ತುಮಕೂರು: ಜಿಲ್ಲೆಯಲ್ಲಿ ಇಂದು 234 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 10,437ಕ್ಕೆ ಏರಿಕೆಯಾಗಿದೆ. ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
![234 corona positive cases in tumapur](https://etvbharatimages.akamaized.net/etvbharat/prod-images/kn-tmk-02-covid19report-script-7202233_18092020194120_1809f_02927_977.jpg)
ತುಮಕೂರು ತಾಲೂಕು 62, ತಿಪಟೂರು ತಾಲೂಕು 55, ಪಾವಗಡ ತಾಲೂಕು 26, ಕೊರಟಗೆರೆ ತಾಲೂಕು 23, ಮಧುಗಿರಿ ಮತ್ತು ತುರುವೇಕೆರೆ ತಾಲೂಕಿನಲ್ಲಿ ತಲಾ 12 ಮಂದಿಗೆ, ಚಿಕ್ಕನಾಯಕನಹಳ್ಳಿ ತಾಲೂಕು 11, ಶಿರಾ ತಾಲೂಕು 8 ಹಾಗೂ ಕುಣಿಗಲ್ ತಾಲೂಕು 7 ಮಂದಿಗೆ ಸೋಂಕು ತಗುಲಿದೆ.