ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎಂಟು ಮಂದಿಗೆ ಕೊರೊನಾ ದೃಢಪಟ್ಟಿದ್ದು, ಆರು ಮಂದಿ ಗುಣಮುಖರಾಗಿದ್ದಾರೆ.
8 ಜನ ಸೋಂಕಿತರ ಪೈಕಿ ನಾಲ್ಕು ಮಂದಿ ರೋಗಿ-8318 ಪ್ರಾಥಮಿಕ ಸಂಪರ್ಕವುಳ್ಳವರಾಗಿದ್ದು, ಇಬ್ಬರು ತೀವ್ರ ಉಸಿರಾಟದ ತೊಂದರೆ, ಒಬ್ಬರು ಐಎಲ್ಐ ಮತ್ತು ಒಬ್ಬರು ಕುವೈತ್‌ನಿಂದ ಬಂದವರಾಗಿದ್ದಾರೆ. ಎಂಟು ಮಂದಿಯಲ್ಲಿ ನಾಲ್ಕು ಮಹಿಳೆಯರು ನಾಲ್ಕು ಪುರುಷರಿದ್ದಾರೆ.
ದ.ಕ ಜಿಲ್ಲೆಯಲ್ಲಿ ಈವರೆಗೆ 453 ಪ್ರಕರಣ ಪತ್ತೆಯಾಗಿವೆ. 256 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 9 ಮಂದಿ ಸಾವನ್ನಪ್ಪಿದ್ದು, 188 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 286 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.