ಬೆಂಗಳೂರು: ಕೋವಿಡ್ ಸಂಕಷ್ಟದಲ್ಲಿಯೂ ದಿನನಿತ್ಯ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ವೇತನದ ಜೊತೆಗೆ ಹತ್ತು ಸಾವಿರ ರೂ. ಹೆಚ್ಚುವರಿಯಾಗಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.
ನಿನ್ನೆ ಬಾಣಸವಾಡಿ ವಾರ್ಡ್ ನಂ-27 ರಲ್ಲಿ ಸುಶೀಲಮ್ಮ ಎಂಬ ಪೌರಕಾರ್ಮಿಕ ಮಹಿಳೆ ಕುಸಿದುಬಿದ್ದು ಕೋವಿಡ್ಗೆ ಬಲಿಯಾಗಿದ್ದರು. ಈ ಹಿನ್ನೆಲೆ ವಾರ್ಡ್-27 ರ ಪೌರಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪೌರಕಾರ್ಮಿಕರು, ದಿನ ಬೆಳಗೆದ್ದು ನಗರದ ಬೀದಿಗಳನ್ನು ಸ್ವಚ್ಛವಾಗಿಡುವ, ಪೌರಕಾರ್ಮಿಕರಿಗೆ ಓಡಾಡಲು ಬಸ್ ವ್ಯವಸ್ಥೆ ಇಲ್ಲದೆ, ಕೆಲಸದ ಸ್ಥಳಕ್ಕೆ ಬರಲು, ಹೋಗಲು ಪರದಾಡುವಂತಾಗಿದೆ. ನಡೆದುಕೊಂಡೇ ಕೆಲಸಕ್ಕೆ ಬಂದರೂ ನೀರು, ಊಟ, ಶೌಚಾಲಯದ ವ್ಯವಸ್ಥೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸುಶೀಲಮ್ಮ ಎಂಬ ಪೌರಕಾರ್ಮಿಕ ಮಹಿಳೆಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ನಮ್ಮ ನಮ್ಮ ಮನೆಗಳಲ್ಲೂ ಕುಟುಂಬಸ್ಥರಿದ್ದು, ನಮ್ಮ ಕೆಲಸಕ್ಕೇ ಭೀತಿ ಪಡುವಂತಾಗಿದೆ. ಹೀಗಾಗಿ ವೇತನದ ಜೊತೆ ಹೆಚ್ಚುವರಿ ಹತ್ತು ಸಾವಿರ ರೂ. ಕೊಡುವಂತೆ ಮಂಗಳಮ್ಮ ಮನವಿ ಮಾಡಿದರು.
ಕೋವಿಡ್ ಸಮಯದಲ್ಲಿಯೂ ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಸ್ವಚ್ಛತಾ ಕೆಲಸ ಮಾಡ್ತಿದೇವೆ. ಕೊರೊನಾ ಬಂದು ಎಲ್ಲರೂ ಮೃತಪಡುತ್ತಿದ್ದರೂ, ನಾವು ಕೆಲಸ ಮಾಡ್ತಿದೇವೆ. ಹೀಗಾಗಿ ಹೆಚ್ಚುವರಿ ಹತ್ತು ಸಾವಿರ ಹಣ ಕೊಡಬೇಕೆಂದು ಪೌರಕಾರ್ಮಿಕರು ಒತ್ತಾಯಿಸಿದರು.
ಕೋವಿಡ್ನಲ್ಲೂ ಡ್ಯೂಟಿ: 10 ಸಾವಿರ ರೂ. ಹೆಚ್ಚುವರಿ ಸಂಬಳ ನೀಡುವಂತೆ ಪೌರಕಾರ್ಮಿಕರ ಆಗ್ರಹ - civilian workers problem
ದಿನ ಬೆಳಗೆದ್ದು ನಗರದ ಬೀದಿಗಳನ್ನು ಸ್ವಚ್ಛವಾಗಿಡುವ, ಪೌರಕಾರ್ಮಿಕರಿಗೆ ಓಡಾಡಲು ಬಸ್ ವ್ಯವಸ್ಥೆ ಇಲ್ಲದೆ, ಕೆಲಸದ ಸ್ಥಳಕ್ಕೆ ಬರಲು, ಹೋಗಲು ಪರದಾಡುವಂತಾಗಿದೆ. ನಡೆದುಕೊಂಡೇ ಕೆಲಸಕ್ಕೆ ಬಂದರೂ ನೀರು, ಊಟ, ಶೌಚಾಲಯದ ವ್ಯವಸ್ಥೆಯೂ ಇಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.