ETV Bharat / state

ರಸ್ತೆ ಗುಂಡಿಯಲ್ಲಿ ಬಾಳೆಗಿಡ ನೆಟ್ಟು ಅವ್ಯವಸ್ಥೆಯ ವಿರುದ್ಧ ವಿನೂತನ ಪ್ರತಿಭಟನೆ - Chikkamagalore district news

ಕುವೆಂಪು ನಗರಕ್ಕೆ ಹೋಗುವ ರಸ್ತೆಯಲ್ಲಿ ಹತ್ತಾರು ಗುಂಡಿಗಳಿದ್ದು, ಮಳೆಗಾಲದಲ್ಲಿ ಕೆಸರು ತುಂಬಿ ಸಂಚಾರ ಮಾಡುವುದೇ ಕಷ್ಟಕರವಾಗಿದೆ. ಬಣಕಲ್-ಗುಡ್ಡಟ್ಟಿ ರಸ್ತೆ, ಕುವೆಂಪು ನಗರದ ಬಳಿ ಸಂಪೂರ್ಣ ಕಿತ್ತುಹೋಗಿದ್ದು, ರಸ್ತೆ ಮಧ್ಯೆಯ ಸೇತುವೆಗೆ ತಡೆಗೋಡೆಯೂ ಇಲ್ಲದಂತಾಗಿದೆ.

ರಸ್ತೆ ಗುಂಡಿಯಲ್ಲಿ ಬಾಳೆಗಿಡ ನೆಟ್ಟು ಅವ್ಯವಸ್ಥೆಯ ವಿರುದ್ಧ ವಿನೂತನ ಪ್ರತಿಭಟನೆ

author img

By

Published : Jun 16, 2020, 3:30 PM IST

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಕುವೆಂಪು ನಗರದ ನಿವಾಸಿಗಳು ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ರಸ್ತೆ ಗುಂಡಿಯಲ್ಲಿ ಬಾಳೆಗಿಡ ನೆಟ್ಟು ಅವ್ಯವಸ್ಥೆಯ ವಿರುದ್ಧ ವಿನೂತನ ಪ್ರತಿಭಟನೆ
ಕುವೆಂಪು ನಗರ ನಿವಾಸಿಗಳ ಪ್ರತಿಭಟನೆ
ಕುವೆಂಪು ನಗರಕ್ಕೆ ಹೋಗುವ ರಸ್ತೆಯಲ್ಲಿ ಹತ್ತಾರು ಗುಂಡಿಗಳಿವೆ. ಮಳೆಗಾಲದಲ್ಲಿ ಕೆಸರು ತುಂಬಿ ಸಂಚಾರ ಮಾಡುವುದೇ ಕಷ್ಟಕರವಾಗಿದೆ. ಬಣಕಲ್-ಗುಡ್ಡಟ್ಟಿ ರಸ್ತೆ, ಕುವೆಂಪು ನಗರದ ಬಳಿ ಸಂಪೂರ್ಣ ಕಿತ್ತು ಹೋಗಿದೆ. ರಸ್ತೆ ಮಧ್ಯೆಯ ಸೇತುವೆಗೆ ತಡೆಗೋಡೆಯೂ ಇಲ್ಲದಂತಾಗಿದೆ. ದಿನನಿತ್ಯ ಈ ಮಾರ್ಗವಾಗಿ ನೂರಾರು ವಾಹನಗಳು ಓಡಾಡುತ್ತವೆ. ಗುಂಡಿ ತಪ್ಪಿಸಲು ಹೋಗಿ ರಸ್ತೆ ಮಧ್ಯೆ ಬಿದ್ದ ನಿದರ್ಶನಗಳೂ ಇಲ್ಲುಂಟು.
ಜನರೂ ಕೂಡ ಇದೇ ರಸ್ತೆಯಲ್ಲಿ ಓಡಾಡಬೇಕಾಗಿದೆ. ರಸ್ತೆ ದುರಸ್ಥಿ ಕಡೆ ಜನಪ್ರತಿನಿಧಿಗಳಾಗಲಿ ಹಾಗೂ ಅಧಿಕಾರಿಗಳಾಗಲಿ ಚಿತ್ತ ಹರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೆ ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.