ETV Bharat / state

ದಾವಣಗೆರೆ: ಈಜಲು ಹೋಗಿ ಸಹೋದರರು ನೀರುಪಾಲು - ಕೆರೆಯಲ್ಲಿ ಮುಳುಗಿದ ಬಾಲಕರು

ಈಜಲು ಹೋದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

drown
drown
author img

By

Published : Nov 7, 2021, 6:41 PM IST

Updated : Nov 8, 2021, 1:45 PM IST

ದಾವಣಗೆರೆ: ಈಜಲು ಹೋಗಿ ಇಬ್ಬರು ಸಹೋದರರು ನೀರುಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆಯಲ್ಲಿ ಜರುಗಿದೆ.

ವಿಜಯ ಕುಮಾರ್ ಮತ್ತು ಪವಿತ್ರ ದಂಪತಿಯ ಪುತ್ರ ನವೀನ್(13) ಹಾಗೂ ಕುಮಾರ್ ಮತ್ತು ಕವಿತಾ ದಂಪತಿಯ ಪುತ್ರ ಮಂಜುನಾಥ್ (13) ಸಾವನ್ನಪ್ಪಿದವರು.

ಇಬ್ಬರು ಬಾಲಕರು ಅಣ್ಣತಮ್ಮಂದಿರ ಮಕ್ಕಳಾಗಿದ್ದು, ಐದಾರು ಯುವಕರ ಜೊತೆ ಕೆರೆಗೆ ಈಜಲು ತೆರಳಿದ್ದಾಗ ಅವಘಡ ಸಂಭವಿಸಿತು. ನೀರಿಗಿಳಿದ ಬಾಲಕರು ಈಜು ಬಾರದೇ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಚಾರ ತಿಳಿದು ಚನ್ನಗಿರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕರ ಶವಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದು ಪೋಷಕರಿಗೆ ಹಸ್ತಾಂತರಿಸಿದರು.

Video: ಹೈದರಾಬಾದ್​​ನಲ್ಲಿ ಧಾರಾಕಾರ ಮಳೆ... ಕೊಚ್ಚಿಹೋದ ಸಾಫ್ಟವೇರ್ ಇಂಜಿನೀಯರ್

Last Updated : Nov 8, 2021, 1:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.