ETV Bharat / state

ಈ ಉಪಚುನಾವಣೆ ಯಾವುದೇ ಪಕ್ಷದ ಮೇಲೆ ಪರಿಣಾಮ ಬೀರಲ್ಲ: ಸಚಿವ ಚಲುವರಾಯಸ್ವಾಮಿ

ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದಲ್ಲಿರುವ ಸಚಿವ ಚಲುವರಾಯಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್​. ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.

Minister Chaluvarayaswamy
ಸಚಿವ ಚಲುವರಾಯಸ್ವಾಮಿ (ETV Bharat)
author img

By ETV Bharat Karnataka Team

Published : Nov 10, 2024, 7:52 PM IST

ರಾಮನಗರ: "ನಾಳೆ ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಬೃಹತ್ ಸಭೆ ಆಯೋಜನೆ ಮಾಡಲಾಗಿದೆ. ನಮ್ಮ ಎದುರು ಪಾರ್ಟಿ ಜೆಡಿಎಸ್​ನವರು ಅಭಿವೃದ್ಧಿ ಕೆಲಸಗಳಿಲ್ಲದೇ ಭಾವನಾತ್ಮಕವಾಗಿ ಮಾತನಾಡುತ್ತಾರೆ. ಈ ಉಪಚುನಾವಣೆ ಯಾವುದೇ ಪಕ್ಷದ ಮೇಲೆ ಪರಿಣಾಮ ಬೀರಲ್ಲ. ಈ ಚುನಾವಣೆಯಲ್ಲಿ ಯೋಗೇಶ್ವರ್ ಶಾಸಕರಾದ್ರೆ ನೀರಾವರಿ ಅಭಿವೃದ್ಧಿ ಆಗುತ್ತದೆ" ಎಂದು ಸಚಿವ ಚಲುವನಾರಾಯಸ್ವಾಮಿ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ತಾಲೂಕಿನಲ್ಲಿ ಶಾಶ್ವತವಾಗಿ ನೀರಾವರಿ ಅಭಿವೃದ್ಧಿ ಆಗುತ್ತದೆ. ಕೆಲವೊಮ್ಮೆ ಭಾವನಾತ್ಮಕವಾಗಿ ವೈಯಕ್ತಿಕವಾಗಿ ವೋಟ್ ಹಾಕಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷವನ್ನು ಮರೆತು ಯೋಗೇಶ್ವರ್​ಗೆ ಮತ ಹಾಕಿ. ಕುಮಾರಸ್ವಾಮಿ ಅವರಿಂದ ತೆರವಾದ ಕ್ಷೇತ್ರದಲ್ಲಿ ಸಿಎಂ ಹಾಗೂ ಡಿಸಿಎಂ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದ್ದಾರೆ. ನಾವು ಪ್ರಚಾರಕ್ಕೆ ಹೋದಾಗ ಸಾಕಷ್ಟು ಸಮಸ್ಯೆಯನ್ನು ಜನ ಹೇಳಿದ್ದಾರೆ. ನಾವು ಬಗೆಹರಿಸುವ ಕೆಲಸವನ್ನು ಮಾಡಿದ್ದೇವೆ. ಇವತ್ತು ಆದೇನೆ ಇದ್ರು ಮರೆಯೋಣ. ಮೂರೂವರೆ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುತ್ತದೆ‌. ಯಾರು ಏನ್ ಮಾಡಿದ್ರು ಏನೂ ನಡೆಯಲ್ಲ" ಎಂದರು.

ಸಚಿವ ಚಲುವರಾಯಸ್ವಾಮಿ (ETV Bharat)

"ಯಾರು ಏನೇ ಕೊಟ್ಟರೂ ತೆಗೆದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರಿ. ಐದು ಗ್ಯಾರಂಟಿಗಳನ್ನು ಕೆಲವರು ಬೇಡ ಅಂದ್ರು. ಆದರೂ ನಾವು ಕೊಟ್ಟಿದ್ದೇವೆ. ಕಂದಾಯ, ಕೃಷಿ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಬಗೆ ಹರಿಸಿದ್ದೇವೆ. ನಾವು ಗ್ಯಾರಂಟಿ ಸೀಮಿತ ಅಲ್ಲದೇ ಉಳಿದ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದೇವೆ. ಹೀಗಾಗಿ ಯೋಗೇಶ್ವರ್​ಗೆ ಮತ ನೀಡಿ" ಎಂದು ಸಚಿವರು ಮನವಿ ಮಾಡಿದ್ರು.

ಉಪ ಚುನಾವಣೆ ಬಳಿಕ ಸರ್ಕಾರ ಉಳಿಯಲ್ಲ ಎಂಬ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರ ಹೇಳಿಕೆ ವಿಚಾರವಾಗಿ ಮಾತನಾಡಿ, "ದೇವೇಗೌಡರು ಅವರದ್ದೇ ಸರ್ಕಾರ ಇದ್ರೂ, ಐದು ವರ್ಷ ಇರಲ್ಲ ಅಂತಾನೇ ಹೇಳುತ್ತಾರೆ‌" ಎಂದು ವ್ಯಂಗ್ಯವಾಡಿದರು.

ಅಭಿವೃದ್ಧಿ ವಿಚಾರದಲ್ಲಿ ಕಲ್ಲು ನೆಡುವ ವಿಚಾರ ಕುಮಾರಸ್ವಾಮಿ ಹೇಳಿಕೆಗೆ, "ನಾವೇನಾದ್ರು ಬೇಡ ಅಂತ ಹೇಳಿದ್ದೀವಾ..! ಸಿಎಂ ಆಗಿದ್ದಾಗ ಯಾಕೆ ಬಂದು ನೆಟ್ಟಿಲ್ಲ. ಶಿವಕುಮಾರ್ ಡಿಸಿಎಂ ಆಗಿ ಹಣ ತಂದ್ರು ಕಲ್ಲು ನೆಟ್ಟಿದ್ದಾರೆ. ಮೇಕೆದಾಟು ಯೋಜನೆ ಜಾರಿ ಮಾಡ್ತೀನಿ ಅಂದ್ರು, ಯಾಕೆ ಮಾಡಿಲ್ಲ ಈಗ ಕೇಂದ್ರ ಸಚಿವರಾಗಿದ್ದಾರೆ ಮಾಡಲಿ" ಎಂದು ಒತ್ತಾಯಿಸಿದರು.

ಮೈಸೂರಿನಲ್ಲಿ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿ "ಕಿಲಾರೆ ಜಯರಾಮುಗೂ ಯಾವುದೇ ಹಣ ವರ್ಗಾವಣೆ ಆಗಿಲ್ಲ. ನಾನು ಹೋಗಿದ್ದು ಮದುವೆಗೆ ಅಷ್ಟೇ. ಯಾವುದೇ ಗಲಾಟೆ ಆಗಿಲ್ಲ. ಹೆಚ್ಚಿನ ಮಾಹಿತಿ‌ ಬೇಕಾದ್ರೆ ಕುಮಾರಸ್ವಾಮಿ ಅವರನ್ನು ಕೇಳಿ. ನನಗೂ ಜಯರಾಮು​ಗು ಯಾವುದೇ ಗಲಾಟೆ ಆಗಿಲ್ಲ, ನಾವು ಚೆನ್ನಾಗಿದ್ದೇವೆ. ನನ್ನ ಹಿಂದೆ ಕುಮಾರಸ್ವಾಮಿ ಟೀಂ ಇದೆ. ಅವರನ್ನು ಕೇಳಿ. ರಾತ್ರಿ ಬೆಳಗ್ಗೆ ನನ್ನ‌ನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆ ಬರಲ್ಲ ಅವರಿಗೆ ಅಂತ ಡಿ.ಕೆ. ಶಿವಕುಮಾರ್ ಹೇಳ್ತಾರೆ. ಈಗ ನಾನೂ ಹಾಗೆ ಹೇಳಬೇಕಾಗುತ್ತೆ. ನಮ್ಮ ಹತ್ತಿರ ಎಲ್ಲರದರದ್ದೂ ಸಿಡಿ ಇದೆ ಅಂತಾರೆ. ಇದ್ರೆ ಎಲ್ಲವನ್ನೂ ಬಿಡುಗಡೆ ಮಾಡಲಿ" ಎಂದು ಸವಾಲು ಹಾಕಿದರು.

"ಮನುಷ್ಯ ಆಕಾಶಕ್ಕೆ ಹೋಗುತ್ತಾನೆ ಎಂದು ದೇವೇಗೌಡರ ಬಾಯಲ್ಲಿ ಕೇಳಿದ್ದು, ಕುಮಾರಸ್ವಾಮಿ ಆಕಾಶ, ಡಿ.ಕೆ. ಶಿವಕುಮಾರ್ ಭೂಮಿ. ನಾವು ಭೂಮಿಯಲ್ಲಿ ಇರೋರ ಹತ್ತಿರ ಹೋಗೋದು" ಎಂದರು.

ಮಂಡ್ಯದಲ್ಲಿ ಮಗನಿಗೆ ಟಿಕೆಟ್ ತಪ್ಪಿಸಿದ್ದರು‌. ಚನ್ನಪಟ್ಟಣದಲ್ಲಿ ಅಭಿವೃದ್ಧಿ ಮಾಡ್ತೇವೆ ಅಂದ್ರು, ಅದೂ ಮಾಡಿಲ್ಲ. ಮಂಡ್ಯದಲ್ಲಿ ನಿಖಿಲ್‌ ಅನ್ನು ನಿಲ್ಲಿಸಿ, ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಶಾಸಕರಾಗಿಯೇ ಇರಬಹುದಿತ್ತು. ಕುಮಾರಸ್ವಾಮಿ ಅವರು ಇಲ್ಲಿ ಚುನಾವಣೆ ಎದುರಿಸಿ, ಅವರ ಮಗನನ್ನು ಗೆಲ್ಲಿಸಿಕೊಳ್ಳಲಿ. ನಮ್ಮ‌ ಬಳಿ ಪೆನ್​ಡ್ರೈವ್ ಇಲ್ಲ, ಮಾಹಿತಿ ಇದೆ" ಎಂದು ಹೇಳಿದರು.

ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ದ್ವೇಷ ಇಲ್ಲ. ನಿಖಿಲ್ ಕುಮಾರಸ್ವಾಮಿ ಬಗ್ಗೆ ಅಂತೂ ಯಾವುದೇ ದ್ವೇಷ ಇಲ್ಲ. ಸರ್ಕಾರ ತೆಗೆಯುತ್ತೇವೆ ಎಂದು ಹೇಳುವ ಹೇಳಿಕೆ ಸರಿ ಅಲ್ಲ ಅಂದರು.

ಇದನ್ನೂ ಓದಿ: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಚಿವ ಜಮೀರ್ ಹೇಳಿಕೆ: ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಂದ ಎಜಿಗೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.