ETV Bharat / state

ಡಿಕೆಶಿ ಮನೆ ಮೇಲಿನ ದಾಳಿ ಖಂಡಿಸಿ ನಡೆಸುವ ಪ್ರತಿಭಟನೆ ಹಾಸ್ಯಾಸ್ಪದ.. ಕ್ಯಾ.ಗಣೇಶ್ ಕಾರ್ಣಿಕ್

2017ರಲ್ಲಿ ಡಿ ಕೆ ಶಿವಕುಮಾರ್ ಅವರ ಮೇಲೆ ಇಡಿ ನಡೆಸಿದ ದಾಳಿಯ ಮುಂದುವರಿದ ಭಾಗವಾಗಿ ಈ ದಾಳಿ ನಡೆಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತನಿಖೆ ನಡೆಸಲು ಈ ಸಂಸ್ಥೆಗಳಿಗೆ ನೀಡಿದ ಸ್ವಾಯತ್ತತೆಯನ್ನು ಬಿಜೆಪಿ ಗೌರವಿಸುತ್ತದೆ..

Ganesh karnik
Ganesh karnik
author img

By

Published : Oct 5, 2020, 4:49 PM IST

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿ ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಅರ್ಥಹೀನ ಮತ್ತು ಹಾಸ್ಯಾಸ್ಪದ ಎಂದು ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆಗಳು (ಐಟಿ) ಸ್ವಾಯತ್ತ ಸಂಸ್ಥೆಗಳಾಗಿವೆ. ಹಣಕಾಸು ಕ್ಷೇತ್ರದ ಮೋಸ ಮತ್ತು ಕ್ರಿಮಿನಲ್ ಹಿನ್ನೆಲೆ ವ್ಯಕ್ತಿಗಳ ವಿರುದ್ಧ ಕಾರ್ಯಾಚರಣೆ ಮತ್ತು ವಿಚಾರಣೆ ನಡೆಸಲು ಅವರು ಸ್ವತಂತ್ರರಾಗಿದ್ದಾರೆ. ಈ ಇಲಾಖೆಗಳು ತಮ್ಮ ತನಿಖೆ ಕೆಲಸವನ್ನು ಮುಂದುವರಿಸುತ್ತವೆ.

2017ರಲ್ಲಿ ಡಿ ಕೆ ಶಿವಕುಮಾರ್ ಅವರ ಮೇಲೆ ಇಡಿ ನಡೆಸಿದ ದಾಳಿಯ ಮುಂದುವರಿದ ಭಾಗವಾಗಿ ಈ ದಾಳಿ ನಡೆಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತನಿಖೆ ನಡೆಸಲು ಈ ಸಂಸ್ಥೆಗಳಿಗೆ ನೀಡಿದ ಸ್ವಾಯತ್ತತೆಯನ್ನು ಬಿಜೆಪಿ ಗೌರವಿಸುತ್ತದೆ. ದಾಳಿಯ ವಿರುದ್ಧ ರಾಜಕೀಯ ಪ್ರೇರಿತ ಕಾರಣಗಳಿಗಾಗಿ ಪ್ರತಿಭಟನೆ ನಡೆಸಲಾಗುತ್ತದೆ. ಇದು ಅರ್ಥಹೀನ ಮತ್ತು ಹಾಸ್ಯಾಸ್ಪದ.

ಕೇಂದ್ರ ಮತ್ತು ರಾಜ್ಯದಲ್ಲಿ ಸುದೀರ್ಘ ಕಾಲ ಅಧಿಕಾರದಲ್ಲಿದ್ದ ಪಕ್ಷದ ಮುಖಂಡರು ಈ ಸಂಸ್ಥೆಗಳ ಕಾರ್ಯ ನಿರ್ವಹಣೆ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದಿರಬೇಕಿತ್ತು ಎಂದು ಗಣೇಶ್ ಕಾರ್ಣಿಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.