ತುಮಕೂರು: ನಗರದ ಸಿದ್ದಗಂಗಾ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮೂವರು ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ.
ಪ್ರಸ್ತುತ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರೇ ಚಿಕಿತ್ಸೆ ಪಡೆಯಲು ಮುಗಿಬೀಳುತ್ತಿದ್ದಾರೆ. ಅದರಲ್ಲೂ ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಬಹುತೇಕ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸ್ವಲ್ಪ ಮಟ್ಟಿಗೆ ಹಿಂದೇಟು ಹಾಕುತ್ತವೆ. ಈ ನಡುವೆ ಅತಿ ಸುರಕ್ಷತೆಯಿಂದ ಚಿಕಿತ್ಸೆ ಪಡೆಯಲು ಗರ್ಭಿಣಿಯರು ಸಹ ಹೆಣಗಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತುಮಕೂರಿನ ಸಿದ್ದಗಂಗಾ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮೂವರು ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ. ಇವರೆಲ್ಲರೂ ಆರೋಗ್ಯದಿಂದ ಇದ್ದಾರೆ.
ಈ ಕುರಿತು ವೈದ್ಯ ಸಂಜೀವ್ ಕುಮಾರ್ ಮಾತನಾಡಿ, ಮೂವರು ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದು ಹೇಗೆ ಎಂಬ ಆತಂಕವಿತ್ತು. ಆಸ್ಪತ್ರೆಯಲ್ಲಿ ಪ್ರತ್ಯೇಕ ಸೋಂಕಿತ ಆಪರೇಷನ್ ಥಿಯೇಟರ್ ತೆರೆಯಲಾಗಿದೆ. ಸಾಮಾನ್ಯ ಆಪರೇಷನ್ ಥಿಯೇಟರ್ಗಿಂತ ವಿಶೇಷ ಸೌಲಭ್ಯಗಳಿಂದ ಕೂಡಿರುತ್ತದೆ. ತುಂಬಾ ಕ್ಲಿಷ್ಟಕರ ಚಿಕಿತ್ಸೆಯಾಗಿತ್ತು. ಆದಷ್ಟು ಹೆಚ್ಚುವರಿ ಮುತುವರ್ಜಿ ವಹಿಸಿ ಹೆರಿಗೆ ಮಾಡಿಸಲಾಗಿದೆ ಎಂದರು.
ಇದನ್ನೂ ಓದಿ..20 ವರ್ಷಗಳ ಬಳಿಕ ಮನೆ ಸೇರಿದ ಮಗ: ಇಳಿವಯಸ್ಸಿನ ಪೋಷಕರ ಖುಷಿ ಹೆಚ್ಚಿಸಿದ ಕೊರೊನಾ