏಷ್ಯಾದ 2ನೇ ಅತಿದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 2050 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಬಳಿ ಈ ಪಾರ್ಕ್ ನಿರ್ಮಾಣ ಮಾಡಲಾಗಿದೆ. ತಿರುಮಣಿ ಗ್ರಾಮದ ಸುತ್ತಮುತ್ತಲಿನ ಸುಮಾರು 5 ಗ್ರಾಮದ ರೈತರು ಮತ್ತು ಸ್ಥಳೀಯರು ಸೇರಿ ಒಟ್ಟು 3000 ಕ್ಕಿಂತ ಹೆಚ್ಚು ಜನರು ಅಂದಾಜು 13,000 ಎಕರೆ ಭೂಮಿಯನ್ನು ಕೆ.ಎಸ್.ಪಿ.ಡಿ.ಸಿ.ಎಲ್ ಸಂಸ್ಥೆಗೆ ಗುತ್ತಿಗೆ ರೂಪದಲ್ಲಿ ನೀಡಿದ್ದರು. ಗುತ್ತಿಗೆ ಸಮಯದಲ್ಲಿ ಈ ಸಂಸ್ಥೆಯು ಇಲ್ಲಿ ಜಮೀನು ನೀಡುವ ರೈತರಿಗೆ 8000 ಸಾವಿರ ಉದ್ಯೋಗಗಳನ್ನು ನೀಡುವ ಭರವಸೆ ನೀಡಿತ್ತು. ಅದೀಗ ಹುಸಿಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಸ್ಥಳೀಯರಿಗೆ ಉದ್ಯೋಗ ಸಿಗದಿರುವುದರ ಕುರಿತು ಮಧುಸೂದನ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸೋಲಾರ್ ಪಾರ್ಕ್ ನಿರ್ಮಾಣದ ಸಮಯದಲ್ಲಿ ಕೆಲವು ಕಾಮಗಾರಿಗಳನ್ನು ನೀಡಲಾಗಿತ್ತು. ಈಗ ಆಡಳಿತ ಮತ್ತು ನಿರ್ವಹಣೆ ಕಾಮಗಾರಿಗಳನ್ನು ಸಹ ಸ್ಥಳೀಯರಿಗೆ ನೀಡುತ್ತಿಲ್ಲ. ಕೇವಲ 800 ದಿಂದ 1000 ಜನಕ್ಕೆ ಮಾತ್ರ ಕೆಲಸ ನೀಡಿದ್ದಾರೆ. ಅವು ಸೆಕ್ಯೂರಿಟಿ ಮತ್ತು ಸೋಲಾರ್ ಪಾರ್ಕ್​ನಲ್ಲಿ ದಿನಗೂಲಿ ಕೆಲಸಗಳಾಗಿವೆ. ಹಾಗಾಗಿ, 80% ರೈತರು ಮತ್ತು ಸ್ಥಳೀಯರು ವಲಸೆ ಹೋಗುತ್ತಿದ್ದಾರೆ.

ಸ್ಥಳೀಯರಿಗೆ ನೀಡಬೇಕಾದ ಕೆಲಸಗಳು, ಸೆಕ್ಯೂರಿಟಿ ಉದ್ಯೋಗಳು, ಟೆಕ್ನಿಷಿಯನ್, ಅರಣ್ಯ ಉಸ್ತುವಾರಿ, ಹುಲ್ಲು ಕತ್ತರಿಸುವ ಕಾಮಗಾರಿ, ಸೋಲಾರ್ ಮಾಡೆಲ್ ಸ್ವಚ್ಛಗೊಳಿಸುವ ಕೆಲಸ, ಆಡಳಿತ ಮತ್ತು ನಿರ್ವಹಣೆ ಕೆಲಸಗಳು ಸ್ಥಳೀಯರಿಗೆ ನೀಡುವಂತೆ ಸತತ 4 ವರ್ಷದಿಂದ ಕೆಎಸ್​ಡಿಸಿಎಲ್ ಸಂಸ್ಥೆಯ ವ್ಯವಸ್ಥಾಪಕರು ಮತ್ತು ಹಲವು ಕಂಪನಿಯವರ ಜೊತೆ ಮಾತನಾಡಿದರೂ ಉಪಯೋಗ ಇಲ್ಲದಂತಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾವಗಡದಲ್ಲಿನ ಸೋಲಾರ್ ಪಾರ್ಕ್​ನಲ್ಲಿ ನೂರಾರು ಕೋಟಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣರ ಹೇಳಿಕೆಗೆ ಇಲ್ಲಿನ ರೈತರು ದನಿಗೂಡಿಸಿದ್ದಾರೆ. ಪಾವಗಡ ತಾಲೂಕಿನ ತಿರುಮಣಿಯಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾದ ಪಾರ್ಕ್​ಗೆ ರೈತರಿಂದ ಕಡಿಮೆ ಬಾಡಿಗೆಗೆ ಭೂಮಿ ಪಡೆದು ವಂಚಿಸಿದ್ದಾರೆ ಅನ್ನೋದು ಆಪಾದನೆ.

ಅವ್ಯವಹಾರ ನಡೆಸಿ ರೈತರಿಗೆ ಮೋಸ ಆರೋಪ..

ಪ್ರತಿ ಎಕರೆಗೆ ವರ್ಷಕ್ಕೆ 30 ಸಾವಿರ ರೂ. ಬಾಡಿಗೆ ನಿಗದಿ ಮಾಡಬೇಕಿತ್ತು. ಆದರೆ, ಅಂದಿನ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ತಮಗೆ ಧಮಕಿ ಹಾಕಿ ಎಕರೆಗೆ ಕೇವಲ 21 ಸಾವಿರ ರೂ. ನಿಗದಿ ಮಾಡಿದ್ರು. ಇಲ್ಲಿ ಅದಾನಿ, ಟಾಟಾ ಪವರ್, ರಿಲಿ ಪವರ್ ಸೇರಿದಂತೆ ಹಲವು ಖಾಸಗಿ ಕಂಪನಿಗಳ ಜೊತೆ ಸೇರಿಕೊಂಡು ಅವ್ಯವಹಾರ ನಡೆಸಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ಭೂಮಿ ಕೊಟ್ಟವರು ಆರೋಪಿಸಿದ್ದಾರೆ.

ಹೊರ ರಾಜ್ಯದವರಿಗೆ ಕೆಲಸ..

ಜತೆಗೆ, ಭೂಮಿ ಕೊಟ್ಟ 3 ಸಾವಿರ ರೈತರ ಮನೆಯಲ್ಲಿನ ಒಬ್ಬರಿಗೆ ಸೋಲಾರ್ ಪಾರ್ಕ್​ನಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಈಡೇರಿಸದೇ ವಂಚಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಖಾಸಗಿ ಕಂಪನಿಯೊಂದಿಗೆ ಸೇರಿಕೊಂಡು ಸ್ಥಳೀಯರಿಗೆ ಕೆಲಸ ಕೊಡದೇ ಹೊರ ರಾಜ್ಯದವರಿಗೆ ಮಣೆ ಹಾಕಲಾಗಿದೆ ಎಂದು ದೂರಿದ್ದಾರೆ.

ಸೋಲಾರ್ ಪಾರ್ಕ್ ನಿರ್ಮಾಣಕ್ಕೆ 5 ಎಕರೆ ಜಮೀನಿಗಿಂತ ಕಡಿಮೆ ಭೂಮಿ ನೀಡಿದ ಹಾಗೂ ಮನೆಯಲ್ಲಿ ಮೂರು ಇಲ್ಲವೇ ಅದಕ್ಕಿಂತ ಹೆಚ್ಚು ಜನರಿರುವ ಕುಟುಂಬಗಳಿಗ ಈಗ ಒಬ್ಬರಿಗೂ ಈ ಪಾರ್ಕ್​ನಲ್ಲಿ ಕೆಲಸ ನೀಡಿಲ್ಲ. ಸುಮಾರು 10ಕ್ಕೂ ಹೆಚ್ಚು ಕಂಪನಿಗಳಿದ್ದು, ಅವರು ಸಹ ಸ್ಥಳೀಯರಿಗೆ ಉದ್ಯೋಗದಲ್ಲಿ ಅವಕಾಶ ನೀಡದೇ ರಾಜಕಾರಣಿಗಳ ಬೆಂಬಲದಿಂದ ಹೊರ ರಾಜ್ಯದವರಿಗೆ ಹೆಚ್ಚು ಅವಕಾಶಗಳನ್ನು ನೀಡುತ್ತಿವೆ ಎಂದು ಹೇಳಲಾಗ್ತಿದೆ.

ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ..

ಸುತ್ತಲಿನ 7 ಗ್ರಾಮಗಳಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಕಾಮಗಾರಿಗಳ ಬಗ್ಗೆ ಯಾವುದೇ ಕಾಳಜಿ ಇಲ್ಲದೆ, ಸುಮಾರು 65 ಕೋಟಿ ಹಣವನ್ನು ಕಂಪನಿಗಳಿಂದ ಪಡೆಯಲಾಗಿದೆ. ಸತತ 4 ವರ್ಷಗಳ ಕಾಲವಾದರೂ ಇಲ್ಲಿಯ ತನಕ ಸೋಲಾರ್ ಪಾರ್ಕ್​ಗೆ ಭೂಮಿ ನೀಡಿದ ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ. ಅವುಗಳಲ್ಲಿ ಮುಖ್ಯವಾಗಿ ಹಾಸ್ಪಿಟಲ್ ಸ್ಟಾಫ್, ಆ್ಯಂಬುಲೆನ್ಸ್ ಸೇವೆ, ಶಾಲಾ ಕಟ್ಟಡಗಳು, ಸಿಸಿ ರಸ್ತೆಗಳು, ಎಲ್ಲ ಗ್ರಾಮಗಳಿಗೂ ಕುಡಿಯುವ ನೀರಿನ ವ್ಯವಸ್ಥೆ, ಒಳ ಚರಂಡಿ ವ್ಯವಸ್ಥೆ, ಗ್ರಾಮಗಳ ಸಂಪರ್ಕ ರಸ್ತೆಗಳು, ಅಗ್ನಿ ಶಾಮಕ ವಾಹನ ಸೇರಿದಂತೆ ಅರಣ್ಯ ಬೆಳವಣಿಗೆ ಮತ್ತು ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಒಟ್ಟಾರೆ ಅತ್ಯಂತ ಹಿಂದುಳಿದ ಬರಪೀಡಿತ ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಹೊಸ ಭರವಸೆ ನೀಡಿತ್ತು. ಆದರೆ, ಅದರ ಜೊತೆಗೆ ಇದೀಗ ಸೋಲಾರ್ ಪಾರ್ಕ್​ಗೆ ಭೂಮಿ ನೀಡಿದವರೇ ಅವ್ಯವಹಾರದ ಆರೋಪ ಮಾಡುತ್ತಿದ್ದಾರೆ. ಇದರೊಟ್ಟಿಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಾಗೂ ಸರ್ಕಾರಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಗ್ಗಳಿಕೆ ಹೊಂದಿದ್ದರೂ, ಸ್ಥಳೀಯರ ಪಾಡು ದೀಪದ ಕೆಳಗೆ ಕತ್ತಲೆ ಎಂಬಂತಾಗಿದೆ.

ಓದಿ: ಧಾರವಾಡದ ಸರ್ಕಾರಿ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ: ಲಕ್ಷಾಂತರ ರೂ. ನಗದು ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.