ಧಾರವಾಡ: ತಾಲೂಕಿನ ಮುಗದ ಗ್ರಾಮದಲ್ಲಿ ಪೊಲೀಸ್ ಇಲಾಖೆ ಹೊಂದಿದ್ದ ಒಂದು ಎಕರೆ ಜಾಗದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಸರ್ವೆ ಮಾಡಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
1970 ರ ದಶಕದಲ್ಲಿ ಈ ಗ್ರಾಮದಲ್ಲಿ ಒಂದು ಪೊಲೀಸ್ ಠಾಣೆ ಇತ್ತು. ಪಿಎಸ್ಐ ಸೇರಿದಂತೆ 12 ಜನ ಪೊಲೀಸ್ ಸಿಬ್ಬಂದಿ ಕ್ವಾರ್ಟರ್ಸ್ನಲ್ಲಿ ವಾಸ ಮಾಡುತ್ತಿದ್ದರು.
ಆದರೆ ಈಗ ಆ 1 ಎಕರೆ ಜಾಗ ಕಳೆದ 15 ವರ್ಷಗಳಲ್ಲಿ ಸಾಕಷ್ಟು ಅತಿಕ್ರಮವಾಗಿದೆ. ಪೊಲೀಸ್ ಇಲಾಖೆಗೆ ಸೇರಿದ ಆ ಜಾಗದಲ್ಲಿ ಅನೇಕರು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಆ ಜಾಗದ ಕುರಿತು ಸರ್ವೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಎಸ್ಪಿ ಕಟಿಯಾರ್ ತಿಳಿಸಿದರು.
ಅತಿಕ್ರಮಣ ಜಾಗೆಯಲ್ಲಿ ಪಂಚಾಯತಿ ವತಿಯಿಂದ ಮನೆ ನಿರ್ಮಿಸಿಕೊಂಡಿದ್ದಾರೆ. ಅವರ ಮನೆಗಳನ್ನು ತೆರವುಗೊಳಿಸಿದರೆ ಸಮಸ್ಯೆಯಾಗುತ್ತದೆ. ಆ ಜಾಗದ ಪಕ್ಕದಲ್ಲೇ ಇನ್ನೊಂದು ಎಕರೆ ಜಾಗವಿದ್ದು, ಅದನ್ನೇ ಪೊಲೀಸ್ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಜಾಗ ಅತಿಕ್ರಮಣ; ಸರ್ವೆ ಮಾಡಿಸಿದ ಎಸ್ಪಿ ವರ್ತಿಕಾ ಕಟಿಯಾರ್ - Dharwad police department
ಮುಗದ ಗ್ರಾಮದಲ್ಲಿ ಪೊಲೀಸ್ ಇಲಾಖೆ ಹೊಂದಿದ್ದ ಒಂದು ಎಕರೆ ಜಾಗದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸರ್ವೆ ಮಾಡಿಸಲು ಮುಂದಾಗಿದ್ದಾರೆ.