ಶಿವಮೊಗ್ಗ: ರೈಲ್ವೆ ಹಳಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಕೋಡಿಹಳ್ಳಿ ಬಳಿ ನಡೆದಿದೆ.
ಅಪರಿಚಿತ ಯುವಕನೊಬ್ಬ ರೈಲ್ವೆ ಕಂಬಿಯ ಮೇಲೆಯೇ ತಲೆ ಇಟ್ಟು ಮಲಗಿದ್ದಾನೆ. ಈ ವೇಳೆ ರೈಲು ಚಲಿಸಿದ ಪರಿಣಾಮ ದೇಹ ಮತ್ತು ತಲೆ ಬೇರೆ ಬೇರೆಯಾಗಿವೆ. ತಲೆ ಹಳಿಯಿಂದ ಆಚೆ ಬಿದ್ದಿದೆ.
ಓದಿ:ಶಿವಮೊಗ್ಗದ ಗಾಂಧಿ ಬಜಾರ್‌ನ ಮಳಿಗೆಯಲ್ಲಿ ಅಗ್ನಿ ಅವಘಡ
ಸ್ಥಳಕ್ಕೆ ರೈಲ್ವೆ ಪಿಎಸ್ಐ ಶ್ರೀಮತಿ ಇಂದಿರಾ, ಎಎಸ್ಐ ಜಾನ್ ಕುರಿಯಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.