ETV Bharat / state

ದಬ್ಬಾಳಿಕೆ ಮಾಡಿ ಆಕ್ಸಿಜನ್ ತೆಗೆದುಕೊಂಡು ಹೋಗುವುದು ಸರಿಯಲ್ಲ: ಸಚಿವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿ

author img

By

Published : May 7, 2021, 3:29 PM IST

Updated : May 7, 2021, 4:01 PM IST

ಚಾಮರಾಜನಗರ ಘಟನೆಯನ್ನು ಇಟ್ಟುಕೊಂಡು ನಮ್ಮನ್ನು ಕಟಕಟೆಯಲ್ಲಿ‌ ನಿಲ್ಲಿಸಬೇಡಿ. ಜನರಲ್ಲಿ ತಪ್ಪು ಭಾವನೆ ಬರುವ ರೀತಿಯಲ್ಲಿ‌ ನಡೆದುಕೊಳ್ಳಬೇಡಿ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಆಕ್ರೋಶ ವ್ಯಕ್ತಪಡಿಸಿದರು..

Taking oxygen with forcefully is not good mp prathap simha said

ಮೈಸೂರು : ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರು ಮೈಸೂರಿಗೆ ಬಂದು ಆಕ್ಸಿಜನ್ ಏಜೆನ್ಸಿ ಮೇಲೆ ದಬ್ಬಾಳಿಕೆ ಮಾಡಿ ಆಕ್ಸಿಜನ್ ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದು ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಇಬ್ಬರು ಉಸ್ತುವಾರಿ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರು, ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ನಾರಾಯಣಗೌಡ, ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಜಿಲ್ಲೆಯಿಂದ ಪೊಲೀಸರ ಜೊತೆ ಬಂದು ಆಕ್ಸಿಜನ್ ಏಜೆನ್ಸಿ ಮೇಲೆ ದಬ್ಬಾಳಿಕೆ ಮಾಡಿ ತೆಗೆದುಕೊಂಡು ಹೋಗುವುದು ಸರಿಯಲ್ಲ. ಇದರಿಂದ ಅನಗತ್ಯ ಗೊಂದಲ ಉಂಟಾಗುತ್ತದೆ.

ದಬ್ಬಾಳಿಕೆ ಮಾಡಿ ಆಕ್ಸಿಜನ್ ತೆಗೆದುಕೊಂಡು ಹೋಗುವುದು ಸರಿಯಲ್ಲ: ಸಚಿವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿ

ಸಿಎಂ ಜೊತೆ ಮಾತನಾಡಿ ತೆಗೆದುಕೊಳ್ಳಿ : ನಿಮ್ಮ ಜಿಲ್ಲೆಗೆ ಎಷ್ಟು ಆಕ್ಸಿಜನ್ ಬೇಕು ಎಂಬುದನ್ನು ಸಿಎಂ ಜೊತೆ ಮಾತನಾಡಿ ತೆಗೆದುಕೊಳ್ಳಿ, ಅದನ್ನು ಬಿಟ್ಟು ಮೈಸೂರಿಗೆ ಬಂದು ಆಕ್ಸಿಜನ್ ತುಂಬಿಸಿಕೊಂಡು ಹೋಗುವುದು ಸರಿಯಲ್ಲ. ನಮಗೆ ಆಕ್ಸಿಜನ್ ಕೊರತೆ ಇದೆ. ಅದನ್ನು ಸರಿಪಡಿಸಲು ನಾವು ಕಷ್ಟಪಡುತ್ತಿದ್ದೇವೆ ಎಂದರು.

ಚಾಮರಾಜನಗರ ಘಟನೆಯನ್ನು ಇಟ್ಟುಕೊಂಡು ನಮ್ಮನ್ನು ಕಟಕಟೆಯಲ್ಲಿ‌ ನಿಲ್ಲಿಸಬೇಡಿ. ಜನರಲ್ಲಿ ತಪ್ಪು ಭಾವನೆ ಬರುವ ರೀತಿಯಲ್ಲಿ‌ ನಡೆದುಕೊಳ್ಳಬೇಡಿ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Last Updated : May 7, 2021, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.