ಮೈಸೂರು: ಕಲಬುರಗಿಯಿಂದ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದ ಶರತ್ ಅಧಿಕಾರ ವಹಿಸಿಕೊಂಡರು.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅಭಿರಾಮ್ ಜಿ. ಶಂಕರ್ ಅವರು ಆಡಳಿತ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ನೇಮಕಗೊಂಡಿದ್ದು, ಕಲಬುರಗಿಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶರತ್ ಅವರನ್ನು ಮೈಸೂರಿಗೆ ವರ್ಗಾವಣೆಗೆ ಮಾಡಿ ಆದೇಶ ಹೊರಡಿಸಲಾಗಿತ್ತು. ಹಾಗಾಗಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ನೂತನ ಜಿಲ್ಲಾಧಿಕಾರಿಯನ್ನು ಕಚೇರಿಯ ಆಡಳಿತ ವರ್ಗ ಆದರದಿಂದ ಸ್ವಾಗತಿಸಿತು.