ETV Bharat / state

ಹೈಕೋರ್ಟ್‌ನಲ್ಲಿ ಇಂದಿನಿಂದ ಮುಕ್ತ ಕಲಾಪ ಆರಂಭ

author img

By

Published : Oct 22, 2020, 9:56 AM IST

ಹೈಕೋರ್ಟ್‌ನಲ್ಲಿ ಇಂದಿನಿಂದ ಫಿಸಿಕಲ್ (ಮುಕ್ತ ನ್ಯಾಯಾಲಯ) ಕಲಾಪಗಳು ಎಂದಿನಂತೆ ಆರಂಭವಾಗಲಿವೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ಲಾಕ್‌ಡೌನ್ ಬಳಿಕ ಬಹುತೇಕ ಆನ್‌ಲೈನ್ ಕಲಾಪಕ್ಕೆ ಸೀಮಿತಗೊಂಡಿದ್ದ ಹೈಕೋರ್ಟ್‌ನಲ್ಲಿ ಇಂದಿನಿಂದ ಫಿಸಿಕಲ್ ಕಲಾಪಗಳು ಎಂದಿನಂತೆ ನಡೆಯಲಿವೆ.

ಪ್ರಕಟಣೆ
ಪ್ರಕಟಣೆ

ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ನಿನ್ನೆ ಪ್ರಕಟಣೆ ಹೊರಡಿಸಿದ್ದಾರೆ. ಅದರಲ್ಲಿ, ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಎಸ್ಒಪಿ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. ಕೆಲಸದ ದಿನಗಳಂದು ಹೈಕೋರ್ಟ್ ನ ಎಲ್ಲಾ ಪೀಠಗಳಲ್ಲಿ ವಕೀಲರು ಬೆಳಗ್ಗೆ 10:30 ರಿಂದ ಸಂಜೆ 4:00ರವರೆಗೆ ಭಾಗವಹಿಸಬಹುದು.

ಆದರೆ, ಕೋರ್ಟ್ ಆವರಣದಲ್ಲಿ ವಕೀಲರಿಗೆ ಹಾಕಿರುವ ಕುರ್ಚಿಗಳಲ್ಲಿ ಅರ್ಧದಷ್ಟನ್ನು ತೆಗೆಯಬೇಕು. ಆಗ ಕೋರ್ಟ್ ಒಳಗೆ ವಕೀಲರ ದಟ್ಟಣೆ ತಗ್ಗಲಿದೆ. ಹಾಗೆಯೇ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ. ಜೊತೆಗೆ ಸುರಕ್ಷತೆ ಕಾರಣಕ್ಕಾಗಿ ಹೈಕೋರ್ಟ್ ಕಟ್ಟಡದೊಳಗೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನೋಟರಿ, ಜೆರಾಕ್ಸ್ ಹಾಗೂ ಟೈಪಿಸ್ಟ್‌ಗಳಿಗೆ ಸದ್ಯಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.