ಬೆಂಗಳೂರು: ಬ್ರ್ಯಾಂಡೆಡ್ ಬಟ್ಟೆಗಳೆಂದು ನಂಬಿಸಿ ಗ್ರಾಹಕರಿಗೆ ನಕಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಸಿಸಿಬಿ ಆರ್ಥಿಕ ದಳದ ಪೊಲೀಸರು ದಾಳಿ ನಡೆಸಿ ಮಾಲೀಕನನ್ನು ಬಂಧಿಸಿದ್ದಾರೆ.
ವೈಟ್ ಫೀಲ್ಡ್ನ ಹಗದೂರು ಬಳಿ ರೆಡ್ ಕೋರ್ಟ್ ಶಾಪ್ ಮಾಲೀಕ ಅವಿನಾಶ್ ಬಂಧಿತ ಆರೋಪಿ. ಈತನಿಂದ 25 ಲಕ್ಷ ರೂ. ಮೌಲ್ಯದ 1,100 ನಕಲಿ ಬಟ್ಟೆ ಜಪ್ತಿ ಮಾಡಿಕೊಳ್ಳಲಾಗಿದೆ.
ಹಲವು ವರ್ಷಗಳಿಂದ ಬಟ್ಟೆ ಮಾರಾಟ ಮಾಡುತ್ತಿದ್ದ ಅವಿನಾಶ್, ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಬಟ್ಟೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಎನ್ನಲಾಗಿದೆ. ವಿಷಯ ತಿಳಿದ ಸಿಸಿಬಿ ಪೊಲೀಸರು, ಅಂಗಡಿ ಮೇಲೆ ದಾಳಿ ನಡೆಸಿ ಕಾಪಿ ರೈಟ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಬಟ್ಟೆ ಮಾರಾಟ: ಸಿಸಿಬಿ ಬಲೆಗೆ ಬಿದ್ದ ಅಂಗಡಿ ಮಾಲೀಕ - Ccb ride
ಮಹಾನಗದಲ್ಲಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು, ಕಾಪಿ ರೈಟ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.