ಬೆಂಗಳೂರು: ಜುಲೈ 22ರಂದು ಚಂದ್ರಯಾನ-2 ಯಶಸ್ವಿ ಉಡಾವಣೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭೂಮಿಯ ಸುಳ್ಳು ಫೋಟೊಗಳು ಸಾಕಷ್ಟು ವೈರಲ್ ಆಗಿವೆ.
ಇತ್ತೀಚಿಗಿನ ಮಾಹಿತಿಯಂತೆ ಚಂದ್ರಯಾನ-2 ಭೂಮಿಯ ಎರಡು ಕಕ್ಷೆ ಸುತ್ತಿ ಮೂರನೇ ಕಕ್ಷೆಗೆ ಕಾಲಿಟ್ಟಿದೆ. ಇಸ್ರೋ ಪ್ರಕಾರ ಯಾವುದೇ ಫೋಟೊವನ್ನು ಬಾಹುಬಲಿ ಕಳಿಸಿಲ್ಲ. ಇಷ್ಟಾದರೂ ಸಹ ಫೇಸ್ಬುಕ್, ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ನಾಲ್ಕು ಫೋಟೊಗಳನ್ನು ಚಂದ್ರಯಾನ-2 ಕಳಿಸಿದೆ ಎಂಬ ವದಂತಿಗಳು ಹರಿದಾಡುತ್ತಿವೆ.