ETV Bharat / state

ಅಳಿಯನ ಮರ್ಯಾದೆ ರಕ್ಷಿಸಲು ಮಗಳಿಗಾದ ಅನ್ಯಾಯ ಮುಚ್ಚಿಟ್ಟಳು ಅತ್ತೆ!

ಪೊಲೀಸರ ದಿಕ್ಕು ತಪ್ಪಿಸಲು ಪ್ರಕರಣದಲ್ಲಿ ಅಪ್ರಾಪ್ತೆಯ ತಾಯಿ, ಉತ್ತರ ಪ್ರದೇಶದ ಮೂಲದ ಸಾಹಿಲ್ ಎಂಬ ಯುವಕ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ದೂರು ಸಲ್ಲಿಸಿದ್ದಾರೆ.

btl
ಖಾಜಿಯ ಇಬ್ರಾಹಿಂ ಶಾಬ್
author img

By

Published : Dec 3, 2019, 10:00 PM IST

Updated : Dec 3, 2019, 11:16 PM IST

ಭಟ್ಕಳ: ಕೆಲವು ದಿನಗಳ ಹಿಂದಷ್ಟೇ ತಾಲೂಕಿನ ಹನೀಫಾಬಾದ್​ನಲ್ಲಿ ಅಪ್ರಾಪ್ತೆಯೊಬ್ಬಳು ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾಗಿದ್ದು, ದೌರ್ಜನ್ಯ ನಡೆಸಿದ ಆರೋಪದಡಿ ಅಪ್ರಾಪ್ತೆಯ ಅಕ್ಕನ ಗಂಡ ಖಾಜಿ ಇಬ್ರಾಹಿಂ ಶಾಬ್ ಎಂಬಾತನೇ ಆರೋಪಿಯಾಗಿದ್ದು, ಅತ್ತೆಯೇ ತನಿಖೆಯ ಹಾದಿ ತಪ್ಪಿಸಿದ ವಿಚಾರ ಬಯಲಾಗಿದೆ.

ಪೊಲೀಸರ ದಿಕ್ಕು ತಪ್ಪಿಸಲು ಅಪ್ರಾಪ್ತೆಯ ತಾಯಿ ಈ ಮೊದಲು ಉತ್ತರ ಪ್ರದೇಶದ ಮೂಲದ ಸಾಹಿಲ್ ಎಂಬ ಯುವಕ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ಸುಳ್ಳು ದೂರು ನೀಡಿದ್ದಳು. ಈ ದೂರಿನನ್ವಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಸಾಹಿಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಹಾಗೂ ಸಂತ್ರಸ್ತೆ ಗರ್ಭಿಣಿ ಎಂದು ತಿಳಿಯುತ್ತಿರುವಂತೆ ಆತ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಕೊಳ್ಳಲಾಗಿತ್ತು.

ನಿಜವಾದ ಆರೋಪಿ ಸಂತ್ರಸ್ತೆಯ ಭಾವ:

ದೂರು ಸಲ್ಲಿಸಿದ ಬಳಿಕ ಪ್ರಕರಣ ಬೆನ್ನಟ್ಟಿದ ಸಿಪಿಐ ಪ್ರಕಾಶ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಸಂತ್ರಸ್ತೆಯ ಮನೆಯ ಸುತ್ತಮುತ್ತ ಕೆಲ ಮಾಹಿತಿಯನ್ನು ಕಲೆಹಾಕಿದ್ದಾರೆ. ಈ ವೇಳೆ ಸಂತ್ರಸ್ತೆಯ ಅಕ್ಕನ ಗಂಡನ ಮೇಲೆ ಅನುಮಾನ ಮೂಡಿದೆ. ಇದೇ ವೇಳೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆಯನ್ನು ಉಡುಪಿಯ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಆಸ್ಪತ್ರೆ ವೈದ್ಯರು ಸಂತ್ರಸ್ತೆ ಅಥವಾ ಮಗು ಇಬ್ಬರಲ್ಲಿ ಒಬ್ಬರು ಮಾತ್ರ ಬದುಕುವ ಸಾಧ್ಯತೆ ಇರುವ ಬಗ್ಗೆ ಖಚಿತ ಪಡಿಸಿದ್ದರಿಂದ ಸಂತ್ರಸ್ತೆ ಬದುಕುಳಿಯುತ್ತಾಳೆ.

ಸಂತ್ರಸ್ತೆಯ ಆರೋಗ್ಯ ವಿಚಾರಿಸಲು ಬಂದಿದ್ದ, ದೌರ್ಜನ್ಯ ನಡೆಸಿದ ಆರೋಪಿ ಖಾಜಿ ಇಬ್ರಾಹಿಂ ಶಾಬನ ನಡೆ ಬಗ್ಗೆ ಅನುಮಾನಗೊಂಡ ಪೊಲೀಸರು ಉಡುಪಿಯಲ್ಲಿ ಬಂಧಿಸಿ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ತಾನೇ ಆಕೆಯ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ನಂತರ ಸಂತ್ರಸ್ತೆಯ ತಾಯಿ ಅಳಿಯನ ನಿಜರೂಪ ಯಾರಿಗೂ ತಿಳಿಯಬಾರದು ಎಂದು ಸಾಹಿಲ್​ ಹೆಸರು ಹೇಳಿ ಪ್ರಕರಣವನ್ನು ಮರೆಮಾಚಲು ಪ್ರಯತ್ನಿಸಿದ್ದನ್ನು ಈಗ ಒಪ್ಪಿಕೊಂಡಿದ್ದಾನೆ.

ಆರೋಪಿ ತನ್ನ ಹೆಂಡತಿಯನ್ನು ತನ್ನ ಮನೆಗೆ ಕಳುಹಿಸಿಕೊಟ್ಟು, ಈಗ ಅತ್ತೆಯ ಮನೆಯಲ್ಲಿಯೇ ವಾಸವಿದ್ದು ಕೆಲಸ ಮಾಡಿಕೊಂಡಿದ್ದ. ಈ ವೇಳೆ ಮನೆಯ ಮಂದಿಯೆಲ್ಲಾ ಕೆಲಸಕ್ಕೆಂದು ಹೋದ ವೇಳೆ ತನ್ನ ಹೆಂಡತಿ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಕಾರವಾರ ಸಬ್ ಜೈಲಿಗೆ ಕರೆದೊಯ್ದಿದ್ದಾರೆ.

Intro:ಭಟ್ಕಳ: ಕೆಲವು ದಿನಗಳ ಹಿಂದೆಯಷ್ಟೇ ತಾಲೂಕಿನ ಹನೀಪಾಬಾದನಲ್ಲಿ ಅಪ್ರಾಪ್ತೆ ಬಾಲಕಿಯೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯಾಗಿಸಿದ ಘಟನೆ ನಡೆದಿದ್ದು, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿದಡಿಯಲ್ಲಿ ಯುವತಿಯ ಭಾವನೇ ಆರೋಪಿ ಎಂದು ಗ್ರಾಮೀಣ ಠಾಣಾ ಪೊಲೀಸರ ತನಿಖೆಯಿಂದ ತಿಳಿದು ಬಂದಿದ್ದು ಆರೋಪಿಯನ್ನು ಬಂಧಿಸಿದ್ದಾರೆ.

Body:ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಹಾವೇರಿ ಮೂಲದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಯ ಅಕ್ಕನ ಗಂಡ ಖಾಜಿಯ ಇಬ್ರಾಹಿಂ ಶಾಬ್ ಎಂದು ತಿಳಿದು ಬಂದಿದೆ.

ಮೊದಲು ಪೊಲೀಸರ ದಿಕ್ಕು ತಪ್ಪಿಸಲು ಪ್ರಕರಣದಲ್ಲಿ ಯುವತಿಯ ತಾಯಿ ಉತ್ತರ ಪ್ರದೇಶದ ಮೂಲದ ಸಾಹಿಲ್ ಎಂಬಾತನ ಯುವಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ದೂರು ಸಲ್ಲಿಸಿದ್ದಾರೆ.

ಆರೋಪಿಯ ಅತ್ತೆಯ ದೂರಿನ್ವಯ ಮನೆಯಲ್ಲಿ ಯಾರು ಇಲ್ಲದ ಸಂದರ್ಬದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಹಾಗೂ ಯುವತಿ ಗರ್ಭಿಣಿ ಎಂದು ತಿಳಿಯುತ್ತಿರುವಂತೆ ಆತ ನಾಪತ್ತೆಯಾಗಿದ್ದಾನೆ. ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯರ ಬಳಿ ಚಿಕಿತ್ಸೆಗೆಂದು ಬಂದಾಗ ಯುವತಿ ಗರ್ಭಿಣಿಯಾಗಿದ್ದ ವಿಷಯ ಮನೆಯವರಿಗೆ ವಿಷಯ ತಿಳಿದಿದೆ ಎಂದು ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾರಿ ತಪ್ಪಿಸಿದ ಬಾಲಕಿಯ ತಾಯಿ: ತನ್ನ ಮಗಳ ಜೀವನ ಹಾಳಾಗಿದೆ ಎಂದು ಭಯದಲ್ಲಿ ಅಪ್ರಾಪ್ತ ಬಾಲಕಿಯ ತಾಯಿ ತಾನೇ ಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿನ ಗುಟ್ಟು ಆಸ್ಪತ್ರೆಗೆ ಬಾಲಕಿಯ ತಪಾಸಣೆಗೆ ಕರೆದುಕೊಂಡ ವೇಳೆ ಗೊತ್ತಾಗಿದ್ದು, ಅಳಿಯನ ಸಾಹಸ ಜಗತ್ತಿಗೆ ಗೊತ್ತಾಗಬಾರದೆಂದು ಅರಿತು ಪೊಲೀಸರ ತನಿಖೆಯನ್ನು ದಾರಿ ತಪ್ಪಿಸಿದ್ದು ನಂತರದಲ್ಲಿ ನಿಜವಾದ ಆರೋಪಿಯ ಬಂಧನದ ಬಳಿಕ ಪೊಲೀಸರಲ್ಲಿ ತಪ್ಪೊತ್ತಿಗೊಂಡಿದ್ದಾಳೆ.

ನಿಜವಾದ ಆರೋಪಿ ಯುವತಿಯ ಭಾವ: ಪ್ರಕರಣ ಬೆನ್ನಟ್ಟಿದ ಸಿಪಿಐ ಪ್ರಕಾಶ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಈ ತನಿಖೆಯನ್ನು ಚುರುಕುಗೊಳಿಸುತ್ತಾರೆ. ಪ್ರಕರಣಕ್ಕೆ ಸಿಪಿಐ ಪ್ರಕಾಶ ಅವರು ನಿಜವಾದ ಆರೋಪಿಯ ಪತ್ತೆಗೆ ಪೊಲೀಸ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಎರಡು ದಿನ ಕಾಲಾವಕಾಶ ನೀಡಿದ್ದರು. ಇದಾದ ಬಳಿಕ ದೂರು ಸಲ್ಲಿಸಿದ ಬಾಲಕಿಯ ಮನೆಯ ಸುತ್ತಮುತ್ತ ಪೊಲೀಸರು ಕೆಲ ಮಾಹಿತಿಯನ್ನು ಕೆಲಹಾಕಿದ್ದಾರೆ. ಈ ವೇಳೆ ಅಪ್ರಾಪ್ತೆ ಬಾಲಕಿಯ ಅಕ್ಕನ ಗಂಡ (ಭಾವ)ನ ಮೇಲೆ ಅನುಮಾನ ಮೂಡುತ್ತದೆ. ಇದೇ ವೇಳೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯನ್ನು ಉಡುಪಿಯ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಆಸ್ಪತ್ರೆ ವೈದ್ಯರು ಒಂದು ಬಾಲಕಿ ಅಥವಾ ಮಗು ಬದುಕುವ ಸಾಧ್ಯತೆ ಇರುವ ಬಗ್ಗೆ ಖಚಿತ ಪಡಿಸಿದ್ದು ಈ ಹಿನ್ನೆಲೆ ಮಗುವು ಸಹ ಸಾವನ್ನಪ್ಪಿದ್ದ ಅಪ್ರಾಪ್ತ ಬಾಲಕಿ ಬದುಕುಳಿಯುತ್ತಾಳೆ.

ಬಾಲಕಿಯ ಆರೋಗ್ಯ ವಿಚಾರಿಸಲು ಇದೇ ವೇಳೆ ಬಂದಿದ್ದ ಬಾಲಕಿಯ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಖಾಜಿಯ ಇಬ್ರಾಹಿಂ ಶಾಬನನ್ನು ಅನುಮಾನಗೊಂಡು ಉಡುಪಿಯಿಂದ ವಶಕ್ಕೆ ಪಡೆದು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ತಾನೇ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಒಪ್ಪಿಗೊಂಡಿದ್ದಾನೆ.

ಆರೋಪಿಯೂ ತನ್ನ ಹೆಂಡತಿಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟು ಈಗ ಅತ್ತೆಯ ಮನೆಯಲ್ಲಿಯೇ ವಾಸವಿದ್ದು, ಇಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಮನೆಯ ಮಂದಿಯೆಲ್ಲ ಕೆಲಸಕ್ಕೆಂದು ಹೋದ ವೇಳೆ ತನ್ನ ಹೆಂಡತಿ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಂಗಕ್ಕೆ ಒಪ್ಪಿಸಿದ್ದು ಕಾರವಾರ ಸಬ್ ಜೈಲಿಗೆ ಕರೆದೊಯ್ದಿದ್ದಾರೆ.Conclusion:ಉದಯ ನಾಯ್ಕ ಭಟ್ಕಳ
Last Updated : Dec 3, 2019, 11:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.