ETV Bharat / state

ಬಸ್​ನಲ್ಲಿ ಮೂರ್ಛೆ ಹೋದ ಪ್ರಯಾಣಿಕ: ಆಸ್ಪತ್ರೆಗೆ ಸೇರಿಸಿ ಪ್ರಾಣ ಕಾಪಾಡಿದ ಚಾಲಕ - ನಿರ್ವಾಹಕ.. - ತಿಪಟೂರು ತಾಲೂಕು ಆಸ್ಪತ್ರೆ

ಬಸ್​ನಲ್ಲಿ ಮೂರ್ಛೆ ಹೋದ ಪ್ರಯಾಣಿಕನಿಗೆ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿ ಚಾಲಕ ಹಾಗೂ ನಿರ್ವಾಹಕ ಸಮಯ ಪ್ರಜ್ಞೆ ಮೆರೆದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಬಸ್​ನಲ್ಲಿ ಮೂರ್ಛೆ ಹೋದ ಪ್ರಯಾಣಿಕ
ಬಸ್​ನಲ್ಲಿ ಮೂರ್ಛೆ ಹೋದ ಪ್ರಯಾಣಿಕ
author img

By

Published : Jul 21, 2023, 7:01 PM IST

Updated : Jul 21, 2023, 7:37 PM IST

ಬಸ್​ನಲ್ಲಿ ಮೂರ್ಛೆ ಹೋದ ಪ್ರಯಾಣಿಕ

ತುಮಕೂರು : ಚಲಿಸುತ್ತಿದ್ದ ಬಸ್​ನಲ್ಲಿ ಮೂರ್ಛೆ ಹೋದ ಪ್ರಯಾಣಿಕನನ್ನು ತಕ್ಷಣ ಚಿಕಿತ್ಸೆ ಕೊಡಿಸಲು ಬಸ್​ನ ಚಾಲಕ ಮತ್ತು ನಿರ್ವಾಹಕ ಸಮಯ ಪ್ರಜ್ಞೆ ಮೆರೆದಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಬಸ್​ನಲ್ಲಿಯೇ ಮೂರ್ಛೆ ತಪ್ಪಿ ಬಿದ್ದು ಪ್ರಯಾಣಿಕನಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಪ್ರಯಾಣಿಕರ ಸಮೇತ ಬಸ್​ ಅನ್ನು ಆಸ್ಪತ್ರೆ ಕಡೆ ಓಡಿಸಿದ ಚಾಲಕ, ಪ್ರಶಂಸೆಗೆ ಪಾತ್ರರಾಗಿದ್ದಾರೆ.

ತುಮಕೂರಿನ ತಿಪಟೂರು ಪಟ್ಟಣದಲ್ಲಿ ಘಟನೆ ನಡೆದಿದೆ. ಆಂಬ್ಯುಲೆನ್ಸ್ ರೀತಿ ಬಸ್ ಚಲಾಯಿಸಿ ಡ್ರೈವರ್​ ಪ್ರಯಾಣಿಕನ ಪ್ರಾಣ ಉಳಿಸಿದ್ದಾರೆ. ಶಿವಮೊಗ್ಗದಿಂದ-ಬೆಂಗಳೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಇದಾಗಿತ್ತು. ಈ ವೇಳೆ, ಬಸ್ ತಿಪಟೂರು ನಿಲ್ದಾಣ ತಲುಪಿದಾಗ ಉಸಿರಾಡಲು ಸಾಧ್ಯವಾಗದೇ ಪ್ರಯಾಣಿಕ ಮೂರ್ಛೆ ತಪ್ಪಿದ್ದರು. ಬಿದ್ದ ರಭಸಕ್ಕೆ ಮೂಗಿನಲ್ಲಿ ರಕ್ತ ಸ್ರಾವವಾಗಿತ್ತು. ಕೂಡಲೇ ಇದನ್ನು ಗಮನಿಸಿದ ನಿರ್ವಾಹಕ ಓಂಕಾರ್ ಚಾಲಕನಿಗೆ ತಿಳಿಸಿದ್ದಾರೆ.

ಚಾಲಕ-ನಿರ್ವಾಹಕನ ಮಾನವೀಯತೆಗೆ ಸಾರ್ವಜನಿಕರಿಂದ ಪ್ರಶಂಸೆ: ಕೂಡಲೇ ಚಾಲಕ ಪ್ರಕಾಶ್ ಬಸ್ ಅನ್ನು ತಿಪಟೂರು ತಾಲೂಕು ಆಸ್ಪತ್ರೆಗೆ ಚಲಾಯಿಸಿದ್ದಾರೆ. ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ ಪರಿಣಾಮ ಈಶ್ವರ್ ರೆಡ್ಡಿ ಪ್ರಾಣ ಉಳಿದಿದೆ. ಚಾಲಕ- ನಿರ್ವಾಹಕರ ಮಾನವೀಯತೆಯನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.

ಬಸ್​​ ಚಲಾಯಿಸುವಾಗ ಮೂರ್ಛೆ ಬಂದು ಒದ್ದಾಡಿದ ಚಾಲಕ: ಬಸ್​​ ಚಲಾಯಿಸುವಾಗ ಚಾಲಕನಿಗೆ ಮೂರ್ಛೆರೋಗ ಬಂದ ಪರಿಣಾಮ ಬಸ್ ನಿಯಂತ್ರಣ ಕಳೆದುಕೊಂಡು ಮುಂದಿದ್ದ ವಾಹನಕ್ಕೆ (ಜನವರಿ 23-2023) ಗುದ್ದಿತ್ತು. ಕೂಡಲೇ ಇದನ್ನು ಗಮನಿಸಿದ ​​​ಮತ್ತೋರ್ವ ಚಾಲಕ ಬಸ್​ ತಡೆದು ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದರು.

ಎರಡು ದ್ವಿಚಕ್ರ ವಾಹನಗಳು ಜಖಂ: ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ಉಣಕಲ್​​ ಬಳಿ ಬೇಂದ್ರೆ ಸಾರಿಗೆ ಬಸ್​ ಚಾಲಕನಿಗೆ ಮೂರ್ಛೆರೋಗ ಬಂದಿತ್ತು. ಪರಿಣಾಮ ಬಸ್​ ನಿಯಂತ್ರಣ ತಪ್ಪಿ ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಆಗ ಅಲ್ಲೇ ಇದ್ದ ಮತ್ತೋರ್ವ ಚಾಲಕ ಬಸ್​​​ ತಡೆದು ನಿಲ್ಲಿಸಿದ್ದರು. ಘಟನೆಯಲ್ಲಿ ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದವು. ಇತ್ತ ಪಿಡ್ಸ್​​​ ಬಂದು ಅಸ್ವಸ್ಥಗೊಂಡಿದ್ದ ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು.

ಸೇತುವೆ ಮೇಲಿಂದ ಬಿದ್ದ ಆ್ಯಂಬುಲೆನ್ಸ್​ಗೆ ​ಹಾನಿ : ಇನ್ನೊಂದು ಘಟನೆಯಲ್ಲಿ ಹುಬ್ಬಳ್ಳಿಯ ನವನಗರದ ಕ್ಯಾನ್ಸರ್ ಆಸ್ಪತ್ರೆಗೆ ಸೇರಿದ ಆ್ಯಂಬುಲೆನ್ಸ್​​ವೊಂದು ರೋಗಿಯನ್ನು ಬಿಟ್ಟು ಮರಳಿ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯಾನಗರದ ಎಂಆರ್ ಸಾಕ್ರೆ ಶಾಲೆಯ ಮುಂಭಾಗದಲ್ಲಿರುವ ಬಿಆರ್​​​​​​​​​ಟಿಎಸ್ ಸೇತುವೆ ಮೇಲಿಂದ ಬಿದ್ದು ಸಂಪೂರ್ಣವಾಗಿ ನುಜ್ಜುಗುಜ್ಜಾಗಿತ್ತು.

ಸಂಪೂರ್ಣ ಹಾನಿಗೊಳಗಾದ ಆಂಬ್ಯುಲೆನ್ಸ್:​​ ಘಟನೆ ಬಳಿಕ ಚಾಲಕ ಆ್ಯಂಬುಲೆನ್ಸ್ ಬಿಟ್ಟು ಪರಾರಿಯಾಗಿದ್ದ. ಸ್ಥಳಕ್ಕೆ ಉತ್ತರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಇದನ್ನೂ ಓದಿ: ಬಸ್​​ ಚಲಾಯಿಸುವಾಗ ಮೂರ್ಛೆ ಬಂದು ಒದ್ದಾಡಿದ ಚಾಲಕ : ಬಸ್​​ ತಡೆದು ಸಂಭಾವ್ಯ ಅನಾಹುತ ತಪ್ಪಿಸಿದ ಮತ್ತೊಬ್ಬ ಡ್ರೈವರ್​​

Last Updated : Jul 21, 2023, 7:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.